ಶಿರಸಿ: ಲೋಕಸಭೆ ಚುನಾವಣೆ ಸನಿಹಕ್ಕೆ ಬರುತ್ತಿರುವಂತೆ ಬಿಜೆಪಿ ಸಂಘಟನೆಯತ್ತ ಲಕ್ಷ್ಯ ವಹಿಸಿದೆ. ಪಕ್ಷದ ನೂತನ ಅಧ್ಯಕ್ಷ ಎನ್.ಎಸ್.ಹೆಗಡೆ ಕರ್ಕಿ ಅವರು ಪದಾಧಿಕಾರಿಗಳ ನೇಮಕಾತಿಯಲ್ಲಿ ನಿರತರಾಗಿದ್ದಾರೆ. ಈಗಾಗಲೇ ಜಿಲ್ಲೆಯ ಎಲ್ಲ‌ ಮಂಡಲಗಳಿಗೆ ಅಧ್ಯಕ್ಷ ಮತ್ತು ತಲಾ ಇಬ್ಬರು ಪ್ರಧಾನ ಕಾರ್ಯದರ್ಶಿಗಳನ್ನು ನೇಮಕ‌ಮಾಡಿದ್ದಾರೆ.ಇದರ ಬೆನ್ನಲ್ಲೇ ಜಿಲ್ಲಾ ಬಿಜೆಪಿಗೆ 26 ವಿಶೇಷ ಆಹ್ವಾನಿತರನ್ನು ನೇಮಕ ಮಾಡಿದ್ದಾರೆ.

ಇದನ್ನೂ ಓದಿ: ಉತ್ತರ ಕನ್ನಡ ಜಿಲ್ಲೆಯ ಮಂಡಲಗಳ ಅಧ್ಯಕ್ಷ, ಪ್ರ.ಕಾರ್ಯದರ್ಶಿಗಳ ನೇಮಕ

ಪಟ್ಟಿಯಲ್ಲಿ ಹೊನ್ನಾವರ, ಕುಮಟಾ, ಸಿದ್ದಾಪುರ ತಾಲೂಕುಗಳಿಗೆ ಸಿಂಹಪಾಲು ಲಭಿಸಿದ್ದು, ತಲಾ ನಾಲ್ವರು ನೇಮಕಗೊಂಡಿದ್ದಾರೆ. ಉಳಿದಂತೆ ಯಲ್ಲಾಪುರದ ಮೂವರು, ಕಾರವಾರ, ದಾಂಡೇಲಿ ಮತ್ತು ಹಳಿಯಾಳದ ತಲಾ ಇಬ್ಬರು, ಭಟ್ಕಳ, ಅಂಕೋಲಾ, ಜೋಯಿಡಾ, ಶಿರಸಿ ಮತ್ತು ಮುಂಡಗೋಡಿನ ತಲಾ ಓರ್ವ ಆಹ್ವಾನಿತರಾಗಿದ್ದಾರೆ.

ಇದನ್ನೂ ಓದಿ:  ಭಟ್ಕಳ ಬಿಜೆಪಿಯ ನೂತನ ಸಾರಥಿಗಳು ಇವರು

ಅವರ ಹೆಸರುಗಳು ಇಂತಿವೆ:
ಭಟ್ಕಳ- ರವಿ ನಾಯ್ಕ ಜಾಲಿ; ಹೊನ್ನಾವರ- ದೀಪಕ ನಾಯ್ಕ ಮಂಕಿ, ರಾಜೇಶ ಭಂಡಾರಿ, ಶಿವಾನಂದ ಹೆಗಡೆ, ಜಿ ಜಿ ಶಂಕರ; ಕುಮಟಾ- ಹೇಮಂತಕುಮಾರ ಗಾಂವಕರ, ಅಶೋಕ ಪ್ರಭು, ನಾಗರಾಜ ನಾಯ್ಕ ತೊರ್ಕೆ, ಗಜಾನನ ಪೈ; ಅಂಕೋಲಾ- ಸಂಜಯ ನಾಯ್ಕ; ಕಾರವಾರ- ವಕೀಲ ನಾಗರಾಜ ನಾಯಕ, ನಯನಾ ನಿಲಾವರ; ಜೊಯಿಡಾ- ದೀಪಕ್ ದೇಸಾಯಿ; ದಾಂಡೇಲಿ- ಸುಧಾಕರ ರೆಡ್ಡಿ, ಶಾರದಾ ಪರಶುರಾಮ; ಹಳಿಯಾಳ- ಮಂಗೇಶ ದೇಶಪಾಂಡೆ, ಅನಿಲ್ ಮುತ್ನಾಳೆ; ಯಲ್ಲಾಪುರ- ಉಮೇಶ ಭಾಗ್ವತ, ಗೋಪಾಲಕೃಷ್ಣ ಗಾಂವಕರ, ರಾಮು ನಾಯ್ಕ; ಮುಂಡಗೋಡ- ತುಕಾರಾಮ ಇಂಗಳೆ, ಶಿರಸಿ- ರಾಜೇಶ ಶೆಟ್ಟಿ; ಸಿದ್ದಾಪುರ- ಶಶಿಭೂಷಣ ಹೆಗಡೆ, ಗುರುರಾಜ ಶಾನಭಾಗ, ನಾಗರಾಜ ನಾಯ್ಕ ಬೇಡ್ಕಣಿ, ಕೃಷ್ಣಮೂರ್ತಿ ಮಡಿವಾಳ.

ಇದನ್ನೂ ನೋಡಿ: https://fb.watch/qhE6A3Logz/?mibextid=Nif5oz