ಕುಮಟಾ: ಹಾಂಕಾಂಗ್ನಲ್ಲಿ ನಡೆದಿರುವ ಪವರ್ ಲಿಫ್ಟಿಂಗ್ ಏಷ್ಯನ್ ಚಾಂಪಿಯನಶಿಪ್ನಲ್ಲಿ ಕುಮಟಾದ ರಾಜೇಶ ಮಡಿವಾಳ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ.
ಇಲ್ಲಿನ ಅಗ್ನಿಶಾಮಕ ಠಾಣೆಯ ಸಿಬ್ಬಂದಿಯಾಗಿರುವ ರಾಜೇಶ ಮಡಿವಾಳ ಈ ಹಿಂದೆ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಪದಕ ಗೆದ್ದುಕೊಂಡಿದ್ದರು.
ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಈಗ ಇವರು ಹಾಂಕಾಂಗ್ನಲ್ಲಿ ನಡೆದ ಪವರ್ ಲಿಫ್ಟಿಂಗ್ ಏಷ್ಯನ್ ಚಾಂಪಿಯನಶಿಪ್ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿ ಪವರ್ ಲಿಫ್ಟಿಂಗ್ನ ವಿವಿಧ ವಿಭಾಗಗಳಲ್ಲಿ ಒಟ್ಟೂ ೬೬೦ ಕೆ.ಜಿ ಭಾರ ಎತ್ತಿ ಬೆಳ್ಳಿ ಪದಕ ಗೆದ್ದಿದ್ದಾರೆ. ಆ ಮೂಲಕ ಭಾರತ ದೇಶದ, ಕರ್ನಾಟಕ, ಉತ್ತರಕನ್ನಡ ಹಾಗೂ ಕುಮಟಾದ ಕೀರ್ತಿಯನ್ನು ಅಂತರಾಷ್ಟ್ರೀಯ ಕ್ರೀಡೆಯಲ್ಲಿ ಎತ್ತಿ ಹಿಡಿದಿದ್ದಾರೆ.
ಇದನ್ನೂ ಓದಿ : ಜೂನ್ ೨೯ರಿಂದ ಪುನರ್ ಪ್ರತಿಷ್ಠಾ ಸುವರ್ಣ ಮಹೋತ್ಸವ
ಕುಮಟಾದಲ್ಲಿರುವ ಪ್ರಭು ಪಿಟ್ನೆಸ್ನ ಮಾಲಕರು ಹಾಗೂ ತರಬೇತುದಾರ ಅಂತರಾಷ್ಟ್ರೀಯ ಸ್ಪರ್ಧೆಯಲ್ಲಿ ಪದಕ ವಿಜೇತ ವಿಕ್ರಮ ಪ್ರಭು ಅವರು ರಾಜೇಶ ಮಡಿವಾಳ ಅವರ ತರಬೇತುದಾರರಾಗಿದ್ದಾರೆ.