ಕುಮಟಾ: ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ನಿಂದದ ಮಹಾತ್ಮ ಗಾಂಧಿ ಪ್ರೌಢಶಾಲೆಯಲ್ಲಿ ಪರಿಶಿಷ್ಟ ಜಾತಿಯ ಅತ್ಯಂತ ಗರಿಷ್ಠ ಅಂಕ ಪಡೆದ 8,9 ಮತ್ತು 10ನೇ ವರ್ಗದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು.

ವಿದ್ಯಾರ್ಥಿನಿಯರಾದ ಅಂಜನಾ ಮುಕ್ರಿ, ಸ್ವಾತಿ ಹುಲಸ್ವಾರ ಹಾಗೂ ಎಚ್ ಪಿ ಶ್ರೀರಕ್ಷಾ ಈ ಪುರಸ್ಕಾರಕ್ಕೆ ಭಾಜನರಾಗಿದ್ದು, ತಲಾ 5000 ರೂ. ನಗದು ಬಹುಮಾನವನ್ನು ಪಡೆದರು. ಬ್ಯಾಂಕಿನ ವ್ಯವಸ್ಥಾಪಕಿ ಶಿಲ್ಪಾ ಮಹಾಲೆ ಹಾಗೂ ಸಿಬ್ಬಂದಿಯ ಉಪಸ್ಥಿತಿಯಲ್ಲಿ ನೆರವೇರಿದ ಈ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯಾಧ್ಯಾಪಕ ಪಾಂಡುರಂಗ ವಾಗ್ರೇಕರ್, ಸಿಬ್ಬಂದಿ ಹಾಗೂ ಪಾಲಕರು ಧನ್ಯವಾದ ಸಲ್ಲಿಸಿ, ಬ್ಯಾಂಕ್ ಇನ್ನಷ್ಟು ಅಭಿವೃದ್ಧಿ ಹೊಂದಲಿ ಎಂದು ಹಾರೈಸಿದರು.

ಇದನ್ನೂ ಓದಿ: ಗಂಟಲಲ್ಲಿದ್ದ ಮೀನು ತೆಗೆದು 11 ತಿಂಗಳ ಮಗುವಿನ ಪ್ರಾಣ ಉಳಿಸಿದ ಸರ್ಜಿ ಆಸ್ಪತ್ರೆಯ ವೈದ್ಯರು