ಕುಮಟಾ: ಪಟ್ಟಣದ ನೆಲ್ಲಿಕೇರಿಯ ಕೌಶಿಕ್ ಶೆಟ್ಟಿ ಕಳೆದ ಮೇ ತಿಂಗಳಿನಲ್ಲಿ ನಡೆದಿದ್ದ ಸಿ.ಎ.(ಚಾರ್ಟರ್ಡ್ ಅಕೌಂಟಂಟ್) ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಗಾಯಿತ್ರಿ ಮತ್ತು ಭೈರವೇಶ್ವರ ರಾಮ ಶೆಟ್ಟಿ ಇವರ ಪುತ್ರರಾಗಿರುವ ಕೌಶಿಕ್ ಶೆಟ್ಟಿ ಬಾಲ್ಯದಿಂದಲೂ ಪ್ರತಿಭಾವಂತ ವಿದ್ಯಾರ್ಥಿ. ನೆಲ್ಲಿಕೇರಿಯಲ್ಲಿರುವ ಶಾಸಕರ ಸರಕಾರಿ ಮಾದರಿ ಕನ್ನಡ ಮಾಧ್ಯಮ ಶಾಲೆ (ಈಗಿನ ಕರ್ನಾಟಕ ಪಬ್ಲಿಕ್ ಸ್ಕೂಲ್)ಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದಿದ್ದರು. ಪ್ರೌಢ ಶಿಕ್ಷಣ ಮತ್ತು ಪದವಿ ತರಗತಿಗಳನ್ನು ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಪೂರೈಸಿದ್ದರು.
ಇದನ್ನೂ ಓದಿ : ಸಿ.ಎ. ಪರೀಕ್ಷೆಯಲ್ಲಿ ಕಲ್ಪನಾ ಮಾಸ್ತಿ ಮೊಗೇರ ಉತ್ತೀರ್ಣ
ಪ್ರಥಮ ಪ್ರಯತ್ನದಲ್ಲಿಯೇ ಉತ್ತಮ ಶ್ರೇಯಾಂಕದೊಂದಿಗೆ ಸಿ.ಎ. ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಕೌಶಿಕ್ ಶೆಟ್ಟಿಯ ಸಾಧನೆ ಮೆಚ್ಚಿ ಪಾಲಕರು, ಗುರುವೃಂದದವರು, ಹಿತೈಷಿಗಳು ಅಭಿನಂದಿಸಿ ಶುಭ ಕೋರಿದ್ದಾರೆ.
ಇದನ್ನೂ ಓದಿ : ಎರಡು ಬೈಕುಗಳ ನಡುವೆ ಡಿಕ್ಕಿ, ಇಬ್ಬರಿಗೆ ಗಾಯ