ಭಟ್ಕಳ : ಸಚಿನ್ ಮಹಾಲೆ ನಮಗೆಲ್ಲ ಒಬ್ಬ ಸಹಾಯಕನಾಗಿದ್ದ. ಒಬ್ಬ ಸ್ನೇಹಿತನಾಗಿ ನಮ್ಮೆಲ್ಲ ಚಟುವಟಿಕೆಯ ಕೇಂದ್ರ ಬಿಂದು ಆಗಿದ್ದ. ಆದರೆ ದೇವರ ಇಚ್ಛೆ ಈಗ ಆತ ನಮ್ಮೆಲ್ಲರನ್ನು ಅಗಲಿದ್ದಾನೆ. ಆತನ ಆತ್ಮಕ್ಕೆ ಶಾಂತಿಸಿಗಲಿ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು  ಇಲ್ಲಿ ಒತ್ತಿ.

ಅವರು ಬಿಜೆಪಿ ಭಟ್ಕಳ ಮಂಡಲದಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.  ಉತ್ತರ ಕನ್ನಡ ಜಿಲ್ಲೆಯ ನೂತನ ಸಂಸದರಾಗಿ ಆಯ್ಕೆಯಾದ  ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಅಭಿನಂದನಾ ಕಾರ್ಯಕ್ರಮವು ಇಲ್ಲಿನ ಆಸರಕೇರಿ ನಿಚ್ಚಲಮಕ್ಕಿ ತಿರುಮಲ ವೆಂಕಟರಮಣ ದೇವಸ್ಥಾನ ಸಭಾಭವನದಲ್ಲಿ ನಡೆಯಿತು. ಈ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಕೆಲ ದಿನಗಳ ಹಿಂದಷ್ಟೇ ಸಾವನ್ನಪ್ಪಿದ್ದ ಬಿಜೆಪಿ ಕಾರ್ಯಕರ್ತ ಸಚಿನ್ ಮಹಾಲೆ ಅವರನ್ನು ನೆನೆಪಿಸಿಕೊಂಡು. ಇದೇ ಸಂದರ್ಭದಲ್ಲಿ ಭಟ್ಕಳ ತಾಲೂಕಿನಲ್ಲಿ ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸಿದ ಡಾ.ಚಿತ್ತರಂಜನ್, ತಿಮ್ಮಪ್ಪ ನಾಯ್ಕ ಹಾಗೂ ಹಿರಿಯ ಮುಖಂಡರನ್ನು ನೆನಪು ಮಾಡಿಕೊಂಡರು.

ಇದನ್ನೂ ಓದಿ :‘ಮನೆಗೊಂದು ಗಿಡ’ ಅಭಿಯಾನಕ್ಕೆ ಚಾಲನೆ

ನಮ್ಮ ರಾಜ್ಯದಲ್ಲಿ ಪ್ರಕೃತಿಯ ವಿಕೋಪದಿಂದಾಗಿ ಅತಿವೃಷ್ಟಿ ಆಗುತ್ತಿರುವುದನ್ನು ನಾವೆಲ್ಲ ಕಾಣುತಿದ್ದೇವೆ. ಇದರಿಂದ ಅನೇಕ ತೊಂದರೆಗಳಾಗಿವೆ. ಮನೆಗಳಿಗೆ ನೀರು ನುಗ್ಗಿದೆ. ಅನೇಕ ಮನೆಗಳು ಕುಸಿದು ಬಿದ್ದಿವೆ ಎಂದರು.

ಇದನ್ನೂ ಓದಿ : ಸೊಳ್ಳೆ ಉತ್ಪತ್ತಿ ಕೇಂದ್ರವಾಗಿರುವ ಬಸ್ ನಿಲ್ದಾಣದ ಶೌಚಾಲಯ

ಇಂದಿನ ಅಭಿನಂದನಾ ಕಾರ್ಯಕ್ರಮ ಜಿಜ್ಞಾಸೆಯ ವಿಷಯವಾಗಿದೆ. ಒಬ್ಬ ಜನಪ್ರತಿನಿಧಿಯಾಗಿ ಆಯ್ಕೆಯಾದಾಗ ನೀವು ನನಗೆ ಅಭಿನಂದಿಸುವುದು ಸಹಜ. ಆದರೆ ನೀವು ಅಭಿನಂದಿಸುವುದರ ಜೊತೆ ಜೊತೆಯಲ್ಲಿ ನಾನು ಕೃತಜ್ಞತೆ ಹೇಳಬೇಕಾಗುವುದು ನನ್ನ ಬಹಳ ದೊಡ್ಡ ಜವಾಬ್ದಾರಿ ಹಾಗೂ ನನ್ನ ಕರ್ತವ್ಯವಾಗಿದೆ. ಯಾವ ಮತದಾರರು ರಾಜ್ಯದಲ್ಲಿಯೇ ಅತಿ ಹೆಚ್ಚು ಮತವನ್ನು ನೀಡಿ ನಮ್ಮ ಕ್ಷೇತ್ರದಿಂದ ಆಯ್ಕೆ ಮಾಡಿದ್ದಾರೋ ಆ ಮತದಾರರಿಗೆ ನಾವೆಲ್ಲ ಸೇರಿಕೊಂಡು ಅಭಿನಂದನೆ ಸಲ್ಲಿಸಬೇಕು ಎಂದರು.

ಇದನ್ನೂ ಓದಿ :ತುಂಬಿ ತುಳುಕುತ್ತಿದೆ ಭಟ್ಕಳದ ಭೀಮಾನದಿಯ ಕಡವಿನಕಟ್ಟೆ ಜಲಾಶಯ

ನಾನು ಅಭಿಮಾನದಿಂದ ಹೇಳುತ್ತೇನೆ. ಕಾಂಗ್ರೆಸ್ ಪಕ್ಷ ನೇರವಾಗಿ ಸ್ಪರ್ಧೆ ಮಾಡಿದಾಗ ನಾವು ಅತಿ ಹೆಚ್ಚು ಮತ ಪಡೆದ ಮೊಟ್ಟ ಮೊದಲ ಲೋಕಸಭಾ ಚುನಾವಣೆ ಇದಾಗಿದೆ. ಕಾಂಗ್ರೆಸ್ ಎದುರಿಗೆ ನಿಜವಾದ ಬಿಜೆಪಿ ಶಕ್ತಿ ಏನು ಎನ್ನುವುದನ್ನು ಈ ಚುನಾವಣೆಯಲ್ಲಿ ತೋರಿಸಿದ್ದೇವೆ ಎಂದರು.

ಇದನ್ನೂ ಓದಿ : ನಾರಾಯಣ ಗುರು ವಸತಿ ಶಾಲೆಯಲ್ಲಿ ಶಾಲಾ ಸಂಸತ್ ಚುನಾವಣೆ

ಉತ್ತರ ಕನ್ನಡ ಲೋಕಸಭಾ ಚುನಾವಣೆಯ ಸಂಚಾಲಕ ಗೋವಿಂದ ನಾಯ್ಕ ಮಾತನಾಡಿ, ೨೦೧೯ರಲ್ಲಿ ದಕ್ಷಿಣ ಭಾರತದಲ್ಲಿ ಅತೀ ಹೆಚ್ಚು ಬಹುಮತ ಪಡೆದ ಕ್ಷೇತ್ರವಾಗಿತ್ತು. ನಿರಂತರವಾಗಿ ೬ ಬಾರಿ ಲೋಕಸಭಾ ಕ್ಷೇತ್ರವನ್ನು ಈ ದೇಶಕ್ಕಾಗಿ ಕೊಟ್ಟಂತಹ ಕ್ಷೇತ್ರ ನಮ್ಮದು. ಆದರೆ ಈ ಬಾರಿಯ ಚುನಾವಣೆಯಲ್ಲಿ ಟಿಕೆಟ್ ಬದಲಾವಣೆಯಾದ ವೇಳೆ ನಮಲ್ಲಿ ಏನೋ ಆತಂಕವಿತ್ತು. ಆದ್ರೆ ಕಾರ್ಯಕರ್ತರ ಪರಿಶ್ರಮ ಮತ್ತು ಮತದಾರರಿಂದ ಮತ್ತೊಮ್ಮೆಈ ಉತ್ತರ ಕನ್ನಡ ಕ್ಷೇತ್ರವನ್ನು ಕರ್ನಾಟಕದ ೨೮ ಲೋಕಸಭಾ ಕ್ಷೇತ್ರಕ್ಕೆ ಅತಿ ಹೆಚ್ಚು ಮತವನ್ನು ಕೊಟ್ಟು ಆಯ್ಕೆ ಮಾಡಿದ್ದಾರೆ. ನಾವೆಲ್ಲ ಕಾರ್ಯಕರ್ತರು ಒಮ್ಮತದಿಂದ ಚುನಾವಣೆ ಎದುರಿಸಿದರೆ ಗೆಲುವು ಸಾಧ್ಯ ಎನ್ನುವದು ಈ ಲೋಕಸಭಾ ಚುನಾವಣೆಯಲ್ಲಿ ಎಲ್ಲಾ ಕಾರ್ಯಕರ್ತ ಬಂಧುಗಳು ನಮಗೆ ತೋರಿಸಿಕೊಟ್ಟಿದ್ದಾರೆ ಎಂದರು.

ಇದನ್ನೂ ಓದಿ : ದೇವಸ್ಥಾನದಲ್ಲಿ ದೈವತ್ವಕ್ಕೆ ಹೆಚ್ಚಿನ ಮಹತ್ವ : ಪರ್ತಗಾಳಿ ಜೀವೋತ್ತಮ ಮಠಾಧೀಶ

ವಿಶ್ವೇಶ್ವರ ಹೆಗಡೆ ಕಾಗೇರಿ 6 ಬಾರಿ ಶಾಸಕರಾಗಿ ಶಿಕ್ಷಣ ಸಚಿವರಾಗಿ ವಿಧಾನಸಭೆಯ ಸ್ಪೀಕರ್ ಆಗಿ ಇಡೀ ರಾಜ್ಯಕ್ಕೆ ಚಿರಪರಿಚತರಾಗಿದ್ದಾರೆ. ಇವರು ಈ ಬಾರಿ ನಮ್ಮ ಕ್ಷೇತ್ರದ ಲೋಕಸಭಾ ಸದಸ್ಯರಾಗಿರುವುದು ನಮಗೆಲ್ಲ ಹೆಮ್ಮೆಯ ವಿಷಯ ಎಂದು ಗೋವಿಂದ ನಾಯ್ಕ ಹೇಳಿದರು.

ಇದನ್ನೂ ಓದಿ : ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿರುವ ಜೋಗ ಜಲಪಾತ

ಕಾರ್ಯಕ್ರಮ ಉದ್ದೇಶಿಸಿ ಮಾಜಿ ಸಚಿವ ಶಿವಾನಂದ ನಾಯ್ಕ ಮಾತನಾಡಿದರು.

ಮಾಜಿ ಸಚಿವ ಶಿವಾನಂದ ನಾಯ್ಕ ಮಾತನಾಡಿ, ರಾಜ್ಯದಲ್ಲಿ ಅತಿ ಹೆಚ್ಚು ಮತಗಳ ಅಂತರದಿಂದ ವಿಶ್ವೇಶ್ವರ ಹೆಗಡೆ ಕಾಗೇರಿ ಗೆಲುವು ಸಾಧಿಸಿರುವುದು ನಮಗೆ ಹೆಮ್ಮೆ ತಂದಿದೆ. ನಮ್ಮ ಜಿಲ್ಲೆಗೆ ಮೋದಿಯವರ ಆಗಮನವಾದ ಬಳಿಕ ಬಿಜೆಪಿಗೆ ಇನ್ನಷ್ಟು ಆನೆ ಬಲ ಸಿಕ್ಕಂತಾಯಿತು. ಈ ಗೆಲುವು  ಕಾರ್ಯಕರ್ತರ ಗೆಲುವು ಹಾಗೂ ಮೋದಿಗೆ ಸಿಕ್ಕ ಗೆಲುವಾಗಿದೆ. ಈ ಚುನಾವಣೆಯನ್ನು ದಿಕ್ಸೂಚಿಯನ್ನಾಗಿಟ್ಟುಕೊಂಡು ಮುಂದಿನ ಚುನಾವಣೆಯಲ್ಲಿಯೂ ಗೆಲುವು ಸಾಧಿಸೋಣ ಎಂದರು.

ಇದನ್ನೂ ಓದಿ : ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ವಾರ್ಷಿಕೋತ್ಸವ

ಗ್ಯಾರಂಟಿ ಭಾಗ್ಯದಿಂದ ಕಾಂಗ್ರೆಸ್ ಶಾಸಕರಲ್ಲಿ ಭಿನ್ನಾಭಿಪ್ರಾಯ ಉಂಟಾಗಿದೆ. ಸದ್ಯ ರಾಜ್ಯದಲ್ಲಿ ಅಧಿಕಾರದಲ್ಲಿರುವ ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನು ಕಿತ್ತೆಸೆದು ಮುಂದಿನ ದಿನಗಳಲ್ಲಿ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರೋಣ ಎಂದು ಹೇಳಿದರು.

ಸಚಿನ್ ಮಹಾಲೆ ಕುಟುಂಬಕ್ಕೆ ಸಾಂತ್ವನ :

ಸಚಿನ್ ಮಹಾಲೆ ಅವರ ಮನೆಗೆ ಭೇಟಿ ನೀಡಿದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ.

ಇದಕ್ಕೂ ಪೂರ್ವದಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮೃತ ಬಿಜೆಪಿ ಕಾರ್ಯಕರ್ತ ಸಚಿನ್ ಮಹಾಲೆ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು. ಬಳಿಕ ಅಲ್ಲಿಂದ ನಿಚ್ಛಲಮಕ್ಕಿ ತಿರುಮಲ ವೆಂಕಟರಮಣ ದೇವಸ್ಥಾನಕ್ಕೆ ಭೇಟಿ ನೀಡಿದರು. ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ದೇವರ ಆಶೀರ್ವಾದ ಪಡೆದುಕೊಂಡರು.

ಈ ಸಂದರ್ಭದಲ್ಲಿ ಬಿಜೆಪಿ ಭಟ್ಕಳ ಮಂಡಲಾಧ್ಯಕ್ಷ ಲಕ್ಷ್ಮಿನಾರಾಯಣ ನಾಯ್ಕ, ಜಿಲ್ಲಾ ಅಧ್ಯಕ್ಷ ಎಸ್.ಎನ್.ಹೆಗಡೆ, ಮಾಜಿ ಶಾಸಕ ಸುನೀಲ ನಾಯ್ಕ,
ರಾಜ್ಯ ಒಬಿಸಿ ಮೋರ್ಚಾ ಉಪಾಧ್ಯಕ್ಷ ಈಶ್ವರ ನಾಯ್ಕ, ಭಟ್ಕಳ ಮಂಡಲ ಪ್ರಭಾರಿ ಹೇಮಂತ ಗಾಂವ್ಕರ, ಜಿಲ್ಲಾ ಕಾರ್ಯದರ್ಶಿಗಳಾದ ಶ್ರೀಕಾಂತ ನಾಯ್ಕ, ಸುಬ್ರಾಯ ದೇವಡಿಗ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಶಿವಾನಿ ಶಾಂತರಾಮ ಉಪಸ್ಥಿತರಿದ್ದರು.