ಹೊನ್ನಾವರ: ತಾಲೂಕಿನ ರಾಷ್ಟ್ರೀಯ ಹೆದ್ದಾರಿ-೬೬ರ ಹೊಸಪಟ್ಟಣ ಕ್ರಾಸ್ ಸಮೀಪ ಅಂಬುಲೆನ್ಸ್ ವಾಹನವು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.
ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಕುಮಟಾ ಕೆನರಾ ಹೆಲ್ತ್ ಕೇರ್ ನಿಂದ ಮಂಗಳೂರು ಶ್ರೀನಿವಾಸ ಆಸ್ಪತ್ರೆಗೆ ಪಾರ್ಶ್ವವಾಯು ತುತ್ತಾದ ರೋಗಿಯನ್ನು ಕರೆದುಕೊಂಡು ಹೋಗುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಅಂಬುಲೆನ್ಸ್ ವಾಹನದಲ್ಲಿ ಇದ್ದ ಪಾರ್ಶ್ವವಾಯು ಪೀಡಿತರಾದ ಕಮಲಾ ಪಟಗಾರ, ರೋಗಿಯ ಸಂಬಂಧಿಕರು ಮತ್ತು ಚಾಲಕ ಸೇರಿ ನಾಲ್ವರು ಅಂಬುಲೆನ್ಸ ವಾಹನದಲ್ಲಿದ್ದರು. ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಪಕ್ಕ ಪಲ್ಟಿಯಾಗಿದೆ. ಅದೃಷ್ಟವಶಾತ್ ದುರಂತವೊಂದು ತಪ್ಪಿದೆ.
ಇದನ್ನೂ ಓದಿ : ಜನಸ್ಪಂದನ ಕಾರ್ಯಕ್ರಮದಲ್ಲಿ ೩೬ ಅರ್ಜಿ ಸ್ವೀಕೃತ
ಅನಾರೋಗ್ಯಕ್ಕೆ ಒಳಗಾದವರು ಹಾಗೂ ರೋಗಿಯ ಸಂಬಂಧಿಕರನ್ನು ಬೇರೆ ಅಂಬುಲೆನ್ಸ್ ವಾಹನದಲ್ಲಿ ಮಂಗಳೂರಿಗೆ ಕಳುಹಿಸಲಾಗಿದೆ. ಅಂಬುಲೆನ್ಸ ಚಾಲಕನಿಗೆ ಸಣ್ಣಗಾಯವಾಗಿದೆ. ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇದನ್ನೂ ಓದಿ : ನ್ಯಾಯಬೆಲೆ ಅಂಗಡಿಯಲ್ಲಿ ಯುವಕನಿಗೆ ಕಡಿದ ನಾಗರ ಹಾವು