ಭಟ್ಕಳ : ಶ್ರೀ ಗುರು ಸುಧೀಂದ್ರ ಕಾಲೇಜಿನ ಪ್ರಾಂಶುಪಾಲ ಶ್ರೀನಾಥ್ ಶ್ರೀಧರ ಪೈ ಕೈಗೊಂಡ ಸಂಶೋಧನೆಗೆ ಭಾರತ ಡಿಸೈನ್ ಪೇಟೆಂಟ್ ಲಭಿಸಿದೆ.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ  ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು  ಇಲ್ಲಿ ಒತ್ತಿ.

೨೧ನೇ ಶತಮಾನದಲ್ಲಿ ಕಂಪ್ಯೂಟರ್ ಸಾಪ್ಟವೇರ್ ಕ್ಷೇತ್ರದಲ್ಲಿ ಸರ್ವರಂತೆ ದಿವ್ಯಾಂಗ (ಅಂಧ) ವಿದ್ಯಾರ್ಥಿಗಳೂ ಸಹ ಕಂಪ್ಯೂಟರ್ ಪ್ರೋಗ್ರಾಮಿಂಗ್ ಲಾಜಿಕ್ ಅನ್ನು ಸುಲಭವಾಗಿ ಕಲಿಯಬೇಕು. ಸಾಪ್ಟವೇರ್ ಕ್ಷೇತ್ರದಲ್ಲಿ ಉದ್ಯೋಗ ಪಡೆದು ಸಾಧನೆಗೈಯಬೇಕು. ಆ ಮೂಲಕ ತಮ್ಮ ಜೀವನ ರೂಪಿಸಿಕೊಳ್ಳಬೇಕು ಎಂಬ ಉದ್ದೇಶದಿಂದ “ಟ್ಯಾಕ್ಟೈಲ್ ಬೇಸ್ಡ ಕೋಡಿಂಗ್ ಅಸ್ಸಿಸ್ಟಿವ್ ಟೂಲ್ ಫಾರ್ ಬ್ಲೈಂಡ್ ಪ್ರೋಗ್ರಾಮರ್ಸ್” ಎಂಬ ಸಾಧನವನ್ನು ಅಭಿವೃದ್ಧಿಪಡಿಸಿದ್ದಾರೆ. ಭಟ್ಕಳ ರೋಟರಿ ಕ್ಲಬ್ ನ ಕಾರ್ಯದರ್ಶಿಯಾಗಿರುವ ಶ್ರೀನಾಥ ಪೈ “ದಿವ್ಯ-ಚಕ್ಷು” ಎಂಬ ಯೋಜನೆ ಅಡಿಯಲ್ಲಿ ಅಂಧರಿಗಾಗಿ ಈಗಾಗಲೇ ಹಲವಾರು ಮಾಹಿತಿ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ಇವರ ಈ ಸಂಶೋಧನೆಗೆ ಭಾರತ ಸರ್ಕಾರದ ಐ.ಪಿ. ಪೇಟೆಂಟ್ – ಡಿಸೈನ್ ಪೇಟೆಂಟ್ ಮನ್ನಣೆ ದೊರೆತಿದೆ. ಮುಂದಿನ ೧೦ ವರ್ಷಗಳ ಅವಧಿಯವರೆಗೆ ಈ ಪೇಟೆಂಟ್ ಮಾನ್ಯತೆ ಚಾಲ್ತಿಯಲ್ಲಿರಲಿದೆ.

ಇದನ್ನೂ ಓದಿ : ಶ್ರೀರಾಮ್ ಫೈನಾನ್ಸ್ ಸಂಸ್ಥೆಯ ಮೂವರ ವಿರುದ್ದ ಪ್ರಕರಣ; ಇಬ್ಬರ ಬಂಧನ

ಭಟ್ಕಳ ಏಜುಕೇಶನ ಟ್ರಸ್ಟ್ ನ ಅಧ್ಯಕ್ಷ ಡಾ. ಸುರೇಶ ನಾಯಕ, ಸರ್ವ ಟ್ರಸ್ಟಿಗಳು, ರೋಟರಿ ಸದಸ್ಯರು ಈ ಸಾಧನೆಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.