ಭಟ್ಕಳ: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ ಶನಿವಾರ ಇಲ್ಲಿನ ನಾಮಧಾರಿ ಸಮಾಜದ ಗುರುಮಠ ದೇವಸ್ಥಾನಕ್ಕೆ ಆಗಮಿಸಿ ಶ್ರೀದೇವರ ದರ್ಶನ ಪಡೆದರು.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ  ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದ ಕೋಶಾಧ್ಯಕ್ಷರೂ ಆಗಿರುವ ಅವರು, ಸಮಾಜದ ಮುಖಂಡರನ್ನು ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಪದ್ಮರಾಜ, ಸಮಾಜದ ಪರವಾಗಿ ನಿಲ್ಲುವ ಹಾಗೂ ಅಭಿವೃದ್ಧಿಗೆ ಹೆಚ್ಚು ಒತ್ತುಕೊಡುವ ಅಭ್ಯರ್ಥಿಯನ್ನು ಲೋಕಸಭಾ ಚುನಾವಣೆಯಲ್ಲಿ ಬೆಂಬಲಿಸಬೇಕೆಂದು ಹೇಳಿದರು.

ಇದನ್ನೂ ಓದಿ : ‘ಕೈ’ ಹಿಡಿದ‌ ಇನಾಯತುಲ್ಲಾ ಶಾಬಂದ್ರಿ; ಲಾಭ – ನಷ್ಟದ ಲೆಕ್ಕಾಚಾರ

ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಅರುಣ ನಾಯ್ಕ ಹಾಗೂ ಆಡಳಿತ ಮಂಡಳಿಯ ಸದಸ್ಯರು ಪದ್ಮರಾಜ್ ಆರ್. ಅವರನ್ನು ಸ್ವಾಗತಿಸಿ ಗೌರವಿಸಿದರು. ನಾಮಧಾರಿ ಗುರುಮಠದ ಉಪಾಧ್ಯಕ್ಷ ಎಂ.ಕೆ.ನಾಯ್ಕ, ಕಾರ್ಯದರ್ಶಿ ಡಿ.ಎಲ್. ನಾಯ್ಕ, ಗೌರವಾಧ್ಯಕ್ಷ ಕೃಷ್ಣ ನಾಯ್ಕ, ಸದಸ್ಯರಾದ ಮಹಾಬಲೇಶ್ವರ ನಾಯ್ಕ, ಪ್ರಮುಖರಾದ ಶ್ರೀಧರ ನಾಯ್ಕ, ವಿಠ್ಠಲ ನಾಯ್ಕ, ಮಂಜಪ್ಪ ನಾಯ್ಕ, ಶಿವರಾಮ ನಾಯ್ಕ, ಗಣಪತಿ ನಾಯ್ಕ, ವೆಂಕಟೇಶ ನಾಯ್ಕ, ತಿರುಮಲ ನಾಯ್ಕ ಮತ್ತಿತರರು ಇದ್ದರು.