ಭಟ್ಕಳ: ಗಾಳಿ ಎಲ್ಲ ಕಡೆ ಇದ್ದರೂ ತಿರುಗುವ ಫ್ಯಾನ್ ಗಾಳಿಗೆ ಹೆಚ್ಚಿನ ಶಕ್ತಿ ಇರುವಂತೆ ದೇವಸ್ಥಾನದಲ್ಲಿ ದೈವತ್ವಕ್ಕೆ ಹೆಚ್ಚಿನ ಮಹತ್ವ ಇದೆ ಎಂದು ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಹೇಳಿದರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಅವರು ಇಲ್ಲಿನ ಶ್ರೀ ಅಳ್ವೆಕೋಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸುವರ್ಣ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ರವಿವಾರ ಸಂಜೆ ಸಭಾ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು. ಭಕ್ತರಿಗೆ ದೇವಿಯ ಅಭಯ, ಕೃಪೆ ನಿರಂತರವಾಗಿರುತ್ತದೆ. ಭಕ್ತರು ದುಗಡಕ್ಕೆ ಒಳಗಾಗದೆ ದೈವೇಚ್ಛೆಯಂತೆ ಕಾಯಬೇಕು. ಅಳ್ವೆಕೋಡಿ ದೇವಸ್ಥಾನದಲ್ಲಿ ಎಲ್ಲ ಚಟುವಟಿಕೆಗಳೂ ಶ್ರೀದೇವಿಯ ಇಚ್ಛೆಯಂತೆ ನಡೆಯುತ್ತವೆ ಎಂದರು.
ಇದನ್ನೂ ಓದಿ : ಕುಟುಂಬ ಸಹಿತ ಅಳ್ವೆಕೋಡಿಗೆ ಭೇಟಿ ನೀಡಿದ ಸಚಿವ ಮಂಕಾಳ ವೈದ್ಯ
ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಮಾತನಾಡಿ, ಅಳ್ವೆಕೋಡಿಯಲ್ಲಿ ಶ್ರೀ ದುರ್ಗಾಪರಮೇಶ್ವರಿಯ ಕೃಪೆ ಹಾಗೂ ಭಕ್ತರ ನೆರವಿನಿಂದ ಹೆಚ್ಚಿನ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಸರಕಾರದಿಂದ ಏನು ಸಾಧ್ಯವೋ ಎಲ್ಲವನ್ನೂ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಇದನ್ನೂ ಓದಿ : ‘ನಮ್ಮ ಕ್ಲಿನಿಕ್’ ಜಾಲಿಯಲ್ಲಿ ಉದ್ಘಾಟಿಸಿದ ಸಚಿವ ಮಂಕಾಳ ವೈದ್ಯ
ಶಿರಾಲಿ ಗ್ರಾಪಂ ಅಧ್ಯಕ್ಷ ಭಾಸ್ಕರ ದೈಮನೆ ಮಾತನಾಡಿದರು. ದೇವಸ್ಥಾನದ ಧರ್ಮದರ್ಶಿ ನಾರಾಯಣ ದೈಮನೆ ಸ್ವಾಗತಿಸಿದರು. ಅಳ್ವೆಕೋಡಿ ಶ್ರೀ ಮಾರಿಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ರಾಮಾ ಮೊಗೇರ, ಶ್ರೀ ದುರ್ಗಾದೇವಿ ಚಾರಿಟೇಬಲ್ ಟ್ರಸ್ಟಿನ ಅಧ್ಯಕ್ಷ ತಿಮ್ಮಪ್ಪ ಹೊನ್ನಿಮನೆ, ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಧರ್ಮದರ್ಶಿ ಹನುಮಂತ ಮಂಜಪ್ಪ ನಾಯ್ಕ, ಉದ್ಯಮಿ ಬಾಬು ಮೊಗೇರ, ಅರ್ಚಕ ಗಜಾನನ ಪುರಾಣಿಕ, ಅಳ್ವೆಕೋಡಿ ಮೀನುಗಾರಿಕಾ ಸಹಕಾರಿ ಸಂಘದ ಅಧ್ಯಕ್ಷ ವಿಠ್ಠಲ ಎಸ್. ದೈಮನೆ, ಆಸರಕೇರಿ ನಾಮಧಾರಿ ಅಭಿವೃದ್ಧಿ ಸಂಘದ ಅಧ್ಯಕ್ಷ ಅರುಣ ನಾಯ್ಕ, ಅಳ್ವೆಕೋಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಮಾಜಿ ಅಧ್ಯಕ್ಷ ನಾರಾಯಣ ಬಿ. ಮೊಗೇರ, ಅಳ್ವೆಕೋಡಿ ಶ್ರೀ ದುರ್ಗಾ ಮೊಗೇರ ಮೀನುಗಾರರ ಅಸೋಶಿಯೇಶನ್ ಅಧ್ಯಕ್ಷ ಯಾದವ ಮೊಗೇರ, ಅಳ್ವೆಕೋಡಿ ಮತ್ತು ತೆಂಗಿನಗುಂಡಿ ಪರ್ಶಿನ್ ಬೋಟ್ ಅಸೋಶಿಯೇಶನ್ ಅಧ್ಯಕ್ಷ ಜಟ್ಟಾ ಮೊಗೇರ ಮೊದಲಾದವರು ಉಪಸ್ಥಿತರಿದ್ದರು.
ಇದನ್ನೂ ಓದಿ : ರಸ್ತೆ ದುರಸ್ತಿಗೆ ಮುಂದಾದ ಸಾರ್ವಜನಿಕರು !
ಶಿಕ್ಷಕ ಶ್ರೀಧರ ಶೇಟ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸುಜೇತ ರಂಗಸ್ವಾಮಿ ಹಾಗೂ ಕೃಷ್ಣ ಮೊಗೇರ ರಚಿತ ಶ್ರೀ ದುರ್ಗಾಪರಮೇಶ್ವರಿ ಭಕ್ತಿಗೀತೆ ಧ್ವನಿ ಸುರುಳಿಯನ್ನು ಶ್ರೀಗಳು ಬಿಡುಗಡೆಗೊಳಿಸಿದರು. ದಾನಿಗಳಿಗೆ ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಇದನ್ನೂ ಓದಿ : ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿರುವ ಜೋಗ ಜಲಪಾತ
ಇದಕ್ಕೂ ಪೂರ್ವದಲ್ಲಿ ರವಿವಾರ ಬೆಳಿಗ್ಗೆ ಲಕ್ಷ ಕುಂಕುಮಾರ್ಚನೆ, ಲಲಿತಾ ಸಹಸ್ರನಾಮ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಇದನ್ನೂ ಓದಿ : ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ವಾರ್ಷಿಕೋತ್ಸವ