ಭಟ್ಕಳ : ತಾಲೂಕಿನ ಶಕ್ತಿ ದೇವತಾ ಸ್ಥಾನಗಳಲ್ಲಿ ಒಂದಾದ ಪಟ್ಟಣದ ವಿವಿ ರಸ್ತೆಯಲ್ಲಿರುವ ಶ್ರೀ ನಾಗಯಕ್ಷೆ ಮಹಾಸತಿ ಧರ್ಮದೇವಿ ಸಂಸ್ಥಾನದ ೨೦ನೇ ಪ್ರತಿಷ್ಠಾ ವರ್ಧಂತ್ಯೋತ್ಸವದ ಮೇ ೧ರಂದು ಜರುಗಲಿದೆ.
ಇದನ್ನೂ ಓದಿ : ಹಿರಿಯ ರಂಗಭೂಮಿ ಕಲಾವಿದ ಎ.ಬಿ.ಚಿತ್ರಾಪುರಗೆ ಸನ್ಮಾನ
ಅಂದು ಬೆಳಿಗ್ಗೆ ೯ ಗಂಟೆಗೆ ದೇವತಾ ಪ್ರಾರ್ಥನೆ ಮೂಲಕ ಧಾರ್ಮಿಕ ಕಾರ್ಯಕ್ರಮ ಆರಂಭವಾಗಲಿದೆ. ಮಧ್ಯಾಹ್ನ ೧೨.೩೦ಕ್ಕೆ ಪಂಚದುರ್ಗ ಹವನ ಹಾಗೂ ಹವನದ ಪೂರ್ಣಾಹುತಿ ಜರುಗುವುದು. ಮಧ್ಯಾಹ್ನ ೧ ಗಂಟೆಗೆ ಮಹಾಪೂಜೆ, ಮೈದರ್ಶನ ಇರುವುದು. ಮಧ್ಯಾಹ್ನ ೧ ರಿಂದ ೩ರವರೆಗೆ ಮಹಾ ಅನ್ನಸಂತರ್ಪಣೆ ಜರುಗಲಿದೆ.
ನೈಜ ಮತ್ತು ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳ ಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ರಾತ್ರಿ ೭ ರಿಂದ ೯ರತನಕ ಭಜನಾ ಸಂಧ್ಯಾ ಆಯೋಜಿಸಲಾಗಿದೆ. ರಾತ್ರಿ ೯.೧೫ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ಇರುವುದು.
ವರ್ಧಂತಿ ಉತ್ಸವ ನಿಮಿತ್ತ ಭಕ್ತರಿಂದ ಒಂದು ದಿನದ ಅಲಂಕಾರ, ಅನ್ನದಾನ ಸೇವೆ ನಡೆಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊ.ಸಂ. ೯೨೪೧೪೦೮೯೮೮ ಅಥವಾ ೯೩೪೩೪೧೦೭೫೭ ನ್ನು ಸಂಪರ್ಕಿಸಬಹುದಾಗಿದೆ.
ಈ ಪುಣ್ಯ ಕಾರ್ಯಕ್ಕೆ ತಾವೆಲ್ಲರೂ ಸಹಕುಟುಂಬ ಸಮೇತರಾಗಿ ಆಗಮಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗುವಂತೆ ನಾಗಯಕ್ಷೆ ಮಹಾಸತಿ ಧರ್ಮದೇವಿ ಸಂಸ್ಥಾನದ ಪ್ರಕಟಣೆಯಲ್ಲಿ ಕೋರಲಾಗಿದೆ.