ಹೊಳೆಹೊನ್ನೂರು : ಡೈಲಿ ನ್ಯೂಸ್ ಪತ್ರಿಕೆ ವರದಿಗಾರ ಹಾಗೂ ಶಿವಮೊಗ್ಗ ಜಿಲ್ಲಾ ಕಾರ್ಯನಿತ ಪತ್ರಕರ್ತರ ಸಂಘದ ಹೊಳೆಹೊನ್ನೂರು ಘಟಕದ ಉಪಾಧ್ಯಕ್ಷ ಪತ್ರಕರ್ತ ತಟ್ಟೆಹಳ್ಳಿ ರವಿಕುಮಾರ್( 35) ಹೃದಯಾಘಾತದಿಂದ ಮಂಗಳವಾರ ನಿಧನರಾಗಿದ್ದಾರೆ.

ಇದನ್ನೂ ಓದಿ :‌ ಗೂಳಿ ದಾಳಿಗೆ ಶಾಲಾ ಬಾಲಕ ಗಂಭೀರ
ತನ್ನ ಸೋದರತ್ತೆಯ ಸಾವಿಗೆಂದು ಚನ್ನಗಿರಿ ತಾಲ್ಲೂಕಿನ ಸುಣ್ಣಿಗೆರೆಗೆ ಇಂದು ಬೆಳಗಿನ ಜಾವ ಹೋಗಿದ್ದರು. ಆ ಸಂದರ್ಭದಲ್ಲಿ ಎದೆನೋವು ಕಾಣಿಸಿಕೊಂಡಿದೆ. ಯಾರಿಗೂ ತಿಳಿಸದೇ ಓಮಿನಿಯಲ್ಲಿ ಲಾಕ್ ಮಾಡಿಕೊಂಡು ಕುಳಿತುಕೊಂಡಿದ್ದಾರೆ. ಬಹಳ ಸಮಯವಾದರೂ ಯಾರಿಗೂ ಕಾಣದೆ ಇದ್ದುದರಿಂದ ಓಮಿನಿಯಲ್ಲಿ ಇರಬಹುದು ಎಂದು ಜನರು ಹೋಗಿ ನೋಡಿದ್ದಾರೆ. ಹೊರಗಿನಿಂದ ಎಷ್ಟು ಕರೆದರೂ ಎಚ್ಚರವಾಗಿಲ್ಲ. ಅನುಮಾನ ಬಂದು ಗಾಡಿಯ ಗಾಜನ್ನು ಒಡೆದು ನೋಡಿದಾಗ ಪ್ರಜ್ಞೆ ಇರಲಿಲ್ಲ. ತಕ್ಷಣ ಚನ್ನಗಿರಿಯ ಸರ್ಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದಾರೆ. ವೈದ್ಯರ ಪರೀಕ್ಷೆಯ ನಂತರ ವ್ಯಕ್ತಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ.

ಈ ವಿಡಿಯೋ ನೋಡಿ : ಈಶ್ವರಪ್ಪರನ್ನ ಬಿಜೆಪಿಯಿಂದ ಕೈಬಿಡ್ತೀರಾ?  https://fb.watch/qVdHIGpeO_/?mibextid=Nif5oz

ತಟ್ಟೆಹಳ್ಳಿ ಗ್ರಾಮದಲ್ಲಿ ಮಂಗಳವಾರದಿಂದ ಮೂರು ದಿನಗಳ ಕಾಲ ಮಾರಿ ಜಾತ್ರಾ ಮಹೋತ್ಸವವಿತ್ತು. ಸುಮಾರು 12 ವರ್ಗಗಳಿಂದ ಗ್ರಾಮದಲ್ಲಿ ಜಾತ್ರೆ ನಡೆದಿರಲಿಲ್ಲ. ಆದ ಕಾರಣ ಬಹಳ ಅದ್ದೂರಿಯಾಗಿ ಹಬ್ಬ ಆಚರಿಸಲು ಎಲ್ಲಾ ಬಂಧು ಮಿತ್ರರಿಗೂ ಆಹ್ವಾನ ನೀಡಿದ್ದರು. ಹಬ್ಬದ ಸಲುವಾಗಿ ಮನೆಯಲ್ಲಿ ನೆಂಟರೆಲ್ಲಾ ಬಂದು ಸೇರಿದ್ದರು. ವಿಧಿಯಾಟ ಅತ್ತೆಯ ಸಾವಿಗೆಂದು ಹೋದ ಅಳಿಯ ಶವವಾಗಿ ಮನೆಗೆ ಬರುವಂತಾಯಿತು.

ಗ್ರಾಮದಲ್ಲಿ ಜಾತ್ರೆ ಇರುವುದರಿಂದ ಊರಿನ ಹೊರಗಿರುವ ಅವರ ತೋಟಕ್ಕೆ ಶವವನ್ನು ತೆಗೆದುಕೊಂಡು ಹೋಗಲಾಯಿತು. ಹಬ್ಬಕ್ಕೆಂದು ಬಂದಿದ್ದ ಜನರು ಅಲ್ಲಿ ಜಮಾಯಿಸಿದ್ದರು. ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತ್ತು.
ಮೃತರ ತೋಟದಲ್ಲಿ ಸಂಜೆ ಅಂತ್ಯಸಂಸ್ಕಾರ ಮಾಡಲಾಯಿತು. ಮೃತರಿಗೆ ಪತ್ನಿ ಹಾಗೂ ಪುತ್ರಿ ಇದ್ದಾರೆ.

ಸಂತಾಪ: ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹೊಳೆಹೊನ್ನೂರು ಹೋಬಳಿ ಘಟಕ ಯುವ ಪತ್ರಕರ್ತ ರವಿಕುಮಾರ ನಿಧನಕ್ಕೆ ಸಂತಾಪ ಸೂಚಿಸಿದೆ.