ಭಟ್ಕಳ : ಪಟ್ಟಣದ ಮಣಕುಳಿಯ ರೈಲ್ವೆ ಸ್ಟೇಷನ್ ರಸ್ತೆಯಲ್ಲಿರುವ ಶ್ರೀ  ನಾಗಮಾಸ್ತಿ ಕ್ಷೇತ್ರದಲ್ಲಿ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮ ಫೆ.21 ಮತ್ತು 22ರಂದು ಜರುಗಲಿದೆ. ಈ ನಿಮಿತ್ತ ಫೆ.17ರಂದು  ಬೆಳಿಗ್ಗೆ 9.30 ರಿಂದ ನಾಗಸಂಸ್ಕಾರ ಹಮ್ಮಿಕೊಳ್ಳಲಾಗಿದೆ.

ಶ್ರೀ ಕ್ಷೇತ್ರದಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಶ್ರೀ ನಾಗಮಾಸ್ತಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸತೀಶಕುಮಾರ ನಾಯ್ಕ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು.

ಫೆ. 22ರಂದು ಬೆಳಿಗ್ಗೆ 9.47ರ ಕುಂಭ ಲಗ್ನದ ಶುಭ ಸುಮೂಹೂರ್ತದಲ್ಲಿ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮ ಜರುಗಲಿದೆ. ಅದಕ್ಕೂ ಪೂರ್ವದಿನ ಫೆ.21ರಂದು ಬೆಳಿಗ್ಗೆ 9.00 ಗಂಟೆಯಿಂದ ನೂತನ ವಿಗ್ರಹದ ಪುರ ಪ್ರದಕ್ಷಿಣೆ ನಡೆಯಲಿದೆ. ಶ್ರೀ ನಾಗಮಾಸ್ತಿ ಕ್ಷೇತ್ರದಿಂದ ಆರಂಭಿಸಿ ಮುಟ್ಟಳ್ಳಿ, ಮೂಡಭಟ್ಕಳ, ವಿ.ವಿ. ರಸ್ತೆ ಮಣ್ಕುಳಿ ಮಾರ್ಗವಾಗಿ ಸ್ವ-ಕ್ಷೇತ್ರ ತಲುಪಲಿದೆ. ನಂತರ ಆಶ್ಲೇಷಬಲಿ, ಸುದರ್ಶನ ಹೋಮ, ಪ್ರೇತ ಉಚ್ಚಾಟನೆ, ದೇವತಾ ಸಂಕೋಚ ಜರುಗಲಿದೆ ಎಂದರು.

ವಿಡಿಯೋ ನೋಡಿ: https://fb.watch/q9-7xQ3S3z/?mibextid=2JQ9oc

ಫೆ. 22ರಂದು ಬೆಳಿಗ್ಗೆ 9.30ಕ್ಕೆ ಶ್ರೀ ನಾಗಯಕ್ಷೆ ಸಂಸ್ಥಾನದಿಂದ ಶ್ರೀ ದೇವಿಯ ಬೆಳ್ಳಿಯ ಕವಚ ಸಮರ್ಪಣೆ, ಪುನರ್ ಪ್ರತಿಷ್ಠಾಪನೆ ಅಂಗವಾಗಿ ಸ್ಥಾನಶುದ್ದಿ, ಬಿಂಬಶುದ್ಧಿ, ಅಧಿವಾಸ ಪ್ರತಿಷ್ಠೆ, ಕಲಾಹೋಮ, ಕುಂಬಾಭಿಷೇಕ, ಮಹಾಪೂಜೆ, ಬ್ರಾಹ್ಮಣ ಆರಾಧನೆ ನಡೆಯಲಿದೆ. ಬೆಳಿಗ್ಗೆ 11 ಗಂಟೆಯಿಂದ ಮುಟ್ಟಳ್ಳಿಯ ಸುವಿಧ ಮಹಿಳಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ಇದ್ದು, ಮಹಾಪೂಜೆ ನಂತರ ಮಹಾಅನ್ನಸಂತರ್ಪಣೆ ನೆರವೇರಲಿದೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ಫೆ.೧೭-೧೯: ಶ್ರೀ ಕ್ಷೇತ್ರ ದೇವಿಮನೆಯಲ್ಲಿ ಬ್ರಹ್ಮಕಲಶೋತ್ಸವ, ರಥೋತ್ಸವ

ಸಂಜೆ 5 ಗಂಟೆಯಿಂದ 7ರವರೆಗೆ ಉದಯ ಪ್ರಭು ತಂಡದಿಂದ ಭಜನಾ ಕಾರ್ಯಕ್ರಮ ಆಯೋಜಿಸಲಾಗಿದೆ. ರಾತ್ರಿ 7 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮವನ್ನು ಉಸ್ತುವಾರಿ ಸಚಿವ ಮಾಂಕಾಳ ವೈದ್ಯ ಉದ್ಘಾಟಿಸಲಿದ್ದಾರೆ. ರಾತ್ರಿ 8.30ಕ್ಕೆ ಮಹಾಪೂಜೆ, ರಾತ್ರಿ 9ರಿಂದ ನೃತ್ಯ ವಿಧೂಶಿ, ನಯನ ಪ್ರಸನ್ನ ನಿರ್ದೇಶನದಲ್ಲಿ ಝೇಂಕಾರ್ ಭರತನಾಟ್ಯ ಶಾಲಾ ವಿದ್ಯಾರ್ಥಿಗಳಿಂದ ಗೆಜ್ಜೆ ನಾದ ನಾಟ್ಯ ಕಾರ್ಯಕ್ರಮ ಜರುಗಲಿದೆ ಎಂದು ಸತೀಶಕುಮಾರ ನಾಯ್ಕ ಹೇಳಿದರು.