ಕುಮಟಾ: ಅಪ್ರಾಪ್ತ ಬಾಲಕಿ ಮೇಲೆ ನಿರಂತರ ಅತ್ಯಾಚಾರ ನಡೆಸಿದಲ್ಲದೆ, ಜಾತಿನಿಂದನೆ ಮಾಡಿರುವ ಕುರಿತು ದಾಖಲಾದ ದೂರಿನ ಮೇರೆಗೆ ವ್ಯಕ್ತಿಯೋರ್ವನನ್ನು ಪೋಕ್ಸೋ ಕಾಯ್ದೆ ಅಡಿ ಇಲ್ಲಿನ ಪೋಲಿಸರು ಬಂಧಿಸಿದ್ದಾರೆ.


ತಾಲೂಕಿನ ಬಡಾಳದ ಗೋವಿಂದ ನಾಯ್ಕ(೪೮) ಬಂಧಿತ ಆರೋಪಿ. ಈಗ ಈತ ನ್ಯಾಯಾಂಗದ ಬಂಧನದಲ್ಲಿದ್ದಾನೆ. ಸದ್ರಿ ಆರೋಪಿಯು ಲೈಂಗಿಕ ಕಿರುಕಳಕ್ಕೆ ಒಳಗಾದ ಬಾಲಕಿಯ ತಂದೆಯ ಜಮೀನು ಸಾಗವಳಿ ಮಾಡುತ್ತಿದ್ದ. ಈತ ಕಳೆದ ೪ ತಿಂಗಳಿನಿಂದ ಬಲವಂತದಿಂದ ಬಾಲಕಿ ಮೇಲೆ ನಿರಂತರ ಅತ್ಯಾಚಾರ ಎಸಗಿರುವುದಾಗಿ ಆರೋಪಿಸಲಾಗಿದೆ.

ಇದನ್ನೂ ಓದಿ : ಕಸ ಎಸೆಯುವವರನ್ನು ಪತ್ತೆಹಚ್ಚಲು ಸಿಸಿಟಿವಿ ಅಳವಡಿಕೆ!

ಬಾಲಕಿಯ ಆರೋಗ್ಯದಲ್ಲಿ ಕಂಡುಬಂದ ಬದಲಾವಣೆ ಗಮನಿಸಿದ ಬಾಲಕಿಯ ತಾಯಿ ಅಸ್ಪತ್ರೆಗೆ ದಾಖಲಿಸಿದಾಗ ಈ ವಿಷಯ ಬೆಳಕಿಗೆ ಬಂತು. ಅಲ್ಲದೆ ಬಾಲಕಿಗೆ ಆರೋಪಿಯು ಜಾತಿ ನಿಂದನೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಈ ಕುರಿತು ಕುಮಟಾ ಠಾಣೆಯಲ್ಲಿ ಬಾಲಕಿಯ ಪಾಲಕರು ದೂರು ನೀಡಿದ್ದಾರೆ. ಈ ದೂರಿನ ಆಧಾರದಲ್ಲಿ ಆರೋಪಿಯನ್ನು ಪೊಲೀಸರು ಪೋಕ್ಸೋ ಕಾಯ್ದೆ ಅಡಿ ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ  ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.