ಭಟ್ಕಳ: ಬಿಜೆಪಿ ಭಟ್ಕಳ ಮಂಡಲ ವತಿಯಿಂದ ನಡೆದ ಸಂಘಟನಾತ್ಮಕ ವಿಶೇಷ ಸಭೆಯಲ್ಲಿ ಪಕ್ಷದ ರಾಜ್ಯ ಉಪಾಧ್ಯಕ್ಷೆ ರೂಪಾಲಿ ಸಂತೋಷ್ ನಾಯ್ಕ್ ಭಾಗವಹಿಸಿದ್ದರು.
ಇದನ್ನೂ ಓದಿ : ಭಾರತ್ ಅಕ್ಕಿ ಬ್ಯಾಗ್ ಖರೀದಿಗೆ ಉದ್ಧದ ಸಾಲು
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪಕ್ಷದ ಗೆಲುವು ನಮ್ಮ ಗೆಲುವು. ಅದಕ್ಕೆ ಚ್ಯುತಿ ಬರದಂತೆ ನಾವೆಲ್ಲರೂ ಕೆಲಸ ಮಾಡಬೇಕು. ಸಂಘಟನೆಯ ವಿಷಯದಲ್ಲಿ ಗೊಂದಲ ಬಗೆಹರಿಯಬೇಕು. ಆಂತರಿಕ ಗೊಂದಲಗಳು ನಿವಾರಣೆಯಾಗಬೇಕು. ವಿಡಿಯೋ ವಾಹನ, ಮೊಬೈಲ್ ಆ್ಯಪ್ಗಳ ಬಳಕೆ ಮಾಡಬೇಕು. ವಿಕಸಿತ ಭಾರತ ಕಾರ್ಯಕ್ರಮಗಳಿಂದ ಕೇಂದ್ರ ಸರ್ಕಾರದ ಯೋಜನೆ, ಸೌಲಭ್ಯಗಳ ಮಾಹಿತಿಯನ್ನು ಜನರಿಗೆ ತಲುಪಿಸಬೇಕು. ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಯಾರೇ ಆದರೂ ಅವರ ಗೆಲುವಿಗೆ ಶ್ರಮಿಸೋಣ ಎಂದರು.
ಈ ವಿಡಿಯೋ ನೋಡಿ : https://fb.watch/qptM8AJz0E/?mibextid=Nif5oz
ಭಟ್ಕಳ ಮಂಡಲ ಅಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ ಮಾತನಾಡಿ, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸೋಣ ಎಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಸುನೀಲ ನಾಯ್ಕ, ಲೋಕಸಭೆ ಚುನಾವಣಾ ಉಸ್ತುವಾರಿ ಗೋವಿಂದ ನಾಯ್ಕ, ಜಿಲ್ಲಾ ಪ್ರ,ಕಾರ್ಯದರ್ಶಿ ಪ್ರಶಾಂತ ನಾಯ್ಕ, ಶ್ರೀಕಾಂತ ನಾಯ್ಕ ಆಸರಕೇರಿ, ಬಿಜೆಪಿ ಭಟ್ಕಳ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಧರ ನಾಯ್ಕ, ಶ್ರೀನಿವಾಸ ನಾಯ್ಕ, ಮಹಿಳಾ ಮೋರ್ಚಾ ಅಧ್ಯಕ್ಷರಾದ ಸವಿತಾ ಗೌಡ, ಶಿವಾನಿ ಶಾಂತಾರಾಮ, ಶ್ರೇಯಾ ಮಹಾಲೆ ಮತ್ತಿತರರು ಉಪಸ್ಥಿತರಿದ್ದರು.