ಭಟ್ಕಳ : ಮೀನುಗಾರಿಕೆಗೆ ತೆರಳಿದ್ದ ಬೋಟಿಂದ ಸಮುದ್ರದಲ್ಲಿ ಬಿದ್ದು ಮೀನುಗಾರ ಅಸ್ವಸ್ಥಗೊಂಡ ಘಟನೆ ಬುಧವಾರ ಸಂಜೆ ನಡೆದಿದೆ. ಸಮುದ್ರಕ್ಕೆ ಬಿದ್ದು ಅಸ್ವಸ್ಥಗೊಂಡ ಮೀನುಗಾರ ಶಿರಾಲಿ ಮಾವಿನಕಟ್ಟೆಯ ಹೆದ್ದಾರಿಮನೆ ನಿವಾಸಿ ಗಿರೀಶ ಪರಮಯ್ಯ ದೇವಾಡಿಗ ಎಂದು ತಿಳಿದು ಬಂದಿದೆ.

ಇದನ್ನೂ ಓದಿ : ಭಟ್ಕಳದಲ್ಲಿ ಶಾಂತ ರೀತಿಯಿಂದ ನಡೆದ ಮತದಾನ

ಬುಧವಾರದಂದು ಅಳ್ವೆಕೋಡಿ ಬಂದರಿನಿಂದ ಜಲ ವಿಜಯ ಎಂಬ ಬೋಟ್ ಮೀನುಗಾರಿಕೆ ತೆರಳಿದ್ದ ವೇಳೆ ಸಮುದ್ರ ಮಧ್ಯ ಶಿರಾಲಿ ಕುಂದದ ಸಮೀಪ ಘಟನೆ ನಡೆದಿದೆ. ಮೀನಿಗಾಗಿ ಬಲೆ ಬೀಸಿದ ಸಂದರ್ಭದಲ್ಲಿ ಆಕಸ್ಮಿಕವಾಗಿ ಕಾಲಿಗೆ ಬಲೆ ಸಿಲುಕಿದೆ. ಈ ವೇಳೆ ಬೋಟಿಂದ ಸಮುದ್ರದಲ್ಲಿ ಬಿದ್ದು ಅಸ್ವಸ್ಥಗೊಂಡ ಗಿರೀಶ ಅವರನ್ನು ತಕ್ಷಣ ಬೋಟ್ ಮಾಲೀಕ ಹಾಗೂ ಉಳಿದ ಮೀನುಗಾರರು ಸೇರಿ ರಕ್ಷಣೆ ಮಾಡಿದ್ದಾರೆ. ಅಳ್ವೆಕೋಡಿ ಧಕ್ಕೆಗೆ ತಂದು ಅಲ್ಲಿಂದ ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಅಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ಸಾಗಿಸಲಾಗಿದೆ.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ   ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು  ಇಲ್ಲಿ ಒತ್ತಿ.