ಕಾರವಾರ : ಭಟ್ಕಳದಲ್ಲಿ ನಾಪತ್ತೆಯಾಗಿರುವ ವ್ಯಕ್ತಿಯ ಪತ್ತೆಗೆ ಸಹಕರಿಸುವಂತೆ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯ ಉಪ ನಿರೀಕ್ಷಕರು ವಿನಂತಿಸಿದ್ದಾರೆ.

ಇದನ್ನೂ ಓದಿ : ಚಿನ್ನ ಸಾಗಾಟ : ಭಟ್ಕಳ ಮೂಲದ ವ್ಯಕ್ತಿ ಬಂಧನ

೩೭ ವರ್ಷ ವಯಸ್ಸಿನ ಅಪ್ಪಾಜಿ (37) ಭಟ್ಕಳದಲ್ಲಿ  ಕಾಣೆಯಾದ ವ್ಯಕ್ತಿ. ಬಿಳಿ ಬಣ್ಣದ ಕೋಲು ಮುಖ, ತೆಳ್ಳನೆಯ ಮೈಕಟ್ಟು, ದಾಡಿ ಬಿಟ್ಟಿದ್ದು, ಎಡ ಕಣ್ಣಿನ ಹುಬ್ಬಿನ ಮೇಲೆ ಸಣ್ಣ ಗುಳ್ಳೆ ಇದೆ. ಸುಮಾರು ೫.೩ ಅಡಿ ಎತ್ತರ, ಕನ್ನಡ, ಮರಾಠಿ, ಹಿಂದಿ ಭಾಷೆ ಮಾತನಾಡುತ್ತಾರೆ. ಮರೂನ್ ಬಣ್ಣದ ನೈಟ್ ಪ್ಯಾಂಟ್, ನೀಲಿ ಬಣ್ಣದ ಟಿ ಶರ್ಟ ಧರಿಸಿದ್ದಾರೆ.

ಇದನ್ನೂ ಓದಿ : ಭಟ್ಕಳದ ಏಳು ಮೀನುಗಾರರಿಗೆ ಜಾಮೀನು

ಇವರು ಸಾರ್ವಜನಿಕರಿಗೆ ಕಂಡು ಬಂದಲ್ಲಿ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ ದೂ.ಸಂ: 08385-227333, ಪಿ.ಎಸ್.ಐ. ದೂ.ಸಂ: 9480805252, ಕಾರವಾರ ಪೊಲೀಸ್ ಕಂಟ್ರೋಲ್ ರೂಂ. ದೂ.ಸಂ: 08382-226550/112/100 ನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ವಿಡಿಯೋ ನೋಡಿ : ಮಿರ್ಚಿ ಬಜಿ, ಮಂಡಕ್ಕಿ ಸವಿದ‌ ಹ್ಯಾಟ್ರಿಕ್ ಹೀರೊ  https://fb.watch/qXYUseVU6c/?mibextid=Nif5oz