ಭಟ್ಕಳ: ಇಲ್ಲಿನ ಬಸ್‌ ನಿಲ್ದಾಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ್‌ ವೈದ್ಯ ಅವರು ಮುರುಡೇಶ್ವರ-ಭಟ್ಕಳ-ಶಿವಮೊಗ್ಗ ಮೂಲಕ ಬೆಂಗಳೂರಿಗೆ ತೆರಳುವ ಕೆಎಸ್‌ಆರ್‌ಟಿಸಿಯ 2 ಪಲ್ಲಕ್ಕಿ ಬಸ್‌ಗಳಿಗೆ ಚಾಲನೆ ನೀಡಿದರು.

ವಿಡಿಯೋ ನೋಡಿ: https://fb.watch/q28nlZQNRr/?mibextid=Nif5oz

ಪ್ರತಿದಿನ ರಾತ್ರಿ ಭಟ್ಕಳ ಬಸ್ ನಿಲ್ದಾಣದಿಂದ ಮುರುಡೇಶ್ವರಕ್ಕೆ ಹೊರಡುವ ಬಸ್ ಅಲ್ಲಿಂದ 7.15ಕ್ಕೆ ಪ್ರಯಾಣಿಕರನ್ನು ಹೊತ್ತು ಪುನಃ ಭಟ್ಕಳಕ್ಕೆ ಬಂದು ರಾತ್ರಿ 7.45 ಕ್ಕೆ ಭಟ್ಕಳದಿಂದ ಬೈಂದೂರು ಮಾರ್ಗವಾಗಿ ಕೊಲ್ಲೂರಿಗೆ ತೆರಳಲಿದೆ. ಅಲ್ಲಿಂದ ರಾತ್ರಿ 9 ಗಂಟೆಗೆ ಬೆಂಗಳೂರಿಗೆ ತೆರಳಲಿದೆ. ಇನ್ನೊಂದು ಬಸ್ ರಾತ್ರಿ 7.15ಕ್ಕೆ ಬೆಂಗಳೂರಿನಿಂದ ಹೊರಟು ಭಟ್ಕಳಕ್ಕೆ ಬರಲಿದೆ.

ಈ ವೇಳೆ ಮಾತನಾಡಿದ ಮಂಕಾಳ ವೈದ್ಯ, ಬಿಜೆಪಿ ಸರ್ಕಾರವಿದ್ದಾಗ 4 ವರ್ಷದಿಂದ ಒಂದೇ ಒಂದು ಬಸ್‌ ಬಿಡುಗಡೆಯಾಗಲಿಲ್ಲ. ಇರುವ ಬಸ್‌ಗಳನ್ನು ಎಲ್ಲಾ ಮಾರಿದ್ದಾರೆ. ಯಾವುದೂ ಬಸ್‌ ಇಲ್ಲ. ಬೆಂಗಳೂರು, ಮಂಗಳೂರು ಬಸ್‌ ಮಾತ್ರವಲ್ಲ, ಹಳ್ಳಿ ಹಳ್ಳಿಗೆ ಹೋಗುವ ಬಸ್‌ ನಿಲ್ಲಿಸಿದ್ರು. 5 ಸಾವಿರ ಬಸ್‌ಗಳನ್ನು ಆರ್ಡರ್‌ ಮಾಡಿದ್ದೇವೆ. ಆದ್ರೆ ಇನ್ನೂ ರೆಡಿಯಾಗಿ ಬಂದಿಲ್ಲ. ಭಟ್ಕಳದಲ್ಲಿ ಸಾರಿಗೆ ಸಿಬ್ಬಂದಿ ಕೊರತೆಯಿತ್ತು. ಹೊಸ ಬಸ್‌ಗಳು ಬಂದ ಹಾಗೆ ನೌಕರರನ್ನು ನೇಮಿಸಿಕೊಳ್ಳಲಾಗುವುದು. ಶಾಲಾ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಹಳ್ಳಿ ಹಳ್ಳಿಗೂ ಬಸ್‌ ಬಿಡುವ ಸೌಲಭ್ಯ ನೀಡಲಾಗುವುದು ಎಂದು ಹೇಳಿದರು.

ವಿಡಿಯೋ ನೋಡಿ: https://fb.watch/q28q8RKb-E/?mibextid=Nif5oz

ಭಟ್ಕಳದ ಬಸ್‌ ನಿಲ್ದಾಣದಲ್ಲಿ 2 ಪಲ್ಲಕ್ಕಿ ಬಸ್‌ಗಳನ್ನು ಮದುಮಗಳಂತೆ ಸಿಂಗರಿಸಲಾಗಿತ್ತು. ಈ ವೇಳೆ ಶಿರಸಿ ವಿಭಾಗ ನಿಯಂತ್ರಣಾಧಿಕಾರಿ ಶ್ರೀನಿವಾಸ್‌ ಕೆ. ಹೆಚ್, ಚಾಲಕರಾದ ಜಟ್ಟಪ್ಪ ನಾಯ್ಕ, ಮಹೇಶ್‌ ನಾಯ್ಕ, ಸಾರ್ವಜನಿಕರು, ಸಾರಿಗೆ ಸಿಬ್ಬಂದಿ ಉಪಸ್ಥಿತರಿದ್ದರು.

ಇದನ್ನೂ ಓದಿ : ಬಿಜೆಪಿಗೆ ಆಗ ಸಾವರ್ಕರ ಮೇಲೆ ಇಲ್ಲದ ಪ್ರೇಮ ಈಗ ದಿಢೀರ್ ಹೇಗೆ ಬಂತು?