ಬೆಳಗಾವಿ : ವಿವಾಹ ಮುಗಿಸಿ ವಾಪಸ್ ಆಗುವಾಗ ಕಾರು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಆರು ಜನ ಮೃತಪಟ್ಟಿರುವ ಘಟನೆ ಖಾನಾಪುರ ತಾಲೂಕಿನ ಬೀಡಿ-ಮಂಗ್ಯಾನಕೊಪ್ಪ ಬಳಿ ಗುರುವಾರ ಮಧ್ಯಾಹ್ನ ನಡೆದಿದೆ.
ಇದನ್ನೂ ಓದಿ : ಕಬ್ಬಿನ ಎಫ್ ಆರ್ ಪಿ ಹೆಚ್ಚಿಸಿದ ಕೇಂದ್ರ ಸರ್ಕಾರ
ಘಟನೆಯಲ್ಲಿ ವ್ಯಕ್ತಿಯೊಬ್ಬರಿಗೆ ಗಂಭೀರ ಗಾಯಗಳಾಗಿವೆ. ಮಕ್ಕಳು ಸಣ್ಣಪುಟ್ಟ ಗಾಯಗಳಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಎಸ್ಪಿ ಭೀಮಶಂಕರ್ ಗುಳೇದ ಸ್ಥಳಕ್ಕೆ ತೆರಳಿದ್ದಾರೆ.
ಮಹಾರಾಷ್ಟ್ರದ ಪಾಸಿಂಗ್ ಇರುವ ಸಿಫ್ಟ್ ಕಾರು ಇದಾಗಿದೆ. ಸಂಪೂರ್ಣ ಛಿದ್ರಗೊಂಡ ಮೃತ ದೇಹಗಳನ್ನು ಕಾರಿನಿಂದ ಹೊರತೆಗೆಯಲು ಪ್ರಯಾಸ ಪಡಬೇಕಾಯಿತು. ಕಾರಿನಲ್ಲಿ ಒಟ್ಟು ಹತ್ತು ಜನ ಪ್ರಯಾಣ ಬೆಳೆಸುತ್ತಿದ್ದರು ಎಂಬ ಮಾಹಿತಿ ಲಭ್ಯವಿದೆ.
ಕಾರು ಚಾಲಕ ಶಾರುಕ್ ಪೆಂಡರಿ(30), ಇಕ್ಬಾಲ್ ಜಮಾದಾರ(50), ಸಾನಿಯಾ ಲಂಗೋಟಿ(37), ಉಮ್ರಾ ಬೇಗಂ ಲಂಗೋಟಿ(17), ಶಬನಂ ಲಂಗೋಟಿ(37), ಫರಾನ್ ಲಂಗೋಟಿ(13) ಮೃತ ದುರ್ದೈವಿಗಳು. ಇನ್ನು, ಫರಾತ್ ಬೆಟಗೇರಿ(18), ಸೊಫಿಯಾ ಲಂಗೋಟಿ(22), ಸಾನಿಯಾ ಇಕ್ಬಾಲ್ ಜಮಾದಾರ(36) ಮತ್ತು ಮಾಹಿನ್ ಲಂಗೋಟಿ (7) ಗಾಯಗೊಂಡಿದ್ದಾರೆ.
ಈ ವಿಡಿಯೋ ನೋಡಿ : ವಾರದ ಸಂತೆ ಮೀರಿಸಿದ ಮಕ್ಕಳ ಸಂತೆ https://fb.watch/qm_IQq4Dwf/?mibextid=Nif5oz