ಭಟ್ಕಳ: ಇಲ್ಲಿನ ಬಂದರಿನಿಂದ 5 ನಾಟಿಕಲ್ ಮೈಲು ದೂರದ ಒಳಗೆ ಮೀನುಗಾರಿಕೆ ನಡೆಸುತ್ತಿದ್ದ ಮಲ್ಪೆ ಮೂಲದ ದೋಣಿಯನ್ನು ಬಂದರು ದಡಕ್ಕೆ ಎಳೆದು ತಂದಿಟ್ಟಿದ್ದ ಆರೋಪದ ಮೇಲೆ ಉಡುಪಿಯ ಮಲ್ಪೆ ಠಾಣೆ ಪೊಲೀಸರು ಭಟ್ಕಳದ ೭ ಮೀನುಗಾರರನ್ನು ಬಂಧಿಸಿದ್ದಾರೆ.

ಇದನ್ನೂ ಓದಿ : ವಸತಿ ರಹಿತರಿಗೆ ಮನೆ ಮಂಜೂರು : ಸತೀಸ್ ಸೈಲ್
ಭಟ್ಕಳ ಮೀನುಗಾರರಾದ ಸುಬ್ರಮಣ್ಯ ಖಾರ್ವಿ(34), ರಾಘವೇಂದ್ರ ಖಾರ್ವಿ (38), ಹರೀಶ ನಾರಾಯಣ ಖಾರ್ವಿ (40), ನಾಗೇಶ ನಾರಾಯಣ (42), ಗೋಪಾಲ ಮಾದೇವ (38), ಸಂತೋಷ ದೇವಯ್ಯ (43) ಮತ್ತು ಲಕ್ಷ್ಮಣ (50) ಬಂಧಿತರು. ನಿನ್ನೆ(ಮಾ.೧) ಸದ್ದಿಲ್ಲದೇ ಭಟ್ಕಳಕ್ಕೆ ಆಗಮಿಸಿದ ಮಲ್ಪೆ ಠಾಣೆ ಪೊಲೀಸರು 7 ಮೀನುಗಾರರನ್ನು ಬಂಧಿಸಿ ಕರೆದೊಯ್ದಿದ್ದಾರೆ.

ಏನಿದು ಪ್ರಕರಣ :
ಕೊಡವೂರಿನ ಚೇತನ ಸಾಲಿಯಾನ ಅವರ ಕೃಷ್ಣನಂದನ ಎಂಬ ದೋಣಿಯಲ್ಲಿ ನಾಗರಾಜ ಹರಿಕಾಂತ, ನಾಗರಾಜ್ ಎಚ್. ಹರಿಕಾಂತ, ಅರುಣ ಹರಿಕಾಂತ ಅಂಕೋಲ, ಅಶೋಕ ಕುಮಟಾ, ಕಾರ್ತಿಕ ಹರಿಕಾಂತ ಮಂಕಿ, ಚಂದ್ರಕಾಂತ ಹರಿಕಾಂತ ಮತ್ತು ಸುಬ್ರಮಣ್ಯ ಖಾರ್ವಿ ಎಂಬುವವರು ಆಳ ಸಮುದ್ರದಲ್ಲಿ ಮೀನುಗಾರಿಕೆ ನಡೆಸಿ ಮಲ್ಪೆಗೆ ವಾಪಾಸಾಗುತ್ತಿದ್ದರು. ಫೆ.೨೭ರಂದು ದೋಣಿಯ ಫ್ಯಾನಿಗೆ ಬಲೆ ಸಿಲುಕಿದ ಪರಿಣಾಮ ಸಮುದ್ರದಲ್ಲಿ ನಿಂತಿದ್ದಾಗ ೨೦ ಜನ ಅಪಹರಣಕಾರರು ಇನ್ನೊಂದು ದೋಣಿಯಲ್ಲಿ ಬಂದು ನಮ್ಮ ದೋಣಿಯನ್ನು ಸುತ್ತುವರೆದು ಭಟ್ಕಳ ಬಂದರು ದಡಕ್ಕೆ ಎಳೆದು ತಂದಿದ್ದಾರೆ ಎಂದು ದೋಣಿ ಮಾಲೀಕ ಉಡುಪಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೋಣಿಯಲ್ಲಿದ್ದ 8 ಲಕ್ಷ ಮೌಲ್ಯದ ಮೀನು, ದೋಣಿಗೆ ತುಂಬಿಸಿದ್ದ 5.76 ಲಕ್ಷದ ಮೌಲ್ಯದ 7500 ಲೀಟರ ಡಿಸೇಲ್ ದೋಚಿದ್ದಲ್ಲದೆ, ದೊಣಿಯಲ್ಲಿದ್ದ 7 ಮೀನುಗಾರರನ್ನು ಒತ್ತೆಯಾಳುವಾಗಿ ಇಟ್ಟಕೊಂಡಿದ್ದಾರೆ ಎಂದು ಆರೋಪಿಸಿ, ಮಲ್ಪೆ ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಿಸಿದ್ದರು.
ಪ್ರಕರಣ ತನಿಖೆ ನಡೆಸಲು ಭಟ್ಕಳ ಬಂದರಿಗೆ ಪೆ.೨೮ರಂದು ಆಗಮಿಸಿದ್ದ ಮಲ್ಪೆ ಠಾಣೆ ಪೊಲೀಸರಿಗೆ ಘೇರಾವ ಹಾಕಿದ ಸ್ಥಳೀಯ ಮೀನುಗಾರರು ಆಳ ಸಮುದ್ರ ಮೀನುಗಾರಿಕೆಯನ್ನು ಕಾನೂನು ಬಾಹಿರವಾಗಿ ನಮ್ಮ ವ್ಯಾಪ್ತಿಯಲ್ಲಿ ನಡೆಸಿದವರ ದೋಣಿಯನ್ನು ಎಳೆದು ದಡಕ್ಕೆ ತಂದು ನಿಲ್ಲಿಸಿದ್ದೇವೆ. ಅವರು ನಮ್ಮ ಆಳ ಸಮುದ್ರ ಮೀನುಗಾರಿಕೆಯನ್ನು ನಿಷೇಧಿತ ವ್ಯಾಪ್ತಿಯಲ್ಲಿ ಮಾಡುವುದಿಲ್ಲ ಎಂದು ಸ್ಪಷ್ಟನೆ ನೀಡುವ ತನಕ ದೋಣಿ ಬಿಡುವುದಿಲ್ಲ ಎಂದು ವಾದಿಸಿದ್ದರು. ಇದರಿಂದ ಎರಡು ದಿನಗಳ ಕಾಲ ಭಟ್ಕಳ ಬಂದರಿನಲ್ಲಿ ಬಿಗುವಿನ ವಾತಾವರಣ ಕೂಡ ಏರ್ಪಟ್ಟಿತ್ತು.

ಈ ವಿಡಿಯೋ ನೋಡಿ :  ಚಿರತೆ ಸೆರೆ, ಜನತೆ ನಿರಾಳ  https://fb.watch/qynPoQD2UP/?mibextid=Nif5oz