ಭಟ್ಕಳ: ಕೇಂದ್ರ ಸರ್ಕಾರದ ಅಧೀನದಲ್ಲಿರುವ ಅಸ್ಮಿತಾ ಖೇಲೋ ಇಂಡಿಯಾ ಮಹಿಳಾ ಕಿಕ್ ಬಾಕ್ಸಿಂಗ್ ಲೀಗ್ ನಲ್ಲಿ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಕಿಕ್ ಬಾಕ್ಸಿಂಗ್ ವಿದ್ಯಾರ್ಥಿನಿಯರು ಅತ್ಯುತ್ತಮ ಸಾಧನೆ ಮಾಡಿದ್ದಾರೆ.

ಮೈಸೂರಿನ ಸ್ಪೋರ್ಟ್ಸ್ ಪೆವಿಲಿಯನ್ ಯೂನಿವರ್ಸಿಟಿ ಆಫ್ ಮೈಸೂರು ಸ್ಟೇಡಿಯಂ ನಲ್ಲಿ ನಡೆದ ಅಸ್ಮಿತಾ ಖೇಲೋ ಇಂಡಿಯಾ ಮಹಿಳಾ ಕಿಕ್ ಬಾಕ್ಸಿಂಗ್ ಲೀಗ್ ನ 10 ರಿಂದ 12 ವರ್ಷ ವಯೋಮಿತಿಯ 28 ಕೆಜಿ ವಿಭಾಗದಲ್ಲಿ ಮನೀಶಾ ನಾಯ್ಕ ತೃತೀಯ, 32 ಕೆಜಿ ವಿಭಾಗದಲ್ಲಿ ಮನಾಲಿ ನಾಯ್ಕ ಪ್ರಥಮ ಮತ್ತು ಅಂಕಿತಾ ನಾಯ್ಕ ದ್ವಿತೀಯ ಸ್ಥಾನ ಪಡೆದಿದ್ದಾರೆ.
13 ರಿಂದ 15 ವರ್ಷ ವಯೋಮಿತಿಯ 37 ಕೆಜಿ ವಿಭಾಗದಲ್ಲಿ ಸಾನಿಕಾ ಮೊಗೇರ ತೃತೀಯ, 42 ಕೆಜಿ ವಿಭಾಗದಲ್ಲಿ ರಕ್ಷಿತಾ ನಾಯ್ಕ ಐದನೇ ಸ್ಥಾನ, 46 ಕೆಜಿಯ ಎರಡು ವಿಭಾಗದಲ್ಲಿ ಲಿಖಿತಾ ನಾಯ್ಕ ದ್ವಿತೀಯ ಮತ್ತು ತೃತೀಯ ಸ್ಥಾನ ಗಳಿಸಿದ್ದಾರೆ.
16 ರಿಂದ 18 ವರ್ಷ ವಯೋಮಿತಿಯ ವಿಭಾಗದಲ್ಲಿ
ಮೋನಿಕಾ ನಾಯ್ಕ ಮತ್ತು 19 ರಿಂದ 40 ವರ್ಷ ವಯೋಮಿತಿಯ ವಿಭಾಗದಲ್ಲಿ ನಾಗಶ್ರೀ ನಾಯ್ಕ ಪ್ರಥಮ ಸ್ಥಾನ ಪಡೆದುಕೊಂದಿದ್ದಾರೆ

ಈ ವಿದ್ಯಾರ್ಥಿನಿಯರ ಸಾಧನೆಗೆ ವಾಕೋ ಕರ್ನಾಟಕ ಕಿಕ್ ಬಾಕ್ಸಿಂಗ್ ಸ್ಪೋರ್ಟ್ಸ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಪೂಜಾ ಹರ್ಷ ಹಾಗೂ ರಾಷ್ಟ್ರೀಯ ಕಿಕ್ ಬಾಕ್ಸಿಂಗ್ ನ ಕೋಚ್ ಹರ್ಷ ಮತ್ತು ಉತ್ತರಕನ್ನಡ ಜಿಲ್ಲಾ ಕಿಕ್ ಬಾಕ್ಸಿಂಗ್ ಸ್ಪೋರ್ಟ್ಸ್ ಅಸೋಸಿಯೇಷನ್ ಅಧ್ಯಕ್ಷ ಈಶ್ವರ ನಾಯ್ಕ ಅಭಿನಂದಿಸಿದ್ದಾರೆ.