ಭಟ್ಕಳ: ಇಲ್ಲಿನ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಅರಣ್ಯ ಇಲಾಖೆಯಿಂದ ಒಂದು ವಾರದ ಕಾಲ ನಡೆಸಲಾಗುವ ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸಾಗರ ರಸ್ತೆಯಲ್ಲಿರುವ ಸಾಲುಮರದ ತಿಮ್ಮಕ್ಕ ಉದ್ಯಾನವನದಲ್ಲಿ ಬುಧವಾರ ಪತ್ರಕರ್ತರ ಜೊತೆಗೂಡಿ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಗಿಡ ನೆಟ್ಟರು.
ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ವನಮಹೋತ್ಸವ ಉದ್ಘಾಟಿಸಿ ಮಾತನಾಡಿದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗಿರೀಶ ಪಿ.ಎಂ., ಜುಲೈ ಮೊದಲ ವಾರದಲ್ಲಿ ಎಲ್ಲಾ ಕಡೆ ವನಮಹೋತ್ಸವ ಆಚರಿಸಲು ನಿರ್ಧರಿಸಲಾಗಿದೆ. ಶಾಲಾ, ಕಾಲೇಜು, ಆಸ್ಪತ್ರೆ ಮುಂತಾದ ಕಡೆ ಗಿಡ ನೆಡಲು ಪ್ರಥಮ ಆದ್ಯತೆ ನೀಡಲಾಗಿದೆ. ಶಾಲೆಗಳಲ್ಲಿ ಗಿಡ ನೆಟ್ಟು ಮಕ್ಕಳಿಗೆ ಪರಿಸರದ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲಾಗುವುದು. ಈ ಬಾರಿ ಪ್ರತಿಯೊಬ್ಬರೂ ತಮ್ಮ ತಾಯಿಯ ಹೆಸರಿನಲ್ಲಿ ಗಿಡ ನೆಡುವ ಧ್ಯೇಯವಾಕ್ಯದೊಂದಿಗೆ ಹಸಿರೀಕರಣದ ಶಪಥವನ್ನು ಮಾಡಲಾಗಿದೆ. ಪ್ರತಿಯೊಬ್ಬರೂ ವರ್ಷಂಪ್ರತಿ ಒಂದು ಗಿಡವಾದರೂ ನೆಟ್ಟು ಅದನ್ನು ಪೋಷಿಸುವ ಕೆಲಸ ಮಾಡಬೇಕು. ಭಟ್ಕಳ ವಲಯದ ಅರಣ್ಯ ವ್ಯಾಪ್ತಿಯಲ್ಲಿ ಒಂದು ವಾರದಲ್ಲಿ ೩ ಲಕ್ಷ ಗಿಡಗಳನ್ನು ನೆಡುವ ಗುರಿ ಹೊಂದಲಾಗಿದೆ ಎಂದರು.
ಇದನ್ನೂ ಓದಿ : ಕಾಳಜಿ ಕೇಂದ್ರಗಳಲ್ಲಿ ೨೩೦ಕ್ಕೂ ಹೆಚ್ಚು ಜನರಿಗೆ ಆಶ್ರಯ
ಪರಿಸರ ಸಂರಕ್ಷಣೆ ನಮ್ಮೆಲ್ಲರ ಆದ್ಯತೆ ಆಗಬೇಕು. ಉತ್ತಮ ವಾತಾವರಣಕ್ಕೆ ಶೇ.೩೩ ರಷ್ಟು ಹಸಿರು ಹೊದಿಕೆಯ ಅಗತ್ಯವಿದೆ. ಆದರೆ ನಾವು ಶೇ.೨೦ರಿಂದ ೨೨ರಷ್ಟು ಮಾತ್ರ ಹಸಿರು ಹೊದಿಕೆಯನ್ನು ಹೊಂದಿದ್ದೇವೆ. ವಾತಾವರಣ ಮತ್ತು ಹವಾಮಾನದ ವೈಪರೀತ್ಯ ಕಡಿಮೆ ಮಾಡಲು ಗಿಡಮರಗಳನ್ನು ಹೆಚ್ಚೆಚ್ಚು ಬೆಳೆಸುವುದು ಇಂದಿನ ಅನಿವಾರ್ಯವಾಗಿದೆ ಎಂದರು.
ಇದನ್ನೂ ಓದಿ : ಜನಸ್ನೇಹಿ ಪೊಲೀಸ್ ವ್ಯವಸ್ಥೆಗೆ ನೂತನ ಎಸ್ಪಿ ನಾರಾಯಣ ಸಂಕಲ್ಪ
ವಲಯ ಅರಣ್ಯಾಧಿಕಾರಿ ಶರತ್ ಶೆಟ್ಟಿ, ಭಟ್ಕಳ ಪತ್ರಕರ್ತರ ಕ್ಷೇಮಾಭಿವೃದ್ದಿ ಸಂಘದ ಗೌರವಾಧ್ಯಕ್ಷ ರಾಧಾಕೃಷ್ಣ ಭಟ್ಟ, ಅಧ್ಯಕ್ಷ ರಾಘವೇಂದ್ರ ಹೆಬ್ಬಾರ, ಪ್ರಧಾನ ಕಾರ್ಯದರ್ಶಿ ಮನಮೋಹನ ನಾಯ್ಕ, ಉಪಾಧ್ಯಕ್ಷರಾದ ವಿಷ್ಣು ದೇವಡಿಗ, ಎಂ.ಆರ್. ಮಾನ್ವಿ, ಖಚಾಂಚಿ ಮೋಹನ ನಾಯ್ಕ, ಸದಸ್ಯರಾದ ಸತೀಶಕುಮಾರ ನಾಯ್ಕ, ನಶೀಮುಲ್ ಘನಿ, ಫಯಾಜ್ ಮುಲ್ಲಾ, ಅರ್ಜುನ್ ಮಲ್ಯ, ಉದಯ ನಾಯ್ಕ, ಈಶ್ವರ ನಾಯ್ಕ, ಲೋಕೇಶ ನಾಯ್ಕ ಸೇರಿದಂತೆ ಪತ್ರಕರ್ತರು, ಅರಣ್ಯ ಇಲಾಖೆಯ ಸಿಬ್ಬಂದಿ ವನ ಮಹೋತ್ಸವ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಇದನ್ನೂ ಓದಿ : ಮೂರು ತಾಲೂಕುಗಳಲ್ಲಿ ಶಾಲೆ- ಕಾಲೇಜುಗಳಿಗೆ ರಜೆ