ಭಟ್ಕಳ: ಇಲ್ಲಿನ ರಂಜನ್ ಏಜೆನ್ಸಿ ವತಿಯಿಂದ ಕಳೆದ ೧೪ ವರ್ಷಗಳಿಂದ ಮಹಾ ಶಿವರಾತ್ರಿ ದಿನ ಭಟ್ಕಳದಿಂದ ಮುರುಡೇಶ್ವರ ದವರೆಗೆ ಭಕ್ತರ ಪಾದಯಾತ್ರೆಯನ್ನು ಆಯೋಜಿಸಲಾಗುತ್ತಿದ್ದು, ಈ ವರ್ಷವೂ ನಡೆಯಲಿದೆ ಎಂದು ರಂಜನ್ ಏಜನ್ಸಿ ಮಾಲಕಿ ಶಿವಾನಿ ಶಾಂತಾರಾಮ ಭಟ್ಕಳ ತಿಳಿಸಿದ್ದಾರೆ.
ಇದನ್ನೂ ಓದಿ : ಮುರುಡೇಶ್ವರ ಕ್ಷೇತ್ರದಲ್ಲಿ ಮಹಾಶಿವರಾತ್ರಿ ಆಚರಣೆ ನಿಮಿತ್ತ ಪೂರ್ವಭಾವಿ ಸಭೆ
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮಾರ್ಚ್ 8 ರಂದು ಶಿವರಾತ್ರಿಯ ದಿನ ಬೆಳಿಗ್ಗೆ ಭಟ್ಕಳ ತಾಲೂಕಿನ ಸಾವಿರಾರು ಭಕ್ತರು ಪಾದಯಾತ್ರೆ ಮಾಡಲಿದ್ದಾರೆ. ಬೆಳಿಗ್ಗೆ 4 ಗಂಟೆಗೆ ಭಟ್ಕಳದ ಚೌಳೇಶ್ವರ ದೇವಾಲಯದ ಆವರಣದಿಂದ ಪಾತ್ರೆಯಾತ್ರೆ ಹೊರಟು ಮುರುಡೇಶ್ವರಕ್ಕೆ ತಲುಪಲಾಗುವುದು. ಪಾದಯಾತ್ರಿಗಳಿಗೆ ವಾಪಾಸು ಭಟ್ಕಳಕ್ಕೆ ಬರಲು ಉಚಿತವಾಗಿ ಸರಕಾರಿ ಬಸ್ಸಿನ ವ್ಯವಸ್ಥೆ ಮಾಡಲಾಗುವುದು ಎಂದರು.
ಮುರ್ಡೇಶ್ವರದ ದೇವಾಲಯದಲ್ಲಿ ಬೆಳಿಗ್ಗೆ 4 ಗಂಟೆಯ ಒಳಗೆ ದೇವರ ದರ್ಶನ ವ್ಯವಸ್ಥೆ ಮಾಡಲು ದೇವಾಲಯದ ಆಡಳಿತ ಒಪ್ಪಿದೆ. ದರ್ಶನದ ನಂತರ ಎಲ್ಲ ಭಕ್ತಾದಿಗಳಿಗೆ ಬೆಳಗಿನ ಉಪಹಾರ ವ್ಯವಸ್ಥೆ ಕೂಡ ದೇವಾಲಯದ ಆಡಳಿತ ಮಂಡಳಿ ಮಾಡಲಿದೆ . ಈ ಪಾದಯಾತ್ರೆ ಬರುವ ದಾರಿಯಲ್ಲಿ ಹಣ್ಣು ಮತ್ತು ಪಾನೀಯ ವ್ಯವಸ್ಥೆ ಮಾಡಲಾಗುವುದು ಎಂದ ಅವರು, ಭಕ್ತರಿಗೆ ಯಾವುದೇ ಸಮಸ್ಯೆ ಆಗದ ರೀತಿಯಲ್ಲಿ ಸಕಲ ವ್ಯವಸ್ಥೆ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹಾಗೂ ದೇವಸ್ಥಾನದ ಆಡಳಿತ ಮಂಡಳಿ ಈಗಾಗಲೇ ಆಶ್ವಾಸನೆ ನೀಡಿದೆ ಎಂದರು.
ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವ ಮಹಿಳಾ ಯಾತ್ರಿಕರು ಕಡ್ಡಾಯವಾಗಿ ತಮ್ಮ ಆಧಾರ ಕಾರ್ಡನ ಜೆರಾಕ್ಸ್ ಪ್ರತಿ ತರಬೇಕೆಂದು ವಿನಂತಿಸಿದ ಅವರು, ಇಂದಿನ ಆಧುನಿಕ ಜೀವನದಲ್ಲಿ ನಾವು ನಡಿಗೆಯನ್ನು ಕಡಿಮೆ ಮಾಡಿದ್ದೇವೆ. ಎಲ್ಲಿಗೆ ಹೋಗುವದಾದರೂ ಸದಾ ವಾಹನ ಬಳಸುತ್ತಿದ್ದೇವೆ. ಕಾಲ್ನಡಿಗೆಯ ಮೂಲಕ ಭಕ್ತಿಯ ಜಾಗೃತೆಯನ್ನು ಉತ್ತೇಜಿಸುವುದಗೋಸ್ಕರ ಸತತ 14 ವರ್ಷಗಳಿಂದ ಶಿವರಾತ್ರಿಯ ದಿನದಂದು ಭಟ್ಕಳದಿಂದ 14 ಕಿ.ಮೀ ದೂರದಲ್ಲಿರುವ ಮುರ್ಡೆಶ್ವರ ಶಿವನ ದೇವಾಲಯಕ್ಕೆ ಪಾದಯಾತ್ರೆ ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಕಾಲ್ನಡಿಗೆಯ ಮೂಲಕ ಓರ್ವರೇ ತಿರುಪತಿಗೆ ಹೋಗಿ ಬಂದ ವಿನೋಧ ಭಟ್ ಅವರನ್ನು ಸಂಸ್ಥೆಯ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು. ಗುರುಕೃಪಾ ಬ್ಯಾಂಕಿನ ನಿರ್ದೇಶಕ ಕುಮಾರ ನಾಯ್ಕ, ತಿಲಕ ಯುವಕ ಸಂಘದ ಮಾಜಿ ಅಧ್ಯಕ್ಷ ಮಾಸ್ತಿ ಮೊಗೇರ, ಕಿರಣ್ ಚಂದಾವರ, ಈಶ್ವರ ನಾಯ್ಕ ಕಡವಿನಕಟ್ಟೆ ಉಪಸ್ಥಿತರಿದ್ದನಿರಾಳ.
ಈ ವಿಡಿಯೋ ನೋಡಿ : ಚಿರತೆ ಸೆರೆ, ಜನತೆ ನಿರಾಳ https://fb.watch/qypAj8orsp/?mibextid=Nif5oz