ಭಟ್ಕಳ: ರಾಜ್ಯ ಸರ್ಕಾರ ಕೊಡಮಾಡುವ ಶ್ರೇಷ್ಠ ವೈದ್ಯ ಪ್ರಶಸ್ತಿ ಪುರಸ್ಕೃತ ಭಟ್ಕಳ ಸರ್ಕಾರಿ ಆಸ್ಪತ್ರೆಯ ವೈದ್ಯ ಡಾ.ಅರುಣಕುಮಾರ ಅವರರನ್ನು ಬುಧವಾರದಂದು ವೈದ್ಯರು, ಸಿಬ್ಬಂದಿ ಹಾಗೂ ಸಾರ್ವಜನಿಕರು ಆತ್ಮೀಯವಾಗಿ ಸನ್ಮಾನಿಸಿ ಬರಮಾಡಿಕೊಂಡರು.

ಫೇಸ್‌ಬುಕ್‌ ನಲ್ಲಿ ರೀಲ್ ನೋಡಿ : ಡಾ.ಅರುಣಕುಮಾರಗೆ ಸ್ವಾಗತ

ಇನ್ಸ್ಟಾಗ್ರಾಂನಲ್ಲಿ ರೀಲ್ ನೋಡಿ : ಡಾ.ಅರುಣಕುಮಾರಗೆ ಸ್ವಾಗತ

ಈ ವೇಳೆ ಪ್ರಶಸ್ತಿ ಪುರಸ್ಕೃತ ಡಾ.ಅರುಣಕುಮಾರ  ಮಾತನಾಡಿ, ಈ ಪ್ರಶಸ್ತಿ ನನಗೆ ದೊರಕಿರುವುದು ತುಂಬಾ ಸಂತೋಷವಾಗಿದೆ. ಇದಕ್ಕೆಲ್ಲ ಮುಖ್ಯ ಕಾರಣ ನಮ್ಮ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ, ವೈದ್ಯರ ತಂಡ, ಸಿಬ್ಬಂದಿ ವರ್ಗ ಹಾಗೂ ಭಟ್ಕಳದ ಸಾರ್ವಜನಿಕರು. ಎಲ್ಲಾ ಸಮಯದಲ್ಲಿಯೂ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಸವಿತಾ ಕಾಮತ, ವೈದೃರ ತಂಡ ಹಾಗೂ ಸಿಬ್ಬಂದಿ ಬೆಂಬಲ ಇದಕ್ಕೆ ಮುಖ್ಯ ಕಾರಣವಾಗಿದೆ. ಅದೇ ರೀತಿ ನಾನು ಓಟಿಯಿಂದ ಎಷ್ಟು ತಡವಾಗಿ ಬಂದರು ಕೂಡ ಅಲ್ಲಿ ತನಕ ಕಾದು ಕುಳಿತು ಚಿಕಿತ್ಸೆ ಪಡೆದುಕೊಂಡು ಹೋಗುತ್ತಿರುವುದು ಕೂಡ ಪ್ರಶಸ್ತಿ ಲಭಿಸಲು ಒಂದು ಕಾರಣವಾಗಿದೆ ಎಂದು ತಮ್ಮ ಸಂತೋಷವನ್ನು ಹೊರಹಾಕಿದರು.

ಇದನ್ನೂ ಓದಿ : ಭಟ್ಕಳ ಮಾರಿಜಾತ್ರೆ ಜುಲೈ ೩೧ರಿಂದ ಆರಂಭ

ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಸವಿತಾ ಕಾಮತ ಮಾತನಾಡಿ, ನಮ್ಮ ಆಸ್ಪತ್ರೆಯ ವೈದ್ಯ ಡಾ. ಅರುಣರವರಿಗೆ ರಾಜ್ಯ ಪ್ರಶಸ್ತಿ ಲಭಿಸಿರುವುದು ನಮ್ಮ ಆಸ್ಪತ್ರೆಗೆ ಹೆಮ್ಮೆ ತಂದಿದೆ. ರಾಜ್ಯ ಪ್ರಶಸ್ತಿಗೆ ಬೆಲೆ ಬಂದಿರುವುದು ಡಾ. ಅರುಣ ಅವರಿಗೆ ಪ್ರಶಸ್ತಿ ಸಿಕ್ಕ ಮೇಲೆ. ಇವತ್ತು ಪ್ರಶಸ್ತಿ ಡಾ.ಅರುಣ ಅವರಿಗೆ ಸಿಕ್ಕಿದೆ ಎಂದು ಹೇಳಲು ನನಗೆ ತುಂಬಾ ಹೆಮ್ಮೆ ಇದೆ. ಅವರು ಮಾಡುವ ಕೆಲಸದಿಂದ ಅವರಿಗೆ ಈ ಪ್ರಶಸ್ತಿ ಲಭಿಸಿದೆ. ಹೀಗೆಯೇ ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಪ್ರಶಸ್ತಿಗಳು ನಿಮ್ಮನ್ನು ಅರಸಿ ಬರುವಂತಾಗಲಿ.  ನಿಮ್ಮ ಸೇವೆ ಭಟ್ಕಳ ಜನತೆಗೆ ಮತ್ತು ಸರ್ಕಾರಿ ಆಸ್ಪತ್ರೆಗೆ ಇನ್ನಷ್ಟು ಲಭಿಸಲಿ. ಎಷ್ಟೇ ಒಳ್ಳೆ ಕೆಲಸ ಮಾಡಿದರು ಕೂಡ  ಕಾಲು ಎಳೆಯುವವರು ಇದ್ದೇ ಇರುತ್ತಾರೆ. ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳದೆ ಕೈ ಹಿಡಿಯುವವರ ಬಗ್ಗೆ ಯೋಚನೆ ಮಾಡಿ. ನಿಮ್ಮ ಜನ ಸೇವೆ ಮುಂದುವರೆಸಿ ಎಂದು ಹೇಳಿದರು.

ಇದನ್ನೂ ಓದಿ : ಬಾವಿಗೆ ಹಾರಿ ಜೀವ ಬಿಟ್ಟ ಯುವತಿ

ಭಟ್ಕಳ ನಾಮಧಾರಿ ಸಮಾಜದ ಗೌರವ ಅಧ್ಯಕ್ಷ ಕೃಷ್ಣ ನಾಯ್ಮ ಆಸರಕೇರಿ ಮಾತನಾಡಿ, ಡಾ.ಅರುಣ ಅವರಿಗೆ ಪ್ರಶಸ್ತಿ ಸಿಕ್ಕಿರುವುದು ತುಂಬಾ ಹೆಮ್ಮೆಯ ಸಂಗತಿಯಾಗಿದೆ. ಅವರು ಮಾತನಾಡುವುದಕ್ಕಿಂತ ರೋಗಿಗಳ ಚಿಕಿತ್ಸೆಯಲ್ಲಿಯೇ ಹೆಚ್ಚು ಸಮಯವನ್ನು ಕಳೆಯುತ್ತಾರೆ. ಇಂದಿನ ಕಾಲದಲ್ಲಿ ಹಣ ಕೊಟ್ಟರೆ ಸಾಕು ಡಾಕ್ಟರೇಟ್ ಪ್ರಶಸ್ತಿ ಕೂಡ ಸಿಗುತ್ತದೆ. ಆದರೆ ಡಾ.ಅರುಣ ಅವರ ಪ್ರಾಮಾಣಿಕ ಸೇವೆಗೆ ಈ ಪ್ರಶಸ್ತಿ ಸಿಕ್ಕಿದೆ. ಪ್ರಾಮಾಣಿಕತನಕ್ಕೆ ಸಿಕ್ಕ ಗೌರವ ಇದಾಗಿದೆ. ಒಂದು ಸ್ಥಳದಲ್ಲಿ ಕೆಲಸ ಮಾಡಲು ಒಳ್ಳೆಯ ವಾತಾವರಣ ಮುಖ್ಯ. ಅದೇ ರೀತಿ ಈ ಸರ್ಕಾರಿ ಆಸ್ಪತ್ರೆಯಲ್ಲಿ  ಕೆಲಸ ಮಾಡಲು ಒಳ್ಳೆಯ ವಾತಾವರಣ ಕಲ್ಪಿಸಿಕೊಟ್ಟವರು ಇಲ್ಲಿನ ಆಡಳಿತ ವೈದ್ಯಾಧಿಕಾರಿ ಡಾ. ಸವಿತಾ ಕಾಮತ ಎಂದರು.

ಇದನ್ನೂ ಓದಿ : ಬಾವಿಗೆ ಹಾರಿ ಜೀವ ಬಿಟ್ಟ ಯುವತಿ

ಸಮಾಜ ಸೇವಕ ನಿಸ್ಸಾರ್ ಅಹ್ಮದ ಮಾತನಾಡಿ, ನನ್ನ ಅನುಭವದಲ್ಲಿ ಡಾ.ಅರುಣ ಅವರಂತಹ ವೈದ್ಯರನ್ನು ಎಲ್ಲಿಯೂ ನೋಡಿಲ್ಲ. ಇವರಿಗೆ ಈ ರಾಜ್ಯ ಪ್ರಶಸ್ತಿ ದೊರಕಿರುವುದು ನಮಗೆಲ್ಲ ಸಂತಸ ತಂದಿದೆ. ನಮ್ಮ ಜಿಲ್ಲೆಯಿಂದ ಭಟ್ಕಳ ತಾಲೂಕು ಆಸ್ಪತ್ರೆಯ ವೈದ್ಯರನ್ನು ಗುರುತಿಸಿ ಪ್ರಶಸ್ತಿ ನೀಡಿರುವುದು ನಮ್ಮ ತಾಲೂಕಿಗೆ ಒಂದು ಹೆಮ್ಮೆಯ ಸಂಗತಿ. ಆ ಹೆಮ್ಮೆಯನ್ನು ನಮ್ಮ ತಾಲೂಕಿಗೆ ಡಾ. ಅರುಣ ಅವರು ತಂದು ಕೊಟ್ಟಿದ್ದಾರೆ ಎಂದರು.

ಇದನ್ನೂ ಓದಿ : ಪಟ್ಟಣ ಪಂಚಾಯತ ಕಚೇರಿಗೆ ಲೋಕಾಯುಕ್ತ ಪೊಲೀಸರ ದಾಳಿ

ಈ ಸಂದರ್ಭದಲ್ಲಿ ಡಾ.ಸತೀಶ ನಾಯ್ಕ, ಡಾ.ಕಮಲ ನಾಯ್ಕ, ಡಾ. ಲಕ್ಷ್ಮಿಶ ನಾಯ್ಕ, ಡಾ.ಉಮೇಶ, ಡಾ.ಸುರಕ್ಷಿತ ಶೆಟ್ಟಿ,  ನಜೀರ್ ಕಾಸಿಂಜೀ, ಇರ್ಷಾದ್, ವಿಷ್ಣು ದೇವಾಡಿಗ, ನಾಗೇಂದ್ರ ನಾಯ್ಕ, ಆಸ್ಪತ್ರೆಯ ಸಿಬ್ಬಂದಿ ಉಪಸ್ಥಿತರಿದ್ದರು.