ಹೊನ್ನಾವರ : ತಾಲೂಕಿನ ಮಲ್ಲಾಪುರದ ಗುರುಪ್ರಸಾದ ಪ್ರೌಢಶಾಲೆಯ ಪರಿಜ್ಞಾನ ಸಭಾಭವನದಲ್ಲಿ ಸೋಲಾರ ಬೀದಿ ದೀಪ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಗುರುಪ್ರಸಾದ ಎಜ್ಯುಕೇಶನ್ ಸೊಸೈಟಿ (ರಿ.) ಹಾಗೂ ಗುರುಪ್ರಸಾದ ಪ್ರೌಢಶಾಲೆ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ನೆರವೇರಿತು.
ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಇಂಡೋಕೋ ರೆಮೇಡಿಸ್ ಲಿಮಿಟೆಡ್ ಇವರ ಸುಮತಿ ಸಂಗೋಪನಾ ವಿಭಾಗದ ಪ್ರಾಯೋಜಕತ್ವದಲ್ಲಿ ಸಿ.ಎಸ್.ಆರ್. ಫಂಡ್‌ನ್ನು ಮಣಿಪಾಲದ ಭಾರತಿ ವಿಕಾಸ ಟ್ರಸ್ಟ್ ಸಹಯೋಗದಲ್ಲಿ ಕುಮಟಾದ ಸೆಲ್ಕೋ ಸೋಲಾರ್ ಲೈಟ್ ಕಂಪನಿ ಮಲ್ಲಾಪುರ ಗ್ರಾಮದ ಬೀದಿಗಳಲ್ಲಿ, ಸ್ಮಶಾನದ ಸಮೀಪ, ಗುರುಪ್ರಸಾದ ಪ್ರೌಢಶಾಲೆ, ಮಲ್ಲಾಪುರದ ಆಟದ ಮೈದಾನ ಹೀಗೆ ಸುಮಾರು ೧೬ ಸೋಲಾರ ಬೀದಿ ದೀಪ ಅಳವಡಿಸುವುದರ ಮೂಲಕ ಮಲ್ಲಾಪುರ ಗ್ರಾಮವನ್ನು ರಾತ್ರಿ ಸಮಯದಲ್ಲಿ ಸೋಲಾರ್ ದೀಪದಿಂದ ಬೆಳಗುವಂತೆ ಮಾಡಿದ್ದಾರೆ. ಇದು ಇಲ್ಲಿ ಕಲಿಯುವ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೂ, ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೂ, ಊರನಾಗರಿಕರಿಗೂ ತುಂಬಾ ಉಪಯುಕ್ತವಾಗಿದೆ ಎಂದು ಊರ ನಾಗರಿಕರು ಹರ್ಷ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಸಾರ್ವತ್ರಿಕ ಚುನಾವಣೆಯ ಅರಿವು ಪಡೆದ ಶಾಲಾ ಮಕ್ಕಳು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅರುಣ ಎಸ್. ಉಭಯಕರ ವಹಿಸಿದ್ದರು. ಉದ್ಘಾಟಕರಾಗಿ ಸಮೀರ್ ಡೈನಿ, ಮುಖ್ಯ ಅತಿಥಿಗಳಾಗಿ ಡಾ. ದೀಪಕ ನಾಯ್ಕ, ಜಯಶ್ರೀ ಕಾಮತ್, ಜಗದೀಶ ಪೈ, ಅರವಿಂದ ಪ್ರಭು, ಬಸವರಾಜ ಕೋಲ್ಕರ್, ಗುರುಪ್ರಕಾಶ ಶೆಟ್ಟಿ, ಛಾಯಾ ಉಭಯಕರ, ರಾಜು ನಾಯ್ಕ ಆಗಮಿಸಿದ್ದರು.
ಇದನ್ನೂ ಓದಿ : ಭಟ್ಕಳ ನ್ಯಾಯಾಲಯದ ಕಟ್ಟಡಕ್ಕೆ ೧೨ ಕೋಟಿ ರೂ. : ಸಚಿವರಿಗೆ ಅಭಿನಂದನೆ
ಕಾರ್ಯಕ್ರಮದಲ್ಲಿ ಶೈಕ್ಷಣಿಕ ಸಲಹೆಗಾರ ಎಂ. ಟಿ. ಗೌಡ, ಇಂಡಿಕೋ ರೆಮಿಡಿಸ್ ಲಿಮಿಟೆಡ್‌ನ ಉದ್ಯೋಗಿಗಳು, ಸೆಲ್ಕೋ ಸೋಲಾರ ಪರಿವಾರದವರು, ಭಾರತೀಯ ವಿಕಾಸ ಟ್ರಸ್ಟ್ನ ಸಹೋದ್ಯೋಗಿಗಳು, ಗುರುಪ್ರಸಾದ ಪ್ರೌಢಶಾಲೆಯ ಎಲ್ಲಾ ಸಿಬ್ಬಂದಿ, ಶಾಲಾ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಹಾಗೂ ಊರನಾಗರಿಕರು ಉಪಸ್ಥಿತರಿದ್ದರು.
ಇದನ್ನೂ ಓದಿ : ಸಚಿನ್ ಮಹಾಲೆ ಅವರಿಗೆ ಬಿಜೆಪಿಯಿಂದ ಶ್ರದ್ಧಾಂಜಲಿ