ಭಟ್ಕಳ : ಶ್ರೀ ಸಂಸ್ಥಾನ ಕಾಶೀಮಠದ ೨೦ನೇ ಯತಿವರ್ಯರಾದ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಜನ್ಮ ಶತಾಬ್ದ ಆರಾಧನಾ ಮಹೋತ್ಸವದ ಅಂಗವಾಗಿ ಭಟ್ಕಳದ ಸ್ನೇಹಾ ವಿಶೇಷ ಮಕ್ಕಳ ಶಾಲೆಗೆ ಭಟ್ಕಳದ ಶ್ರೀ ಕಾಶೀಮಠ ವ್ಯವಸ್ಥಾಪಕ ಸಮಿತಿ ಸದಸ್ಯರು ಭೇಟಿ ನೀಡಿದರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ದಿವ್ಯಾಂಗ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿತ್ತು. ಸಮಿತಿಯ ಡಾ. ವಿಶ್ವನಾಥ ನಾಯಕ, ಬಿ.ಕೆ.ಪೈ, ಶ್ರೀಧರ ಶಾನಭಾಗ, ವೆಂಕಟೇಶ ನಾಯಕ, ಸುನೀಲ ಕಾಮತ, ಭಟ್ಕಳ ಎಜ್ಯುಕೇಶನ್ ಟ್ರಸ್ಟ್ ನ ಶ್ರೀ ಗುರು ಸುಧೀಂದ್ರ ಕಾಲೇಜಿನ ಉಪನ್ಯಾಸಕ ವೃಂದದವರು ಉಪಸ್ಥಿತರಿದ್ದರು. ಶ್ರೀ ಕಾಶೀಮಠದ ಅಧ್ಯಕ್ಷ ಸುರೇಂದ್ರ ಆನಂದ ಕಾಮತ ಈ ಕಾರ್ಯಕ್ರಮಕ್ಕೆ ಸಹಕಾರ ನೀಡಿದರು. ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಸಿಹಿಯನ್ನು ಹಂಚಲಾಯಿತು.
ಇದನ್ನೂ ಓದಿ : ಮಗಳು ನೇಣಿಗೆ ಶರಣಾಗಿದ್ದನ್ನು ನೋಡಿ ತಾಯಿಯೂ ಆತ್ಮಹತ್ಯೆ