ಕಾರವಾರ (Karwar) : ಉತ್ತರ ಕನ್ನಡ (Uttara Kannada) ಜಿಲ್ಲೆಯ ಯಲ್ಲಾಪುರ (Yallapur) ತಾಲೂಕಿನ ಕಿರವತ್ತಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೊಸಳ್ಳಿ ಗ್ರಾಮದ ರಾಮಚಂದ್ರ ಮತ್ತು ಬಮ್ಮವ್ವ ಖಿಲಾರಿ ಅವರದ್ದು ಕೂಲಿ ಕುಟುಂಬ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ (narega) ಗ್ರಾ.ಪಂ.ನಿಂದ ಕೈಗೊಳ್ಳುವ ಸಮುದಾಯ ಅಭಿವೃದ್ಧಿ ಕಾಮಗಾರಿಗಳಲ್ಲಿ ನಿರಂತರವಾಗಿ ಕೂಲಿ ಕೆಲಸ ಮಾಡಿದವರು. ನರೇಗಾ ಕೂಲಿ ಹಣದಲ್ಲಿಯೇ ಮಗ ಮಯೂರನಿಗೆ ಧಾರವಾಡದ (Dharwad) ಕರ್ನಾಟಕ ವಿಶ್ವವಿದ್ಯಾಲಯದಲ್ಲಿ (Karnataka University) ರಾಜ್ಯಶಾಸ್ತ್ರ ಸ್ನಾತಕೋತ್ತರ ಪದವಿ ವಿದ್ಯಾಭ್ಯಾಸ ಮಾಡಿಸಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಸ್ನಾತಕೋತ್ತರ ವಿದ್ಯಾರ್ಥಿ ಮಯೂರ ಕೂಡ ಕಾಲೇಜಿನ ರಜೆ ಅವಧಿಯಲ್ಲಿ ಗ್ರಾಮಕ್ಕೆ ಬಂದಾಗ ನರೇಗಾ (narega) ಕೂಲಿ ಕೆಲಸ ನಿರ್ವಹಿಸುತ್ತಿದ್ದರು. ಕಡು ಬಡತನದ ನಡುವೆಯೇ ಉತ್ತಮ ಅಧ್ಯಯನ ನಡೆಸಿ ಪ್ರಸ್ತುತ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ನಡೆದ ೭೪ನೇ ಘಟಿಕೋತ್ಸದಲ್ಲಿ (convocation) ರಾಜ್ಯಶಾಸ್ತ್ರ ವಿಭಾಗದ ಸ್ನಾತಕೋತ್ತರ ಪದವಿಯಲ್ಲಿ ಏಳು ಚಿನ್ನದ ಪದಕ (gold medals) ಪಡೆದು ಶ್ರೇಷ್ಠ ಸಾಧನೆ ಮಾಡಿದ್ದಾರೆ.

ಇದನ್ನೂ ಓದಿ :  ಮೈಸೂರು ದಸರಾಕ್ಕೆ ಜಿಲ್ಲೆಯ ನೋಡಲ್ ಅಧಿಕಾರಿ ನೇಮಕ

ಅತ್ಯಂತ ಹಿಂದುಳಿದ ಸಮುದಾಯಕ್ಕೆ ಸೇರಿದ ರಾಮಚಂದ್ರ ಖಿಲಾರಿ ಕುಟುಂಬ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಡೆಯುವ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಕೆಲಸದ ಮೇಲೆ ಅವಲಂಬಿತವಾಗಿದೆ. ೨೦೨೨ ರಿಂದ ೨೦೨೪ರ ವರೆಗೆ ನಿರಂತರವಾಗಿ ಕೂಲಿ ಕೆಲಸ ನಿರ್ವಹಿಸುತ್ತಿದೆ. ಅಲ್ಲದೇ ನರೇಗಾ ಕೂಲಿ ಹಣದಲ್ಲಿಯೇ ಮಗ ಮಯೂರನ ವಿದ್ಯಾಭ್ಯಾಸದ ಸಂಪೂರ್ಣ ವೆಚ್ಛ, ಮನೆಯ ನಿರ್ವಹಣೆ ಹೊಣೆಯನ್ನು ನಿಭಾಯಿಸಿಕೊಂಡು ಬರುತ್ತಿದೆ.

ಇದನ್ನೂ ಓದಿ : ಸೆಪ್ಟೆಂಬರ್‌ ೨೪ರಂದು ವಿವಿಧೆಡೆ ಅಡಿಕೆ ಧಾರಣೆ

೨೦೨೨-೨೩ನೇ ಸಾಲಿನಲ್ಲಿ ೭೦ ದಿನ ಕೆಲಸ ಮಾಡಿ ಒಟ್ಟು ೨೧೬೩೦ ರೂ. ಕೂಲಿ, ೨೦೨೩-೨೪ನೇ ಸಾಲಿನಲ್ಲಿ ೯೭ ದಿನ ಕೂಲಿ ಕೆಲಸ ಮಾಡಿ ಒಟ್ಟು ೩೦೬೫೨ ರೂ. ಕೂಲಿ ಹಾಗೂ ೨೦೨೪-೨೫ನೇ ಸಾಲಿನಲ್ಲಿ ಈವರೆಗೆ ೨೯ ದಿನ ಕೂಲಿ ಕೆಲಸ ಮಾಡಿ ಒಟ್ಟು ೧೦,೧೨೧ ರೂ ಕೂಲಿ ಹಣವನ್ನು ಪಡೆದುಕೊಂಡಿದೆ. ಒಟ್ಟಾರೆಯಾಗಿ ನರೇಗಾದಡಿ ಕಳೆದ ೩ ವರ್ಷದಲ್ಲಿ ೧೯೬ ದಿನ ಕೂಲಿ ಕೆಲಸ ಮಾಡಿ ಒಟ್ಟು ೬೨೪೦೩ ರೂಪಾಯಿ ಕೂಲಿ ಹಣ ಪಡೆದಿದೆ. ನರೇಗಾ ಕೂಲಿ ಕೆಲಸದಿಂದ ಗಳಿಸಿದ ಈ ಹಣವನ್ನು ಮಗ ಮಯೂರನ ಸ್ನಾತಕೋತ್ತರ ವ್ಯಾಸಂಗಕ್ಕೆ ಬಳಸಿದ್ದಾರೆ. ಅತ್ಯಂತ ಕಷ್ಟಕರ ಸಂದರ್ಭದಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆ ನೆರವಾಗಿದೆ.

ಇದನ್ನೂ ಓದಿ :  ಸಿಎಂ ಅರ್ಜಿ ವಜಾ ಬಗ್ಗೆ ಸಚಿವರ ಪ್ರತಿಕ್ರಿಯೆ

ಕಡು ಬಡತನದಲ್ಲಿಯೂ ಮಗನಿಗೆ ಧಾರವಾಡ ವಿಶ್ವವಿದ್ಯಾಲಯದಲ್ಲಿ ಓದಲು ಅನುಕೂಲ ಮಾಡಿಕೊಟ್ಟೆವು. ಮನೆಯ ಪರಿಸ್ಥಿತಿ ಅರಿತ ಮಗ ಕಾಲೇಜಿನ ರಜೆಯ ದಿನಗಳಲ್ಲಿ ಗ್ರಾಮಕ್ಕೆ ಬಂದಾಗ ಸ್ವತಃ ನರೇಗಾ ಕೂಲಿ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಿದ್ದ. ಅದಲ್ಲದೇ ಕೆಲವು ಸಂದರ್ಭಗಳಲ್ಲಿ ನಮಗೂ ಸಹಾಯಕನಾಗಿ ಕೆಲಸ ಮಾಡಿದ್ದಾನೆ. ಮಗನ ಸಾಧನೆಗೆ ಬಡತನ, ಸಿರಿತನ ಅಡ್ಡಿಯಾಗಲಿಲ್ಲ. ಸಾಧಿಸುವ ಛಲ, ಆತ್ಮಸ್ಥೈರ‍್ಯ, ಪೋಷಕರ ಬೆಂಬಲದೊಂದಿಗೆ ಉತ್ತಮವಾಗಿ ಓದಿ ಗ್ರಾಮಕ್ಕೆ ಕೀರ್ತಿ ತಂದಿರುವುದಕ್ಕೆ ತುಂಬಾ ಖುಷಿಯಾಗಿದೆ.
– ರಾಮಚಂದ್ರ ಖಿಲಾರಿ, ವಿದ್ಯಾರ್ಥಿ ತಂದೆ.

ಇದನ್ನೂ ಓದಿ : ದೇಶದ ಪ್ರಗತಿಗಾಗಿ ಬಿಜೆಪಿ ಸದಸ್ಯತ್ವ ಅಭಿಯಾನ

ಮನೆಯಲ್ಲಿ ಬಡತನ ತಾಂಡವಾಡುತ್ತಿದ್ದ ಕಾರಣಕ್ಕೆ ಮೊದಲಿಗೆ ಉನ್ನತ ಶಿಕ್ಷಣ ಪೂರೈಸುವ ಕುರಿತು ಆತಂಕ ಎದುರಾಗಿತ್ತು. ಆದರೆ ನರೇಗಾದಡಿ ಕೂಲಿ ಕೆಲಸ ಮಾಡಿ ನಿನ್ನ ಓದಿಸುತ್ತೇವೆ ಎಂಬ ಪೋಷಕರ ಬೆಂಬಲ ನನ್ನ ನೆಮ್ಮದಿಯ ಓದಿಗೆ ಉತ್ತೇಜನ ನೀಡಿತು. ನರೇಗಾದಡಿ ಸಿಗುವ ಕೂಲಿ ಕೆಲಸದಿಂದ ಪೋಷಕರು ನೆಮ್ಮದಿಯಿಂದ ಇದ್ದರು. ಹೀಗಾಗಿ ನಿರಾತಂಕವಾಗಿ ಅಭ್ಯಾಸ ಮಾಡಲು ಮಹಾತ್ಮ ಗಾಂಧಿ ನರೇಗಾ ಯೋಜನೆಯು ಆರ್ಥಿಕ ಹಾಗೂ ಮಾನಸಿಕವಾಗಿ ಧೈರ್ಯ ತುಂಬಿದರ ಪರಿಣಾಮ ಉತ್ತಮ ಸಾಧನೆ ಸಾಧ್ಯವಾಗಿದೆ.
– ಸ್ನಾತಕೋತ್ತರ ವಿದ್ಯಾರ್ಥಿ ಮಯೂರ ಖಿಲಾರಿ.

ಇದನ್ನೂ ಓದಿ : ಪೌರ ಕಾರ್ಮಿಕರ ದಿನಾಚರಣೆ

ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇಂದು ಮಂಗಳವಾರ ಜರುಗಿದ ೭೪ನೇ ಘಟಿಕೋತ್ಸವ ಸಮಾರಂಭದಲ್ಲಿ ಕರ್ನಾಟಕ ಸರಕಾರದ ಉನ್ನತ ಶಿಕ್ಷಣ ಸಚಿವ ಹಾಗೂ ಸಮ ಕುಲಾಧಿಪತಿ ಡಾ. ಎಂ.ಸಿ. ಸುಧಾಕರ ಅವರು ಖಿಲಾರಿ ಅವರಿಗೆ ಏಳು ಚಿನ್ನದ ಪದಕ ಹಾಗೂ ಅಭಿನಂದನಾ ಪತ್ರ ಪ್ರದಾನ ಮಾಡಿ ಗೌರವಿಸಿದರು. ಈ ಸಂದರ್ಭದಲ್ಲಿ ಕವಿವಿ ಕುಲಪತಿ ಪ್ರೊ. ಕೆ.ಬಿ.ಗುಡಸಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಇದನ್ನೂ ಓದಿ : ಉಚಿತ ಕಣ್ಣಿನ ತಪಾಸಣಾ ಶಿಬಿರ ಯಶಸ್ವಿ

ಮಯೂರ ಖಿಲಾರಿ ಪಡೆದ ಏಳು ಪದಕ:
ದಿವಂಗತ ಪ್ರೊ. ಆರ್.ಟಿ. ಜಂಗಮ ಬಂಗಾರದ ಪದಕ, ದಿವಂಗತ ಪ್ರೊ. ಹೆಚ್.ಎಸ್. ಹೊಸಮನಿ ಸ್ಮಾರಕ ಬಂಗಾರದ ಪದಕ, ಪ್ರೊ. ವಿ.ಟಿ. ಪಾಟೀಲ ಬಂಗಾರದ ಪದಕ, ಪ್ರೊ. ಎ.ಎಂ. ರಾಜಶೇಖರಯ್ಯ ಬಂಗಾರದ ಪದಕ, ಶ್ರೀ ರೇಡಕರ ಮಂಜಪ್ಪ ಸ್ಮಾರಕ ಗ್ರಂಥಮಾಲ ಬಂಗಾರದ ಪದಕ, ಶ್ರೀಮತಿ ಪವಿತ್ರಾ ಮತ್ತು ಡಾ. ಹೆಚ್‌.ಎಂ. ವಿರುಪಾಕ್ಷಯ್ಯ ಬಂಗಾರದ ಪದಕ, ಕೆ‌ಎಸ್‌ಎಸ್‌ ಬಂಗಾರದ ಪದಕ ಸೇರಿದಂತೆ ಒಟ್ಟು ಏಳು ಚಿನ್ನದ ಪದಕ, ಪ್ರಶಸ್ತಿ ಪತ್ರ ಪಡೆದಿದ್ದಾರೆ.