ಭಟ್ಕಳ : ಮಾವಳ್ಳಿ-ಮುರ್ಡೇಶ್ವರ ರಿಕ್ಷಾ ಮಾಲಕರ ಹಾಗೂ ಚಾಲಕರ ಸಂಘದ ಅಧ್ಯಕ್ಷರಾಗಿ ಶ್ರೀಧರ ಲಚ್ಮಯ್ಯ ನಾಯ್ಕ ಅವರನ್ನು ಸರ್ವಾನುಮತದಿಂದ ಆಯ್ಕ ಮಾಡಲಾಗಿದೆ.
ಇದನ್ನೂ ಓದಿ : ಭಗವಾಧ್ವಜ ಪ್ರಕರಣ : ಆರೋಪಿತರು ಯಾರು? ದೂರಿನಲ್ಲಿ ಏನಿದೆ?
ಮಾ.೫ರಂದು ಮಂಗಳವಾರ ಸಂಘದ ಕಚೇರಿಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಉಳಿದಂತೆ ಉಪಾಧ್ಯಕ್ಷರಾಗಿ ಜಗದೀಶ ನಾಯ್ಕ , ಪ್ರಧಾನ ಕಾರ್ಯದರ್ಶಿಯಾಗಿ ವಿನಾಯಕ ನಾಯ್ಕ , ಕಾರ್ಯದರ್ಶಿಯಾಗಿ ಸಂತೋಷ ನಾಯ್ಕ, ಸಹ ಕಾರ್ಯದರ್ಶಿಯಾಗಿ ಮಧನಿ, ಖಜಾಂಚಿಯಾಗಿ ವೆಂಕಟೇಶ ನಾಯ್ಕ, ಸಂಘಟನಾ ಕಾರ್ಯದರ್ಶಿಯಾಗಿ ಈರಪ್ಪ ನಾಯ್ಕ ಅವರನ್ನು ಸಭೆಯು ಆಯ್ಕೆ ಮಾಡಿತು.
ನಿಕಟಪೂರ್ವ ಅಧ್ಯಕ್ಷ ಸತೀಶ ನಾಯ್ಕ ಅವರು ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸಿ ಶುಭ ಹಾರೈಸಿದರು. ಅಧಿಕಾರ ಸ್ವೀಕರಿಸಿದ ಶ್ರೀಧರ ನಾಯ್ಕ ಅತ್ಯಂತ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವ ಭರವಸೆಯೊಂದಿಗೆ ಮಾಜಿ ಅಧ್ಯಕ್ಷರ ಮಾರ್ಗದರ್ಶನ ಹಾಗೂ ಎಲ್ಲಾ ಸದಸ್ಯರ ಸಹಕಾರ ಕೋರಿದರು.
ಸಭೆಯ ಆರಂಭದಲ್ಲಿ ಮಾವಳ್ಳಿ-ಮುರ್ಡೇಶ್ವರ ರಿಕ್ಷಾ ಮಾಲಕರ-ಚಾಲಕರ ಸಂಘದ ನಿಕಟಪೂರ್ವ ಅಧ್ಯಕ್ಷ ಸತೀಶ್ ನಾಯ್ಕ ಅವರು ತಮ್ಮ ಅವಧಿಯಲ್ಲಿ ಆದ ಕೆಲಸ ಕಾರ್ಯಗಳನ್ನು ಸಭೆಯಲ್ಲಿ ಹೇಳಿ ಸಂಘದ ಖರ್ಚು ಮತ್ತು ಆದಾಯ ಸಭೆಯ ಗಮನಕ್ಕೆ ತಂದರು. ತಮ್ಮ ಅಧಿಕಾರ ಅವಧಿ ಮುಗಿದ ಕಾರಣ ಹೊಸ ಆಡಳಿತ ಕಮಿಟಿ ರಚೆನೆ ಮಾಡಲು ಸಭೆಯಲ್ಲಿ ಪ್ರಸ್ತಾವನೆ ಮುಂದಿಟ್ಟರು.ಅದಕ್ಕೆ ಸಭೆಯು ಒಪ್ಪಿಗೆ ಸೂಚಿಸಿ ನಿಕಟಪೂರ್ವ ಅಧ್ಯಕ್ಷರಿಗೆ ಧನ್ಯವಾದ ಅರ್ಪಿಸಿತು.
ಈ ವಿಡಿಯೋ ನೋಡಿ : https://www.facebook.com/share/v/CLof1z1AAFa5KDNT/?mibextid=oFDknk