ಭಟ್ಕಳ ಡೈರಿ ವರದಿ
ಭಟ್ಕಳ: ತಾಲೂಕಿನ ಶಿರಾಲಿ ಸಮೀಪದ ಮಣ್ಣೊಂಡದಲ್ಲಿ ೭೨ ವರ್ಷದ ವ್ಯಕ್ತಿಯೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅ.೬ರಂದು ನಡೆದಿದೆ. ಮೃತರನ್ನು ಮಣ್ಣೊಂಡ ನಿವಾಸಿ ಮಂಜಪ್ಪ ಈರಪ್ಪ ನಾಯ್ಕ ಎಂದು ಗುರುತಿಸಲಾಗಿದೆ. ಅವರು ಕೂಲಿ ಕೆಲಸ ಮಾಡಿಕೊಂಡಿದ್ದರು. ಈ ಕುರಿತು ಮೃತರ ಪತ್ನಿ ಜಟ್ಟಮ್ಮ ಮಂಜಪ್ಪ ನಾಯ್ಕ (೬೬) ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೂರಿನ ಪ್ರಕಾರ, ಮಂಜಪ್ಪ ನಾಯ್ಕ ತಮ್ಮ ಮಗ ಮೃತಪಟ್ಟ ವಿಚಾರವನ್ನು ಮನಸ್ಸಿಗೆ ಹಚ್ಚಿಕೊಂಡಿದ್ದರು ಎನ್ನಲಾಗಿದೆ. ಇದರಿಂದಾಗಿ ಅಥವಾ ಇನ್ನಾವುದೋ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಮನನೊಂದಿದ್ದ ಅವರು, ಅ.೬ರಂದು ಮುಂಜಾನೆ ಸುಮಾರು ೩ ಗಂಟೆಯಿಂದ ಬೆಳಗ್ಗೆ ೮.೩೦ರ ನಡುವಿನ ಅವಧಿಯಲ್ಲಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿಸಲಾಗಿದೆ.
ಮೃತರ ಸಾವಿನಲ್ಲಿ ಯಾವುದೇ ಅನುಮಾನವಿಲ್ಲ ಎಂದು ಕುಟುಂಬದವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಭಟ್ಕಳ ಗ್ರಾಮೀಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳುತ್ತಿದ್ದಾರೆ.
ಇದನ್ನೂ ಓದಿ:
ಭಟ್ಕಳದಲ್ಲಿ ಮಳೆಯ ಸಾಧ್ಯತೆ ಮುಂದುವರಿಕೆ; ಅ.೧೦ರವರೆಗೆ ಕರಾವಳಿಯಲ್ಲಿ ಮಳೆ-ಗುಡುಗು ಮುನ್ಸೂಚನೆ




