ಭಟ್ಕಳ: ಉತ್ತರ ಕನ್ನಡ (Uttara Kannada) ಜಿಲ್ಲೆಯ ಭಟ್ಕಳ (Bhatkal) ನಗರವನ್ನು 24 ಗಂಟೆಯೊಳಗೆ ಸ್ಫೋಟಿಸುವುದಾಗಿ ಭಟ್ಕಳ ಶಹರ ಠಾಣೆಗೆ ಇಮೇಲ್ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಭಟ್ಕಳ ಶಹರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ (swift action).
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಮೊಬೈಲ್ ಟ್ರೇಸ್ ಮಾಡಿ ತಮಿಳುನಾಡು ಮೂಲದ ಕಣ್ಣನ್ ಎಂಬಾತನನ್ನು ಭಟ್ಕಳ ಶಹರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ತನಿಖೆ ವೇಳೆ, ಕಣ್ಣನ್ ಮೊಬೈಲ್‌ನಿಂದ ಮತ್ತೊಬ್ಬ ವ್ಯಕ್ತಿ ಈ ಕೃತ್ಯ ಮಾಡಿರುವುದು ಬಯಲಿಗೆ ಬಂದಿದೆ. ಮೊಬೈಲ್‌ನ್ನು ಹೇಗೆ ಆತ ತೆಗೆದುಕೊಂಡ ಎಂಬುವುದರ ಬಗ್ಗ ಮಾಹಿತಿ ಕಲೆ ಹಾಕಿರುವ ಪೊಲೀಸರು, ಕಣ್ಣನ್ ಮತ್ತು ಮೋಸ್ಟ್ ವಾಂಟೆಡ್ ವ್ಯಕ್ತಿಯ ನಡುವಿನ ಭೇಟಿಯ ಕುರಿತು ತನಿಖೆ ಬಳಿಕ ಮಾಹಿತಿ ಬರಬೇಕಿದೆ.
ಇದನ್ನೂ ಓದಿ: Guru Poornima Special/ ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ
ಇನ್ನೊಂದೆಡೆ, ಕಣ್ಣನ್ ಮೊಬೈಲ್ ಮೂಲಕ ಪೋಸ್ಟ್ ಮಾಡಿದ ಮೋಸ್ಟ್ ವಾಂಟೆಡ್ ವ್ಯಕ್ತಿ ಮೈಸೂರಿನಲ್ಲಿ (Mysuru) ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಹಿಂದೆ ಮೈಸೂರು, ಬಳ್ಳಾರಿ (Bellary), ಕೇರಳ (Kerala) ಸೇರಿದಂತೆ ಬೇರೆ ಕಡೆಗೂ ಬಾಂಬ್ ಸ್ಫೋಟಿಸುವ ಬೇದರಿಕೆ ಹಾಕಿದ್ದ ಈ ಮೋಸ್ಟ್ ವಾಂಟೆಡ್ (Most wanted) ವ್ಯಕ್ತಿಯನ್ನು ಕರ್ನಾಟಕ (Karnataka) ಮತ್ತು ಕೇರಳ ಪೊಲೀಸರ ಕಾರ್ಯಾಚರಣೆಯಿಂದ (swift action) ಪತ್ತೆ ಮಾಡಲಾಗಿದೆ. ಆತನನ್ನು ಪೊಲೀಸರು ಮೈಸೂರಿನಿಂದ ಸೋಮವಾರ ಭಟ್ಕಳಕ್ಕೆ ಕರೆತಂದು ವಿಚಾರಣೆ ನಡೆಸಲಿದ್ದಾರೆ .
ಇದನ್ನೂ ಓದಿ: Dog bite/ ಭಟ್ಕಳದಲ್ಲಿ ಬೀದಿ ನಾಯಿಗಳಿಂದ ಮಾರಣಾಂತಿಕ ಹಲ್ಲೆ



