ಭಟ್ಕಳ ಡೈರಿ ವರದಿ

ಭಟ್ಕಳ: ತಾಲೂಕಿನ ಶಿರಾಲಿ ಚೆಕ್‌ಪೋಸ್ಟ್ ಸಮೀಪ ರಾಷ್ಟ್ರೀಯ ಹೆದ್ದಾರಿ-೬೬ರಲ್ಲಿ ಇನ್ಸುಲೇಟರ್ ವಾಹನವೊಂದು ಮೋಟಾರ್ ಸೈಕಲ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಗಾಯಗೊಂಡಿದ್ದಾರೆ. ಅಂಗನವಾಡಿ ಶಿಕ್ಷಕಿ ಭಟ್ಕಳದ ಚೌತನಿಯ ಪದ್ಮಾವತಿ ಮಂಜುನಾಥ ಹಳ್ಳೆರ (೫೨) ಗಾಯಗೊಂಡವರು.

ಅಕ್ಟೋಬರ್ ೮ರಂದು ರಾತ್ರಿ ಸುಮಾರು ೧೦ ಗಂಟೆಗೆ ನಡೆದಿದೆ. ಮುರುಡೇಶ್ವರದಿಂದ ಭಟ್ಕಳದ ಕಡೆಗೆ ಮೋಟಾರ್ ಸೈಕಲ್‌ನಲ್ಲಿ ಬರುತ್ತಿದ್ದಾಗ ಶಿರಾಲಿ ಚೆಕ್‌ಪೋಸ್ಟ್ ಸಮೀಪ ಹಿಂಬದಿಯಿಂದ ಬಂದ ಇನ್ಸುಲೇಟರ್ ವಾಹನ ಮೋಟಾರ್ ಸೈಕಲ್‌ಗೆ ಡಿಕ್ಕಿ ಹೊಡೆದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಅಪಘಾತದ ಪರಿಣಾಮ ಮೋಟಾರ್ ಸೈಕಲ್‌ ಸಮೇತ ರಸ್ತೆಗೆ ಬಿದ್ದ ಮಹಿಳೆಯ ಬಲಗಾಲು ಮತ್ತು ಬಲಭುಜಕ್ಕೆ ಗಾಯಗಳಾಗಿವೆ.

ಹೊನ್ನಾವರ ತಾಲೂಕಿನ ಕಾಸರಕೋಡು ಟೊಂಕಾ ನಿವಾಸಿ ಮಹಮ್ಮದ್ ಸಫಾನ್ ರಶೀದ್ ಎಂಬವರು ಚಲಾಯಿಸುತ್ತಿದ್ದ ಇನ್ಸುಲೇಟರ್ ವಾಹನ ಅತಿವೇಗ ಮತ್ತು ಅಜಾಗರೂಕತೆಯಿಂದ ಬಂದು ಅಪಘಾತಕ್ಕೆ ಕಾರಣವಾಗಿದೆ ಎಂದು ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಲ್ಲಿ ಆರೋಪಿಸಲಾಗಿದೆ.

ಇದನ್ನೂ ಓದಿ:

ಭಟ್ಕಳ ಅಂಜುಮನ್ ಕಾಲೇಜಿನ ಮಾಜಿ ಪ್ರಾಂಶುಪಾಲ ಡಾ ಮೊಹಮ್ಮದ್ ಗೌಸ್ ಬಾಗ್ ಸಿರಾಜ್ ನಿಧನ

ಸಂಪಾದಕೀಯ/ ಕಾರ್ಯಕರ್ತರ ಪರವಾಗಿ ಧ್ವನಿ ಎತ್ತುವುದು ಮುಖ್ಯ; ಸಂಘಟನೆಯ ಒಗ್ಗಟ್ಟು ಇನ್ನಷ್ಟು ಮುಖ್ಯ