ಬೆಂಗಳೂರು : ಗೃಹ ಸಚಿವರ ಆಪ್ತ ಕಾರ್ಯದರ್ಶಿ (ಪಿಎಸ್‌) ಕೆ.ಚನ್ನಬಸಪ್ಪ ಅವರಿಗೆ ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯ ಡಾಕ್ಟರೇಟ್‌ ಪದವಿ ನೀಡಿ ಗೌರವಿಸಿದೆ.

ಇದನ್ನೂ ಓದಿ : ಆತ್ಮೀಯ ಬಂಧುಗಳೇ…  ಟಿಕೆಟ್ ವಂಚಿತ ಅನಂತಕುಮಾರ್ ಹೆಗಡೆ ಪತ್ರ ವೈರಲ್

ಕುವೆಂಪು ವಿಶ್ವವಿದ್ಯಾಲಯದ ಶಿಕ್ಷಣ ನಿಕಾಯದ ಡೀನ್‌ ಪ್ರೊ.ಸಿ.ಗೀತಾ ಅವರು ಮಾರ್ಗದರ್ಶನದಲ್ಲಿ ಸಿದ್ಧಪಡಿಸಿ, ಮಂಡಿಸಿದ ‘ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಮಧ್ಯವರ್ತನಗಳಿಂದಾಗುವ ಶೈಕ್ಷಣಿಕ ಸಾಧನೆಗಳು’ ವಿಷಯ ಕುರಿತ ಮಹಾಪ್ರಬಂಧಕ್ಕೆ ಈ ಗೌರವ ಸಂದಿದೆ.

ಈ ರೀಲ್ಸ್ ನೋಡಿ : ಭಟ್ಕಳ ಬಂದರಿನಲ್ಲಿ ಹೋಳಿ ಸಂಭ್ರಮ

ಕರ್ನಾಟಕ ಆಡಳಿತ ಸೇವೆಯ ಸೂಪರ್‌ಟೈಂ ಸ್ಕೇಲ್‌ ಅಧಿಕಾರಿಯಾದ ಚನ್ನಬಸಪ್ಪ ಅವರು ಎಂ.ಎ, ಎಂ.ಇಡಿ ಪದವೀಧರ. ಗೃಹ ಸಚಿವರ (ಡಾ.ಜಿ.ಪರಮೇಶ್ವರ) ಆಪ್ತ ಕಾರ್ಯದರ್ಶಿಯಾಗಿ ನೇಮಕವಾಗುವ ಮೊದಲು ಮಂಗಳೂರು ನಗರ ಪಾಲಿಕೆ ಆಯುಕ್ತರು, ತುಮಕೂರು, ಶಿವಮೊಗ್ಗ, ಉಡುಪಿ, ಮಂಗಳೂರು ಜಿಲ್ಲೆಗಳ ಹೆಚ್ಚುವರಿ ಜಿಲ್ಲಾಧಿಕಾರಿ ಮತ್ತು ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿಯಾಗಿ, ಹಾವೇರಿ, ಚಿಕ್ಕಮಗಳೂರಿನ ಉಪ ವಿಭಾಗಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.

ವೋಟ್ ಮಾಡಿ : ಉತ್ತರ ಕನ್ನಡ ಕ್ಷೇತ್ರದ ಸಂಸದರು ಯಾರಾಗಬೇಕು?

ಮೂಲತಃ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಮಲವಹಳ್ಳಿಯ ಚನ್ನಬಸಪ್ಪ ಅವರು ಕೆಎಎಸ್‌ ಪರೀಕ್ಷೆ ತೆಗೆದುಕೊಳ್ಳುವ ಮೊದಲು ಹಾವೇರಿ ಜಿಲ್ಲೆಯಲ್ಲಿ ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರಾಗಿ ನಾಲ್ಕು ವರ್ಷ ಹಾಗೂ ಸರ್ಕಾರಿ ಪಿಯು ಕಾಲೇಜಿನಲ್ಲಿ ಒಂದು ವರ್ಷ ಉಪನ್ಯಾಸಕರಾಗಿ ಬೊಧನಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.