ಭಟ್ಕಳ: ವಿಪರೀತ ಸೆಖೆಯಿಂದ ತತ್ತರಿಸಿದ್ದ ತಾಲೂಕಿನ ಜನತೆಗೆ ಶನಿವಾರ ಬೆಳಿಗ್ಗೆ ಬಿದ್ದ ವರ್ಷಾಧಾರೆ ತಂಪೆರೆದಿದೆ. ಭಟ್ಕಳ ಸೇರಿದಂತೆ ಜಿಲ್ಲೆಯ ಹಲವು ಕಡೆ ಗುಡುಗು ಸಹಿತ ಗಾಳಿ ಮಳೆಗೆ ತಂಪಿನ ವಾತಾವರಣ ಸೃಷ್ಟಿಮಾಡಿದೆ.
ಇದನ್ನೂ ಓದಿ : ಸಮುದ್ರದಲ್ಲಿ ಬೋಟ್ ಮುಳುಗಡೆ; ನಾಲ್ವರ ರಕ್ಷಣೆ
ಶನಿವಾರ ಬೆಳಿಗ್ಗೆ ೪ ಗಂಟೆಯಿಂದ ೯ ಗಂಟೆಯವರೆಗೆ ತಾಲೂಕಿನೆಲ್ಲೆಡೆ ಸಾಧಾರಣ ಮಳೆ ಬಿದ್ದಿದೆ. ಗಾಳಿ ಮಳೆಗೆ ಹಲವೆಡೆ ಗಿಡ ಮರಗಳು ಉರುಳಿ ವಿದ್ಯುತ್ ಕಂಬಗಳಿಗೆ ಹಾನಿಯುಂಟಾಗಿದೆ. ಪರಿಣಾಮ ಬೆಳಗ್ಗಿನ ಜಾವದಿಂದ ಮಧ್ಯಾಹ್ನ ತನಕ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಈಗಾಗಲೇ ನೀರಿನ ಸಂಕಷ್ಟದಲ್ಲಿದ್ದ ಹಲವು ಕಡೆ ಈ ಮುಂಗಾರು ಪೂರ್ವ ಮಳೆ ನಿಟ್ಟುಸಿರು ಬಿಡುವಂತೆ ಮಾಡಿದೆ.
ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಶನಿವಾರ ಬೆಳಿಗ್ಗೆ ೮ ಗಂಟೆಯಿಂದ ೨೪ ಗಂಟೆವರೆಗೆ ತಾಲೂಕಿನಲ್ಲಿ ೩೬.೪ ಮೀ.ಮೀ ಮಳೆಯಾದ ವರದಿಯಾಗಿದೆ. ವಿದ್ಯುತ್ ಕಂಬ ಉರುಳಿ ಬಿದ್ದ ಪರಿಣಾಮ ಹೆಸ್ಕಾಂ ಇಲಾಖೆಗೆ ಲಕ್ಷಾಂತರ ರೂ. ಹಾನಿ ಸಂಭವಿಸಿದೆ.