ಕುಮಟಾ: ಬಂದರು, ವಿಮಾನ ನಿಲ್ದಾಣ ಹೀಗೆ ಮುಂತಾದವುಗಳನ್ನು ಕಾಂಗ್ರೆಸ್ ಸರ್ಕಾರ ದೇಶಕ್ಕೆ ಆಸ್ತಿಯಾಗಿ ಮಾಡಿಟ್ಟಿದೆ. ಆದರೆ ಕೇಂದ್ರದ ಬಿಜೆಪಿ ಸರ್ಕಾರ ಈ ದೇಶದ ಆಸ್ತಿ ಮಾರಾಟ ಮಾಡುತ್ತಿದೆ ಎಂದು ಕೆಪಿಸಿಸಿ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ವಿನಯಕುಮಾರ ಸೊರಕೆ ಆರೋಪಿಸಿದರು. ಅವರು ಶನಿವಾರ ಇಲ್ಲಿನ ಬ್ಲಾಕ್ ಕಾಂಗ್ರಸ್ ಸಮಿತಿ ಕಚೇರಿಯಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ  ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು  ಇಲ್ಲಿ ಒತ್ತಿ.

ಕೇಂದ್ರದಲ್ಲಿ ೧೦ ವರ್ಷ ಆಡಳಿತ ನಡೆಸಿರುವ ಬಿಜೆಪಿ ಸರ್ಕಾರ ಯಾರಿಗೂ ಏನನ್ನೂ ಮಾಡಿಲ್ಲ. ಸರ್ಕಾರದ ವೈಫಲ್ಯದಿಂದಾಗಿ ಎಲ್ಲಾ ವಸ್ತುಗಳ ಬೆಲೆಗಳು ಗಗನಕ್ಕೆ ಏರುತ್ತಿವೆ. ನಿರುದ್ಯೋಗ ತಾಂಡವಾಡುತ್ತಿದೆ. ಮಹಿಳೆಯರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ. ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿದರು. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಚಕಾರು ಮಾತನಾಡುವುದಿಲ್ಲ. ಸಾಮರಸ್ಯಕ್ಕೆ ಧಕ್ಕೆ ತರುವ ಕೆಲಸ ಮಾಡಿದ್ದೇ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಸಾಧನೆಯಾಗಿದೆ ಎಂದು ಸೊರಕೆ ದೂಷಿಸಿದರು.

ಇದನ್ನೂ ಓದಿ : ದಕ್ಷಿಣ ಕನ್ನಡ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ ಭಟ್ಕಳಕ್ಕೆ ಭೇಟಿ

ರಾಜ್ಯದಲ್ಲಿ ಬರಗಾಲ ತಾಂಡವಾಡುತ್ತಿರುವ ಸಮಯದಲ್ಲಿ ಕೇಂದ್ರ ಸರ್ಕಾರ ಸೂಕ್ತ ರೀತಿಯಲ್ಲಿ ರಾಜ್ಯ ಸರ್ಕಾರದೊಂದಿಗೆ ಸ್ಪಂದಿಸಿ ಬರ ಪರಿಹಾರಕ್ಕಾಗಿ ಧನ ಸಹಾಯ ಮಾಡಬೇಕಿತ್ತು. ಆ ರೀತಿ ಮಾಡದೆ ಇದ್ದುದರಿಂದ ಕರ್ನಾಟಕ ಸರ್ಕಾರ ಉಚ್ಚನ್ಯಾಯಾಲಯದ ವರೆಗೆ ಕೇಂದ್ರ ಸರ್ಕಾರವನ್ನು ಏಳೆದೊಯ್ಯುವಂತಹ ಪರಿಸ್ಥಿತಿಯನ್ನು ತಂದೊಡ್ಡಿತು ಎಂದು ಆರೋಪಿಸಿದರು.

ಇದನ್ನೂ ಓದಿ : ‘ಕೈ’ ಹಿಡಿದ‌ ಇನಾಯತುಲ್ಲಾ ಶಾಬಂದ್ರಿ; ಲಾಭ – ನಷ್ಟದ ಲೆಕ್ಕಾಚಾರ

ಇನ್ನು ತೆರಿಗೆಯಲ್ಲಿ ರಾಜ್ಯದಲ್ಲಿರುವ ನಮ್ಮ ಪಕ್ಷದ ಸರ್ಕಾರಕ್ಕೆ ನೀಡಬೇಕಾದ ಪಾಲನ್ನು ಕೇಂದ್ರ ಸರ್ಕಾರ ರಾಜ್ಯದ ಬೃಹತ್ ಯೋಜನೆಗಳ ಅನುಷ್ಠಾನದ ಕುರಿತು ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಇಡಿ, ಸಿಬಿಐ ಬಳಸಿಕೊಂಡು ವಿರೋಧಿ ಪಕ್ಷವನ್ನು ಮಮನ ಮಾಡಲು ನರೇಂದ್ರ ಮೋದಿ ಸರ್ಕಾರ ಯತ್ನಿಸುತ್ತಿದೆ. ಅಜಿತ್ ಪವಾರ, ಜನಾರ್ದನ ರೆಡ್ಡಿ ಹಾಗೂ ಇನ್ನಿತರರು ಈ ಬಿಜೆಪಿ ಕಡೆ ಇದ್ದಾರೆ. ಇವರ ವಿರುದ್ಧ ಇಡಿ, ಸಿಬಿಐ ದಾಖಲಿಸಿದ್ದ ಪ್ರಕರಣಗಳು ಏನಾದವು ಎಂದು ಅವರು ಪ್ರಶ್ನಿಸಿದರು.
ವಿಶ್ವಗುರು ಎನುತ್ತ ಮೋದಿ ಅವರು ಶಾಸಕರನ್ನು ಖರೀದಿ ಮಾಡಿ ಸರ್ಕಾರವನ್ನು ಉರುಳಿಸುವ ಕೆಲಸ ಮಾಡುತ್ತಿದ್ದಾರೆ. ಪ್ರಜಾತಂತ್ರ ವ್ಯವಸ್ಥೆಯನ್ನು ಹಾಳು ಮಾಡುತ್ತಿದ್ದಾರೆ. ದೇಶದ ಇತಿಹಾಸವನ್ನು ಬದಲಿಸಿ ಹೊಸ ಚರಿತ್ರೆಯನ್ನು ಬರೆಯಲು ಹೊರಟ ನರೇಂದ್ರ ಮೋದಿಬಸರ್ವಾಧಿಕಾರಿ ಆಡಳಿತಗಾರನಾಗಿದ್ದಾರೆ ಎಂದು ವಿನಯಕುಮಾರ ಸೊರಕೆ ಆರೋಪಿಸಿದರು.


ಕೆಪಿಸಿಸಿ ಉಪಾಧ್ಯಕ್ಷ ನಿವೇದಿತ ಆಳ್ವ, ಕುಮಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭುವನ ಭಾಗ್ವತ, ಪ್ರಚಾರ ಸಮಿತಿ ಜಿಲ್ಲಾ ಅಧ್ಯಕ್ಷ ರವೀಂದ್ರ ನಾಯ್ಕ, ಕುಮಟಾ ಪ್ರಚಾರ ಸಮಿತಿ ಅಧ್ಯಕ್ಷ ಹೊನ್ನಪ್ಪ ನಾಯಕ, ಜಿಲ್ಲಾ ಸಮಿತಿಯ ಆರ್.ಎಚ್.ನಾಯ್ಕ, ರತ್ನಾಕರ ನಾಯ್ಕ, ಈಶ್ವರ ನಾಯ್ಕ, ಸಚಿನ ನಾಯ್ಕ, ಮುಂತಾದವರು ಇದ್ದರು.