ಭಟ್ಕಳ : ಭಾರತೀಯ ಜನತಾ ಪಾರ್ಟಿ ಮತ್ತು ಯುವ ಮೋರ್ಚಾ ಸಹಯೋಗದೊಂದಿಗೆ ಭಟ್ಕಳದಲ್ಲಿ ‘ಮೋದಿಗಾಗಿ ಬೃಹತ್ ಬೈಕ್ ಜಾಥಾ’ಗೆ ಮಾಜಿ ಸಚಿವ ಕುಮಾರ ಬಂಗಾರಪ್ಪ ಚಾಲನೆ ನೀಡಿದರು.
ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಾವು ರಾಷ್ಟ್ರವನ್ನು ಕಟ್ಟಲು ಹೊರಟಿರುವ ಮತ ಎಂದು ತಿಳಿದು ಮೋದಿಯವರನ್ನು ಹಾಗೂ ದೇಶವನ್ನು ನೋಡಿ ಮತ ಚಲಾವಣೆ ಮಾಡಬೇಕು. ಕರಾವಳಿ ಭಾಗವಾದ ಭಟ್ಕಳದಿಂದ ಕಾರವಾರದ ತನಕ ಆಗಿನ ಕಾಲದಲ್ಲಿ ತಮ್ಮ ತಂದೆಯವರೊಂದಿಗೆ ಭಟ್ಕಳ ಭಾಗದ ಬಿಜೆಪಿ ಬಲ ಪಡಿಸಿದ ಡಾ.ಚಿತ್ತರಂಜನ್, ತಿಮ್ಮಪ್ಪ ನಾಯ್ಕ, ಲಕ್ಷ್ಮಣ ನಾಯ್ಕ, ಕೃಷ್ಣ ನಾಯ್ಕ, ಬಾಬು ಮಾಸ್ತರ ಹಾಗೂ ಅನೇಕ ಹಿರಿಯರು ಪಕ್ಷ ಕಟ್ಟಲು ಕೆಲಸ ಮಾಡಿರುವುದನ್ನು ಕುಮಾರ ಬಂಗಾರಪ್ಪ ನೆನಪು ಮಾಡಿಕೊಂಡರು.
ಇದನ್ನೂ ಓದಿ : ದೇಶ ಗೆಲ್ಲಬೇಕಾದರೆ ಬಿಜೆಪಿ ಗೆಲ್ಲಬೇಕು : ಕೋಟ ಶ್ರೀನಿವಾಸ ಪೂಜಾರಿ
ಹಿಂದಿನ ಚುನಾವಣೆಗೂ ಈಗಿನ ಚುನಾವಣೆಗೂ ಬಹಳ ವ್ಯತ್ಯಾಸವಿದೆ. ಅಭಿವೃದ್ಧಿಯ ಪಥವು ಉತ್ತುಂಗಕ್ಕೆ ಹೋಗಿರುವ ಕ್ಷಣವಾಗಿದೆ. ಸದ್ಯ ಈ ಭಾಗದಲ್ಲಿ ಶಾಸಕರು, ಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿಗಳು ಕೂಡ ಅವರೇ ಇದ್ದರೂ ಒಂದು ನಯಾ ಪೈಸೆಯ ಅಭಿವೃದ್ಧಿ ಕೆಲಸ ತರಲು ಸಾಧ್ಯವಾಗದೆ ಇರುವ ಪರಿಸ್ಥಿತಿಯಲ್ಲಿದ್ದಾರೆ. “ದೋಣಿಯಿಂದ ನೀರಿಗೆ ಜಿಗಿದರೆ ನಾನು ಆಡಳಿತ ನಡೆಸಿ ಬಿಡುತ್ತೇನೆ ಎನ್ನುವ ಮಂತ್ರಿಗಳು ಇಲ್ಲಿ ಇದ್ದಾರೆ”. ಅದೆಲ್ಲ ಇಲ್ಲಿ ಆಗೋದಿಲ್ಲ. ನಾವು ಆಡಳಿತದಲ್ಲಿ ಧುಮುಕುವ ಕೆಲಸ ಮಾಡಬೇಕು. ಭ್ರಷ್ಟರನ್ನು ನಿಗ್ರಹ ಮಾಡುವ ಕೆಲಸ ಮಾಡಬೇಕು. ಅಂತಾರಾಷ್ಟ್ರೀಯ ಟೆರರಿಸ್ಟ್ ಹೆಸರಿನ ಮೇಲೆ ಭಟ್ಕಳ ನಿಂತಿದ್ದು ಅಂತಹ ಕೆಟ್ಟ ಹೆಸರನ್ನು ತೆಗೆಯುವ ಕೆಲಸ ಮಾಡಬೇಕಾಗಿದೆ. ಅದು ನಮ್ಮ ಮುಖ್ಯ ಗುರಿಯಾಗ ಬೇಕು ಎಂದರು.
ಆಗಿನ ಬಿಜೆಪಿ “ಡಬಲ್ ಇಂಜಿನ್” ಕೇಂದ್ರ ಹಾಗೂ ರಾಜ್ಯ ಸರ್ಕಾರ ಏನೇ ಕೇಳಿದರು ಈಡೇರಿಸುವ ಕೆಲಸ ಮಾಡುತ್ತಿತ್ತು. ಆದರೆ ಈಗ ಬರಗಾಲದ ಪರಿಸ್ಥಿತಿ ರಾಜ್ಯದಲ್ಲಿದೆ. ಅದೇ ರೀತಿ ಈ ಕರಾವಳಿ ಭಾಗದಲ್ಲಿ ಸಮಸ್ಯೆಗಳು ಬೇರೆ ರೀತಿಯಲ್ಲಿವೆ. ಪೋರ್ಟ್, ಮೀನುಗರಿಕೆ ಸಮಸ್ಯೆ, ಡೀಸೆಲ್ ಸಬ್ಸಿಡಿಗಳಿಗೆ ಅನೇಕ ಸಹಾಯ ಹಸ್ತವನ್ನು ಕೊಡುವ ಕೆಲಸ ನಡೆದಿತ್ತು. ಈಗ ಅವುಗಳೆಲ್ಲ ಕುಂಠಿತಗೊಂಡಿವೆ. ದರಗಳು ಕೂಡ ಅಷ್ಟೇ ಪ್ರಮಾಣದಲ್ಲಿ ಏರಿಕೆಗೊಂಡಿವೆ. ನಾವು ಫ್ರೀ ಭಾಗ್ಯ ಕೊಟ್ಟಿದ್ದೇವೆ ಎಂದು ಹೇಳಿ ನಮ್ಮಿಂದ ತೆಗೆದು ನಮ್ಮ ಅಕ್ಕ ತಂಗಿಯರಿಗೆ ಕೊಡುವ ಕೆಲಸ ಮಾಡಬೇಕು. ನಮ್ಮ ಜೇಬಿಗೆ ಕತ್ತರಿ ಹಾಕುತ್ತಿದ್ದಾರೆ. ಇದಕ್ಕಾಗಿ ನಾವು ಪ್ರತಿಷ್ಠೆಯಾಗಿ ತೆಗೆದುಕೊಂಡು ಈ ಚುನಾವಣೆಯಲ್ಲಿ ಮೋದಿ ಹಾಗೂ ನಮ್ಮ ಅಭ್ಯರ್ಥಿ ಕಾಗೇರಿಗೆ ಅತ್ಯಂತ ಬಹುಮಾತವನ್ನು ನೀಡುವ ಮೂಲಕ ಗೆಲ್ಲಿಸಬೇಕು ಎಂದರು.
ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ಅವರಿಗೆ ಕಿತ್ತೂರು-ಖಾನಾಪುರದಿಂದ ಶಿರಸಿ, ಹಳಿಯಾಳ, ದಾಂಡೇಲಿ ಕಡೆಗೆ ಬರಲು ಆಗುದಿಲ್ಲ. ಅದರಲ್ಲೂ ಭಟ್ಕಳ ಕಡೆಗಂತೂ ಬರಲು ಸಾಧ್ಯವಾಗದ ಮಾತು. ಅವರು ಕಿತ್ತೂರು ಖಾನಾಪುರದಿಂದ ಹೊರಗಡೆಯೇ ಇರುತ್ತಾರೆ. ನರೇಂದ್ರ ಮೋದಿಯವರ “ಸಬ್ ಕಾ ಸಾಥ್ ಸಬ್ ಕಾ ವಿಕಾಸ್”, “ವಿಶ್ವಾಸ್ ಕಾ ಸಾಥ್”, “ಪ್ರಯಾಸ್ ಕಾ ಸಾಥ್” ನಾವು ಎಲ್ಲರನ್ನು ಜೊತೆಗೂಡಿಸಿಕೊಂಡು ಹೋಗಬೇಕು ಎನ್ನುವಂತಹ ಕ್ಷೇತ್ರವಿದು ಎಂದರು.
ನಂತರ ಚನ್ನಪಟ್ಟಣ ಹನುಮಂತ ದೇವಸ್ಥಾನದಿಂದ ಹೊರಟ ‘ಮೋದಿಗಾಗಿ ಬೃಹತ್ ಬೈಕ್ ಜಾಥಾ’ ಮಾರಿಕಟ್ಟೆ ಮೂಲಕ ಆಸರಕೇರಿ, ಪಶುಪತಿ ದೇವಸ್ಥಾನ ಮಾರ್ಗವಾಗಿ ಬಂದರ ರಸ್ತೆಗೆ ಸಾಗಿತು. ಅಲ್ಲಿಂದ ಪಟ್ಟಣದ ಕಡೆ ಸಾಗಿ ಶಂಸುದ್ದಿನ್ ವೃತ್ತ ಹಳೆ ಬಸ್ ನಿಲ್ದಾಣ ಮಾರ್ಗವಾಗಿ ಸಾಗಿ ಚನ್ನ ಪಟ್ಟಣ ಹನುಮಂತ ದೇವಸ್ಥಾನದಲ್ಲಿ ಬೈಕ್ ರ್ಯಾಲಿ ಅಂತ್ಯಗೊಂಡಿತು.
ಈ ಸಂದರ್ಭದಲ್ಲಿ ಬಿಜೆಪಿ ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಸಂಚಾಲಕ ಗೋವಿಂದ ನಾಯ್ಕ, ಮಾಜಿ ಶಾಸಕ ಸುನೀಲ ನಾಯ್ಕ, ಭಟ್ಕಳ ಬಿಜೆಪಿ ಮಂಡಲ ಅಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ, ಮಾಜಿ ಅಧ್ಯಕ್ಷ ಸುಬ್ರಾಯ ದೇವಾಡಿಗ, ಕಾರ್ಯದರ್ಶಿ ಶ್ರೀನಿವಾಸ ನಾಯ್ಕ, ಜಿಲ್ಲಾ ಕಾರ್ಯದರ್ಶಿ ಶ್ರೀಕಾಂತ ನಾಯ್ಕ, ಕೆ.ಕೆ ಮೋಹನ, ರಾಜ್ಯ ಬಿಜೆಪಿ ಹಿಂದುಳಿದ ವರ್ಗದ ಉಪಾಧ್ಯಕ್ಷ ಈಶ್ವರ ನಾಯ್ಕ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಶಿವಾನಿ ಶಾಂತರಾಮ, ಯುವ ಮೋರ್ಚಾ ಅಧ್ಯಕ್ಷ ಸುನೀಲ ಕಾಮತ ಮತ್ತಿತರರು ಉಪಸ್ಥಿತರಿದ್ದರು.