ಭಟ್ಕಳ : ಮೇ ೧೯ರ ರಾತ್ರಿ ಸಂಭವಿಸಿದ ಗಾಳಿ ಮಳೆಗೆ ತಾಲೂಕಿನ ಎರಡು ಕಡೆ ಮರ ಬಿದ್ದು ಹಾನಿಯುಂಟಾಗಿದೆ.
ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಹಾಡುವಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ನೂಜ್ ಕೆಕೊಡ್ ನಲ್ಲಿ ಶ್ರೀ ಜೈನ ಕುದುರೆಬೀರಪ್ಪ ದೇವಸ್ಥಾನದ ಮೇಲೆ ಬೃಹತ್ ಗಾತ್ರದ ಮರ ಬಿದ್ದು ಸಂಪೂರ್ಣ ಹಾನಿಯಾಗಿದೆ. ಯಾವುದೇ ಜೀವ ಹಾನಿಯಾಗಿಲ್ಲ.
ಅಲ್ಲದೇ, ಇದೇ ಸಂದರ್ಭ ತಾಲೂಕಿನ ಶಿರಾಲಿ ೧ ಗ್ರಾಮದಲ್ಲಿ ಮೊಹಮ್ಮದ್ ಜಾಫರ್ ಎಂಬುವವರ ವಾಸ್ತವ್ಯದ ಮನೆ ಮೇಲೆ ಮರ ಬಿದ್ದು ಭಾಗಶಃ ಹಾನಿಯಾಗಿದೆ. ಅದೃಷ್ಟವಶಾತ್ ಎರಡೂ ಕಡೆ ಯಾವುದೇ ಪ್ರಾಣಹಾನಿಯಾಗಿಲ್ಲ.
ಇದನ್ನೂ ಓದಿ : ರಸ್ತೆ ಪಕ್ಕದಲ್ಲಿ ಕಸ ಹಾಕಿದ್ರೆ ಸಿಕ್ಕಿ ಬಿಳ್ತೀರಾ ಹುಷಾರ್!