ಭಟ್ಕಳ: ಮುರುಡೇಶ್ವರ-ನೇತ್ರಾಣಿ ದ್ವೀಪದ ಬಳಿ ಉತ್ತರ ಕನ್ನಡ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ತಮ್ಮ ಕುಟುಂಬ ಸಮೇತರಾಗಿ ಸ್ಕೋಬಾ ಡೈವಿಂಗ್ ಮಾಡುವ ಮೂಲಕ ಸಮುದ್ರ ಆಳದಲ್ಲಿರುವ ಹೊಸ ಜಗತ್ತನ್ನು ವೀಕ್ಷಣೆ ಮಾಡಿದರು.
ಮುರುಡೇಶ್ವರದ ಅಕ್ವಾ ರೈಡ್ ಜಲ ಕ್ರೀಡೆ ಸಂಸ್ಥೆಯ ನೆರವಿನೊಂದಿಗೆ ದೋಣಿ ಮೂಲಕ ತಮ್ಮ 15 ಜನ ಕುಟುಂಬ ಸದಸ್ಯರ ತಂಡದೊಂದಿಗೆ ನೇತ್ರಾಣಿ ದ್ವೀಪದ ಬಳಿ ತೆರಳಿ ಸ್ಕೂಬಾ ಡೈವಿಂಗ್ ಮಾಡಿ ಸಮುದ್ರದಾಳದಲ್ಲಿರುವ ಇನ್ನೊಂದು ಪ್ರಪಂಚವನ್ನು ವೀಕ್ಷಣೆ ಮಾಡಿದರು.
ಕೆಲಸದ ಒತ್ತಡದ ನಡುವೆಯೂ ಸಾಗರದ ಆಳದಲ್ಲಿನ ಈ ಕ್ರೀಡೆಯ ಕುರಿತು ಇರುವ ಆಸಕ್ತಿ ಮತ್ತು ಮುತುವರ್ಜಿಯ ಜಿಲ್ಲಾಧಿಕಾರಿಯ ಈ ನಡೆ ಮೆಚ್ಚುಗೆಗೆ ಕಾರಣವಾಗಿದೆ. ಮುರುಡೇಶ್ವರ ಹಾಗೂ ನೇತ್ರಾಣಿ ದ್ವೀಪದ ವೀಕ್ಷಿಸುವುದರ ಜೊತೆಯಲ್ಲಿ ಸ್ಕೂಬಾ ಡೈವಿಂಗ್ ಮಾಡುವುದರ ಮೂಲಕ ತಮ್ಮ ರಜೆಯನ್ನು ಅನಂದಿಸಿದರು.