ರಾಜಾರೋಷವಾಗಿ ಟೋಲ್ ನಲ್ಲಿ ಹಣ ವಸೂಲಿ ಮಾಡುತ್ತೀರಾ…?- ಇದು ಭಟ್ಕಳಡೈರಿ ಓದುಗನ ಆಕ್ರೋಶದ ಮಾತು. ಶಿರೂರಿನಲ್ಲಿ ನಡೆದ ಗುಡ್ಡಕುಸಿತ ದುರಂತದಿಂದ ಜಿಲ್ಲೆಯ ಜನ ಐ.ಆರ್.ಬಿ. ಕಂಪನಿ ವಿರುದ್ಧ ಕಿಡಿಕಾರುತ್ತಿದ್ದಾರೆ. ಭಟ್ಕಳದಲ್ಲಿಯೂ ಐ.ಆರ್.ಬಿ. ಅವಾಂತರಗಳಿಂದ ಹೈರಾಣಾಗಿರುವ ಓದುಗ ಆಕ್ರೋಶ ಭರಿತರಾಗಿ ಬರೆದಿದ್ದಾರೆ.

ಶಿರೂರಲ್ಲಿ ಗುಡ್ಡಕುಸಿತ ವಿಡಿಯೋ : https://www.facebook.com/share/r/CFcYurPZhaK6wrmX/?mibextid=oFDknk

ಒಂದೇ ಕುಟುಂಬದ ಐವರಂತೆ… ಯಭಾ ಕೇಳಿದರೆ ಒಮ್ಮೆ ಮೈ ಜುಂ ಅನ್ನುತ್ತೆ… ನಮ್ಮ ನಮ್ಮ ಮನೆಯವರಿಗೆ ಹಾಗೆ ಆಗಿದ್ದರೆ…? ಜೀವನೋಪಾಯಕ್ಕೆ ಒಂದು ಸಣ್ಣ ಟೀ ಸ್ಟಾಲ್ ಇಟ್ಟುಕೊಂಡು ಜೀವನ ಸಾಗಿಸುತ್ತಾ ಇದ್ದರು… ಗ್ರಾಹಕರ ಯೋಚನೆಯಲ್ಲಿ ಇದ್ದರೇನೋ ದಂಪತಿ….

ಇದನ್ನೂ ಓದಿ : ಗುಡ್ಡಕುಸಿತ ; ಐವರು ಮಣ್ಣಿನಡಿ ಸಿಲುಕಿರುವ ಶಂಕೆ

ಅದೇ ಮಾರ್ಗವಾಗಿ ಹೋಗುವ ಮಧ್ಯೆ ಧರೆಗೆ ಇಳಿದ ವರ್ಷಧಾರೆಯ ಹೊಡೆತದ ಚಳಿಯ   ಹೋಗಲಾಡಿಸಲು ಟೀ ಕುಡಿಯಲು ನಿಲ್ಲಿಸಿದ ಡ್ರೈವರ್ ಹಾಗೂ ಅವನ ಸಹಾಯಕ…. ಡ್ರೈವರ್ ಹಾಗೂ ಸಹಾಯಕನ ಯೋಚನೆ ಹಂಬಲ ಎಷ್ಟು ಇತ್ತೇನೋ ಯಾರಿಗೊತ್ತು…? ಅವರವರ ಮನೆಯಲ್ಲಿ ಅದೆಷ್ಟು ಕನಸು ಕಂಡಿದ್ದರೇನೊ…?

ಪಾಪಿ ಐ.ಆರ್.ಬಿ. ಅನ್ನುವ ವ್ಯವಸ್ಥಿತ ಜಾಲ ನಮಗೆ, ನಮ್ಮವರನ್ನು ತುಂಬಾನೆ ಕಾಡುತ್ತಿದೆ. ಇದಕ್ಕೆ ಕಡಿವಾಣ ಇಲ್ಲವೆ? ರಾಜಾರೋಷವಾಗಿ ಟೋಲ್ ನಲ್ಲಿ ಹಣ ವಸೂಲಿ ಮಾಡುತ್ತೀರಾ… ಪರ್ಯಾಯ ಯೋಚನೆ ಅನ್ನೋದು ಐ.ಆರ್.ಬಿ.ಗೆ ಇಲ್ಲವೆ…?

ಈಗಲೂ ಉತ್ತರ ಕನ್ನಡ-ಉತ್ತರ ಕರ್ನಾಟಕ ಒಂದೇ ಎಂದು ತಿಳಿದುಕೊಂಡಿರುವ ರಾಜಕಾರಣಿಗಳಿಗೆ ಏನೆಂದು ಹೇಳೋದು…?  ಬಾಯಲ್ಲೆಲ್ಲಾ ವೇದಾಂತ ಮಾಡೋದೆಲ್ಲಾ  ರಾದ್ದಾಂತ ಅನ್ನೋ ಥರಾ ಆಗಿದೆ….
ನಿಮ್ಮ ನಿಮ್ಮ ಮನೆಗೆ ಇಂತಹ ಸಮಸ್ಯೆ ಬಂದಾಗ ನಿಮಗೆ ಗೊತ್ತಾಗುತ್ತೆ…..

ನಿತೇಶ್ ಮಹಾಲೆ, ಭಟ್ಕಳ.


ಓದುಗರ ಗಮನಕ್ಕೆ….
ನಿಮ್ಮೂರಿನ ಸಮಸ್ಯೆ, ಆಗು-ಹೋಗುಗಳ ಬಗ್ಗೆ ಬರೆದು ಕಳುಹಿಸಿ. ಓದುಗರ ಬರಹ ವಿಭಾಗದಲ್ಲಿ ಪ್ರಕಟಿಸಲಾಗುವುದು. – ಸಂ.