ಭಟ್ಕಳ : ತಾಲೂಕಿನ ಹಾಡುವಳ್ಳಿಯಲ್ಲಿ ನಿನ್ನೆ (ಜುಲೈ ೨೬) ಸಂಜೆ ಬೀಸಿದ‌ ಭಾರಿ ಗಾಳಿ ಮತ್ತು‌ ಮಳೆಗೆ ಹಾನಿ ಸಂಭವಿಸಿದ ಸ್ಥಳಗಳಿಗೆ ಮಾಜಿ ಶಾಸಕ ಸುನೀಲ ನಾಯ್ಕ(Sunil Naik) ಭೇಟಿ ನೀಡಿದರು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.

ಕಳೆದೆರಡು ದಿನಗಳಿಂದ ಭಟ್ಕಳದಲ್ಲಿ ಭಾರಿ ಬಿರುಗಾಳಿ ಸಹಿತ ಮಳೆ ಆಗುತ್ತಿದೆ. ನಿನ್ನೆ ಬೀಸಿದ ಭಾರೀ ಗಾಳಿ ಮಳೆಗೆ ಭಟ್ಕಳ ತಾಲೂಕಿನ ಹಾಡುವಳ್ಳಿಯಲ್ಲಿ ಅಪಾರ ಹಾನಿ ಸಂಭವಿಸಿದೆ. ನೂರಾರು ಅಡಿಕೆ ತೆಂಗಿನ ಮರಗಳು ನೆಲಕ್ಕುರುಳಿವೆ. ಹತ್ತಾರು ಮನೆಗಳು ಗಾಳಿಯ ರಭಸಕ್ಕೆ ಸಂಪೂರ್ಣ ಹಾನಿಯಾಗಿವೆ. ಕೃಷಿಯನ್ನೆ ನಂಬಿಕೊಂಡ ರೈತ ತನ್ನ ಮನೆಯೊಂದಿಗೆ ತಾನು ಬೆಳೆದ ಬೆಳೆಯನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾನೆ.

ವಿಡಿಯೋ ಸಹಿತ ಈ ಸುದ್ದಿಯನ್ನೂ ಓದಿ : ಗಾಳಿ-ಮಳೆಗೆ ತೋಟ-ಮನೆ ಹಾನಿ

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಮಾಜಿ ಶಾಸಕ ಸುನೀಲ ನಾಯ್ಕ(Sunil Naik), ಸಂತ್ರಸ್ತರಿಗೆ ಸಾಂತ್ವನ ಹೇಳಿದರು. ಈ ಭಾಗದಲ್ಲಿ ಅಲ್ಲಲ್ಲಿ ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಇದರಿಂದ ವಿದ್ಯುತ್ ಸಮಸ್ಯೆಯೂ ಉಂಟಾಗಿದೆ. ವಿಷಯ ತಿಳಿದ ಮಾಜಿ ಶಾಸಕರು ಸಂಬಂಧಿಸಿದ ಅಧಿಕಾರಿಗಳಿಗೆ ದೂರವಾಣಿಯ ಮೂಲಕ ಸಂಪರ್ಕಿಸಿ ಶೀಘ್ರವಾಗಿ ವಿದ್ಯುತ್ ಸಮಸ್ಯೆ ಪರಿಹರಿಸುವಂತೆ ಸೂಚಿಸಿದರು.

ಇದನ್ನೂ ಓದಿ :  ಒಳಚರಂಡಿ ಅವಾಂತರ, ಬಾವಿ ನೀರು ಕಲುಷಿತ

‘ಈ ಹಿಂದೆ ನಮ್ಮ ಸರ್ಕಾರದ ಆಡಳಿತದಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಮಳೆಯಿಂದ ಹಾನಿಗೊಳಗಾದ ಬೆಳೆ, ಜಾನುವಾರು, ಮನೆಗಳಿಗೆ ಹೆಚ್ಚಿನ ಪರಿಹಾರ ನೀಡಿದ್ದರು. ಆದರೆ ಮನೆ ಅರ್ಧ ಪ್ರತಿಶತ ನಷ್ಟವಾದಲ್ಲಿ ಅಂದು ದೂರೆಯುತ್ತಿದ್ದ ೩ ಲಕ್ಷ ಪರಿಹಾರವನ್ನು ಈಗ ೪ ಸಾವಿರಕ್ಕೆ ಹಾಗೂ ಪೂರ್ಣ ಪ್ರಮಾಣದಲ್ಲಿ ಮನೆ ಹಾನಿಗೆ ೫ ಲಕ್ಷ ಇದ್ದದ್ದನ್ನು ೧.೨೦ ಲಕ್ಷ ರೂ.ಗೆ ಈಗಿನ ಕಾಂಗ್ರೆಸ್ ಸರ್ಕಾರ ಕಡಿಮೆ ಮಾಡಿದೆ. ಇದು ಅಮಾನವೀಯ ನಿರ್ಧಾರ. ತಕ್ಷಣ ಹಿಂದೆ ನಮ್ಮ ಸರ್ಕಾರ ನೀಡುತ್ತಿದ್ದಂತೆ ಮೂದಲಿನ ಹಾಗೆ ಪರಿಹಾರವನ್ನು ಸರ್ಕಾರ ನೀಡಬೇಕು’ ಎಂದು ಮಾಜಿ ಶಾಸಕ ಸುನೀಲ ನಾಯ್ಕ ಒತ್ತಾಯಿಸಿದ್ದಾರೆ.