ಭಟ್ಕಳ: ನಗರದಲ್ಲಿ ಅತೀ ವೇಗ ಮತ್ತು ನಿರ್ಲಕ್ಷತನದಿಂದ ವಾಹನ ಚಲಾಯಿಸುವ ಸವಾರರನ್ನು ನಿಯಂತ್ರಿಸಲು ನಗರ ಠಾಣಾ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾಡಾರ್ ಗನ್(Radar Gun) ಕಾರ್ಯಾಚರಣೆ ನಡೆಸಲಾಯಿತು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್‌ ಮಾಡಲು ಇಲ್ಲಿ ಒತ್ತಿ.

ನಗರ ಠಾಣೆಯ ಟ್ರಾಪಿಕ್ ಪಿ.ಎಸ್.ಐ. ನವೀನ್ ನಾಯ್ಕ ಅತೀ ವೇಗವಾಗಿ ವಾಹನ ಚಲಾಯಿಸುತ್ತಿದ್ದ ಮೂವರು ವಾಹನ ಸವಾರರ ವಿರುದ್ಧ ಭಾರತೀಯ ಮೋಟಾರು ವಾಹನ ಕಾಯ್ದೆಯಡಿ ಪ್ರಕರಣ ದಾಖಲಿಸಿ ೩೦೦೦ ರೂ. ದಂಡ ವಿಧಿಸಿದ್ದಾರೆ.

ಇದನ್ನೂ ಓದಿ :  ಇಂದು ಮತ್ತೆ ಮಳೆಯಬ್ಬರ ಸಾಧ್ಯತೆ

ಭಟ್ಕಳ ನಗರ ಸಭಾ ವ್ಯಾಪ್ತಿಯಲ್ಲಿ ವಾಹನಗಳ ವೇಗದ ಮಿತಿ ಗಂಟೆಗೆ 30 ರಿಂದ 35 ಕಿ.ಮೀ ವೇಗ ಕಡ್ಡಾಯವಾಗಿ ನಿಗದಿಪಡಿಸಲಾಗಿದೆ. ಅತಿ ವೇಗ ನಿರ್ಲಕ್ಷ್ಯತನದಿಂದ ವಾಹನ ಚಲಾಯಿಸುವ ಸವಾರರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಭಟ್ಕಳ ಡಿ.ಎಸ್.ಪಿ ಮಹೇಶ ಎಮ್. ಕೆ. ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ : ಶರಾವತಿ‌ ನದಿ ಪಾತ್ರದ ನಿವಾಸಿ ಬಗ್ಗೆ ಎಚ್ಚರ ವಹಿಸಿ

ಭಟ್ಕಳ ಡಿವೈಎಸ್ಪಿ ಮಹೇಶ ಎಮ್. ಕೆ., ಭಟ್ಕಳ ಠಾಣೆ ಪಿಐ ಗೋಪಿಕೃಷ್ಣ ಕೆ.ಆರ್. ಮಾರ್ಗದರ್ಶನದಲ್ಲಿ ಶಿವಾನಂದ ನಾವದಗಿ ಪಿ.ಎಸ್.ಐ (ಕಾ.ಸೂ), ಯಲ್ಲಪ್ಪ ಮಾದರ (ಪಿ.ಎಸ್.ಐ ತನಿಖೆ-1) ಹಾಗೂ ಸಿಬ್ಬಂದಿ ರಾಡಾರ್ ಗನ್(Radar Gun)  ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.