ಸಾಗರ : ಬೆಂಗಳೂರಿಗೆ ಭಟ್ಕಳದಿಂದ ಹೊರಟ ಪ್ರಯಾಣಿಕರಿದ್ದ ಬಸ್ ಬೆಂಕಿಯಿಂದ ಧಗಧಗನೆ ಹೊತ್ತಿ ಉರಿದ (Bus caught fire)
ಘಟನೆ‌ ನಗರದ ಎಲ್.ಬಿ ಕಾಲೇಜು ಬಳಿ ಮಂಗಳವಾರ ಬೆಳಿಗ್ಗೆ ನಡೆದಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.

ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಗೆ ಸೇರಿದ ಬಸ್ ಭಟ್ಕಳದಿಂದ ಬೆಳಿಗ್ಗೆ ೭.೩೦ಕ್ಕೆ ಹೊರಟಿತ್ತು. ಹೊನ್ನಾವರ, ಸಾಗರ ಮಾರ್ಗವಾಗಿ ಬೆಂಗಳೂರಿಗೆ ತೆರಳುತ್ತಿತ್ತು ಬಸ್ಸಿನಲ್ಲಿ ಸುಮಾರು ೧೪ ಜನ ಪ್ರಯಾಣಿಕರಿದ್ದರು.

ಇದನ್ನೂ ಓದಿ : ಜಾವೆಲಿನ್ ಎಸೆತ ಸ್ಪರ್ಧೆಯಲ್ಲಿ ರಾಜ್ಯಕ್ಕೆ ತೃತೀಯ

ಬೆಳಿಗ್ಗೆ ೧೧.೧೫ರ ಸುಮಾರಿಗೆ ಸಾಗರ ಪ್ರವೇಶಿಸುವಾಗ ಬ್ಯಾಟರಿ ಬಾಕ್ಸ್ ನಲ್ಲಿ ಹೊಗೆ ಕಾಣಿಸಿಕೊಂಡಿದೆ (Bus caught fire). ತಕ್ಷಣ ಚಾಲಕ ಬಸ್ ನಿಲ್ಲಿಸಿದ್ದಾರೆ. ನಿರ್ವಾಹಕರು ಪ್ರಾಯಣಿಕರನ್ನು ಬಸ್ಸಿನಿಂದ ಕೆಳಗೆ ಇಳಿಸಿದ್ದಾರೆ . ಕ್ಷಣಮಾತ್ರದಲ್ಲಿಯೇ ಬಸ್ ಬೆಂಕಿಯಿಂದ ಹೊತ್ತಿ ಉರಿಯಲಾರಂಭಿಸಿದೆ ಎಂದು ತಿಳಿದುಬಂದಿದೆ. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ವಾಹನ‌ ಬೆಂಕಿಯನ್ನು ನಂದಿಸಿದೆ. ಚಾಲಕ ಮತ್ತು ನಿರ್ವಾಹಕರ ಸಮಯಪ್ರಜ್ಞೆಯಿಂದ ಪ್ರಯಾಣಿಕರು ಪಾರಾಗಿದ್ದಾರೆ.