ಭಟ್ಕಳ: ರಾಜ್ಯಾದ್ಯಂತ ಪಹಣಿ ಖಾತೆಯೊಂದಿಗೆ ಆಧಾರ್ ನೋಂದಣಿ ಪ್ರಕ್ರಿಯೆ ಆರಂಭಗೊಂಡಿದೆ. ಸರಕಾರದ ಅಧಿಸೂಚನೆಯಂತೆ ಜುಲೈ 31 ಕೊನೆಯ ದಿನಾಂಕವಾಗಿತ್ತು. ಆದರೆ ಇದೀಗ ಭಟ್ಕಳ ತಾಲೂಕು ವ್ಯಾಪ್ತಿಯಲ್ಲಿ ಆಧಾ‌ರ್ ಜೋಡಣೆಗೆ (aadhar link) ಆ. ೧೫ ಕೊನೆಯ ದಿನಾಂಕವನ್ನಾಗಿ ವಿಸ್ತರಿಸಲಾಗಿದೆ ಎಂದು ತಹಶೀಲ್ದಾ‌ರ ನಾಗರಾಜ ನಾಯ್ಕಡ ಹೇಳಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.

ಗ್ರಾಮೀಣ ಹಾಗೂ ಇತರೆ ಭಾಗಗಳಲ್ಲಿ ತಂತ್ರಾಂಶದ ಅಡಚಣೆಯಿಂದಾಗಿ ಪಹಣಿಗೆ ಆಧಾರ ಸಂಖ್ಯೆಯನ್ನು ಜೋಡಿಸುವಲ್ಲಿ (aadhar link) ವಿಳಂಬವಾಗುತ್ತಿದೆ. ಇದನ್ನು ಮನಗಂಡು ಕೊನೆಯ ದಿನಾಂಕವನ್ನು ಆಗಸ್ಟ್ ರವರೆಗೆ ವಿಸ್ತರಿಸಲಾಗಿದೆ. ಪಹಣಿ ಅಥವಾ ಆರ್.ಟಿ.ಸಿ.ಗೆ ಆಧಾರ ಜೋಡಣೆಯಿಂದ ಅಕ್ರಮ ಪಹಣಿ ನೋಂದಣಿಯನ್ನು ತಪ್ಪಿಸಬಹುದು. ಅಲ್ಲದೆ ಸರ್ಕಾರದಿಂದ ಕೃಷಿಗೆ ಸಂಬಂಧಪಟ್ಟ ಸವಲತ್ತುಗಳನ್ನು ಪಡೆಯಲು ಇದು ಸಹಕಾರಿಯಾಗುತ್ತದೆ ಎಂದು ತಹಶೀಲ್ದಾ‌ರ್ ನಾಗರಾಜ ನಾಯ್ಕಡ ಹೇಳಿದ್ದಾರೆ.

ಇದನ್ನೂ ಓದಿ : ಭಕ್ತಿಮಾರ್ಗ ಮುಕ್ತಿಗೆ ದಾರಿ: ರಾಘವೇಶ್ವರ ಶ್ರೀ

ತಾಲೂಕಿನ ಎಲ್ಲಾ ಪಹಣಿದಾರರು ತಕ್ಷಣ ತಮ್ಮ ತಮ್ಮ ವ್ಯಾಪ್ತಿಯ ಗ್ರಾಮ ಆಡಳಿತ ಅಧಿಕಾರಿ ಕಚೇರಿಯನ್ನು ಸಂಪರ್ಕಿಸಿ ಆಧಾ‌ರ್ ಕಾರ್ಡ್ ಮತ್ತು ಆಧಾರ್ ಗೆ ನೋಂದಾಯಿಸಲ್ಪಟ್ಟ ಮೊಬೈಲ್ ಹಾಗೂ ಆರ್ ಟಿ ಸಿ ಯನ್ನು ಅಥವಾ ಪಹಣಿಯನ್ನು ತೋರಿಸಿ ತಕ್ಷಣ ತಂತ್ರಾಂಶದ ಸಹಾಯದಿಂದ ನೋಂದಣಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ಎಲ್ಲಾ ಪಹಣಿದಾರರು ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಂಡು ತಮ್ಮ ತಮ್ಮ ಪಹಣಿಗಳ ಪೋರ್ಝರಿ ನೋಂದಣಿಯನ್ನು ತಪ್ಪಿಸುವಂತೆ ಕೋರಿದ್ದಾರೆ.

ಇದನ್ನೂ ಓದಿ : ಆಗಸ್ಟ್‌ ೮ರಂದು ವಿವಿಧೆಡೆ ಅಡಿಕೆ ಧಾರಣೆ