ಭಟ್ಕಳ : ಮೈಸೂರು ವಿಭಾಗದ ಸಕಲೇಶಪುರ-ಬಾಳ್ಳುಪೇಟೆ ನಿಲ್ದಾಣಗಳ ನಡುವೆ ಭೂಕುಸಿತದಿಂದಾಗಿ ರೈಲ್ವೆ ಹಳಿ ದುರಸ್ತಿಕಾರ್ಯ ಮುಂದುವರಿದಿರುವುದರಿಂದ ಇನ್ನೆರಡು ದಿನಗಳ ಕಾಲ ರೈಲು ಸೇವೆಗಳನ್ನು ರದ್ದುಗೊಳಿಸಲಾಗಿದೆ (train service cancelled).

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್‌ ಮಾಡಲು ಇಲ್ಲಿ ಒತ್ತಿ.

ಆ. ೧೨ ಮತ್ತು ೧೩ರ ರೈಲು ಸಂಖ್ಯೆ ೧೬೫೯೫ ಬೆಂಗಳೂರು-ಕಾರವಾರ ಎಕ್ಸ್‌ಪ್ರೆಸ್ ಪ್ರಯಾಣವನ್ನು ರದ್ದುಗೊಳಿಸಲಾಗಿದೆ (train service cancelled). ಅದೇ ರೀತಿ ಆ.೧೩ರ ರೈಲು ಸಂಖ್ಯೆ ೧೬೫೯೬ ಕಾರವಾರ-ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ಪ್ರ ಯಾಣವನ್ನು ರದ್ದುಮಾಡಲಾಗಿದೆ. ಆ. ೧೨ ಮತ್ತು ೧೩ರಂದು ಹೊರಡುವ ರೈಲು ಸಂಖ್ಯೆ ೧೬೫೮೫ ಬೆಂಗಳೂರು – ಮುರ್ಡೇಶ್ವರ ಎಕ್ಸ್‌ಪ್ರೆಸ್ ಮತ್ತು ರೈಲು ಸಂಖ್ಯೆ ೧೬೫೮೬ ಮುರ್ಡೇಶ್ವರ – ಬೆಂಗಳೂರು ಎಕ್ಸ್‌ಪ್ರೆಸ್ ಸಂಚಾರ ಕೂಡ ರದ್ದಾಗಿದೆ. ಆ. ೧೩ರಂದು ಹೊರಡುವ ರೈಲು ಸಂಖ್ಯೆ ೧೬೫೧೬ ಕಾರವಾರ- ಯಶವಂತಪುರ ಎಕ್ಸ್‌ಪ್ರೆಸ್ ಮತ್ತು ರೈಲು ಸಂಖ್ಯೆ ೧೬೫೭೫ ಯಶವಂತಪುರ-ಕಾರವಾರ ಎಕ್ಸ್‌ಪ್ರೆಸ್ ಪ್ರಯಾಣವನ್ನು ರದ್ದುಗೊಳಿಸಲಾಗಿದೆ.

ಇದನ್ನೂ ಓದಿ : ಹರ್ ಘರ್ ತಿರಂಗಾ ಅಭಿಯಾನ ಜಾಗೃತಿಗಾಗಿ ಬೈಕ್ ಜಾಥಾ

ಇದಲ್ಲದೆ, ಆ.೧೨ ಮತ್ತು ೧೩ರಂದು ಹೊರಡುವ ರೈಲು ಸಂಖ್ಯೆ ೦೭೩೭೭ ವಿಜಯಪುರ – ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್ ವಿಶೇಷ, ರೈಲು ಸಂಖ್ಯೆ ೧೬೫೧೨ ಕಣ್ಣೂರು– ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್, ರೈಲು ಸಂಖ್ಯೆ ೧೬೫೧೧ ಬೆಂಗಳೂರು – ಕಣ್ಣೂರು ಎಕ್ಸ್‌ಪ್ರೆಸ್ ರೈಲುಗಳ ಸಂಚಾರ ರದ್ದು ಮಾಡಲಾಗಿದೆ. ಆ. ೧೩ ಮತ್ತು ೧೪ರಂದು ಪ್ರಾರಂಭವಾಗುವ ರೈಲು ಸಂಖ್ಯೆ ೦೭೩೭೮ ಮಂಗಳೂರು ಸೆಂಟ್ರಲ್ – ವಿಜಯಪುರ ಎಕ್ಸ್‌ಪ್ರೆಸ್ ವಿಶೇಷ ರೈಲಿನ ಸಂಚಾರವೂ ರದ್ದಾಗಿದೆ.