ಭಟ್ಕಳ(Bhatkal): ರಸ್ತೆ ದಾಟುತ್ತಿದ್ದ ಬಿಜೆಪಿ ಮುಖಂಡನ(BJP leader) ಮೇಲೆ ತಾಲೂಕಿನ ಕಾಲೇಜು ವಾಹನ ಚಾಲಕನೋರ್ವ ಅನಾವಶ್ಯಕ ಹಲ್ಲೆ ಮಾಡಿರುವ ಘಟನೆ ಭಟ್ಕಳ ಶಂಸುದ್ದೀನ್ ಸರ್ಕಲ್ ಸಮೀಪ ನಡೆದಿದೆ. ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಬಿಜೆಪಿ ಹಿಂದುಳಿದ ಮೋರ್ಚಾ ಜಿಲ್ಲಾ ಕಾರ್ಯದರ್ಶಿ (bjp leader), ಮುಠ್ಠಳ್ಳಿ ಮೂಡಭಟ್ಕಳ ನಿವಾಸಿ ರಾಘವೇಂದ್ರ ರಾಮಚಂದ್ರ ನಾಯ್ಕ (36) ಹಲ್ಲೆಗೊಳಗಾದ ವ್ಯಕ್ತಿ. ಇವರು ಹಲವು ವರ್ಷಗಳಿಂದ ಟಿ.ವಿ ಕೇಬಲ್ ಅಪರೇಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇಂದು ಮಧ್ಯಾಹ್ನ ೧ ಗಂಟೆಯ ಸುಮಾರಿಗೆ ತನ್ನ ವೈಯಕ್ತಿಕ ಕೆಲಸ ನಿಮಿತ್ತ ಕಾರವಾರದಿಂದ ಕಾರಿನ ಮೂಲಕ ಬಂದಿದ್ದರು.
ಇದನ್ನೂ ಓದಿ : ಸೆಪ್ಟೆಂಬರ್ ೨ರಂದು ವಿವಿಧೆಡೆ ಅಡಿಕೆ ಧಾರಣೆ
ಭಟ್ಕಳ ಶಂಸುದ್ದೀನ್ ಸರ್ಕಲ್ ಬಳಿ ಇಳಿದು ಕೋಲಾ ಪ್ಯಾರಡೈಸ್ ಸಮೀಪವಿದ್ದ ನನ್ನ ಕೇಬಲ್ ಕಚೇರಿಗೆ ಹೋಗಲು ರಸ್ತೆ ದಾಟುತ್ತಿದ್ದ ವೇಳೆ ಕೋಲಾ ಪ್ಯಾರಡೈಸ್ ರಸ್ತೆಯಿಂದ ಬಂದ ಕಾಲೇಜಿನ ವಾಹನ ಅತಿವೇಗವಾಗಿ ನನ್ನ ಮೇಲೆ ಬಂತು ಎಂದು ರಾಘವೇಂದ್ರ ದೂರಿದ್ದಾರೆ. ಇದರಿಂದಾಗಿ ನಾನು ರಸ್ತೆ ಪಕ್ಕದಲ್ಲಿ ಬಿದ್ದೆ. ಬಳಿಕ ನಿನಗೆ ಕಣ್ಣು ಕಾಣಿಸುದಿಲ್ಲವ ಎಂದು ವಾಹನ ಚಾಲಕನಿಗೆ ಪ್ರಶ್ನೆ ಮಾಡಿದೆ. ಬಳಿಕ ವಾಹನ ಚಾಲಕ ಬಸ್ ಅನ್ನು ಅಲ್ಲೇ ಮುಂದೆ ನಿಲ್ಲಿಸಿ ಬಂದು ನನ್ನ ಅಡ್ಡಗಟ್ಟಿ ತಡೆದು ಅವಾಚ್ಯ ಶಬ್ದದಿಂದ ಬೈದಿದ್ದಾನೆ. ನನ್ನನ್ನು ಮತ್ತೆ ರಸ್ತೆ ಮೇಲೆ ತಳ್ಳಿ ಕಾಲಿನಿಂದ ಒದ್ದು ನಿನ್ನನ್ನು ಸುಮ್ಮನೆ ಬಿಡುವುದಿಲ್ಲ, ನಿನ್ನನ್ನು ಕೊಲೆ ಮಾಡುತ್ತೇನೆ ಎಂದು ಹೊಡೆದಿದ್ದಾನೆ. ಅಲ್ಲೇ ಸಮೀಪ ಕರ್ತವ್ಯ ನಿರತ ಪೊಲೀಸರು ಸ್ಥಳಕ್ಕೆ ಬರುತ್ತಿರುವುದನ್ನು ನೋಡಿ ವಾಹನ ಚಾಲಕ ಓಡಿ ಹೋಗಿದ್ದಾನೆ. ನಂತರ ನನ್ನ ಸ್ನೇಹಿತರು ನನ್ನ ನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ ಎಂದು ಹಲ್ಲೆಗೊಳಗಾದ ರಾಘವೇಂದ್ರ ನಾಯ್ಕ ಆರೋಪಿಸಿದ್ದಾರೆ.
ವಿಡಿಯೋ ಸಹಿತ ಇದನ್ನೂ ಓದಿ : ಸಿಪಿಐ ದೌರ್ಜನ್ಯ ಖಂಡಿಸಿ ಭಟ್ಕಳ ಪತ್ರಕರ್ತರಿಂದ ಮನವಿ
ಸದ್ಯ ಕಾಲೇಜು ವಾಹನ ಚಾಲಕನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚಾಲಕನ ವಿರುದ್ಧ ಪ್ರಕರಣ ದಾಖಲಿಸಿರುವ ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.
ಇದನ್ನೂ ಓದಿ : ರೈಲು ಬಡಿದು ವೃದ್ಧೆ ಸಾವು
ರಾಘವೇಂದ್ರ ನಾಯ್ಕ ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಿಂದೂ ಮುಖಂಡ ಗೋವಿಂದ ನಾಯ್ಕ ಹಾಗೂ ಹಿಂದೂ ಕಾರ್ಯಕರ್ತರು ಆಸ್ಪತ್ರೆಗೆ ಭೇಟಿ ನೀಡಿ ರಾಘವೇಂದ್ರ ನಾಯ್ಕರ ಯೋಗ ಕ್ಷೇಮ ವಿಚಾರಿಸಿದ್ದಾರೆ.
ಬಿಜೆಪಿ ಮುಖಂಡ ರಾಘವೇಂದ್ರ ನಾಯ್ಕ ಹೇಳಿದ್ದೇನು? ಯೂಟ್ಯೂಬ್ ಚಾನೆಲ್, ಇನ್ಸ್ಟಾಗ್ರಾಂ ಮತ್ತು ಫೇಸ್ಬುಕ್ ನಲ್ಲಿ ವಿಡಿಯೋ ವೀಕ್ಷಿಸಿ.