ಗಂಗೊಳ್ಳಿ (Gangolli): ಮರವಂತೆಯ (Maravanthe) ಅಂಚೆ ಕಚೇರಿಯಲ್ಲಿ (post office) ಕಳ್ಳತನದ ಆರೋಪದಡಿ ಅಪ್ರಾಪ್ತ ಸಹಿತ ಇಬ್ಬರನ್ನು ಗಂಗೊಳ್ಳಿ ಠಾಣೆ ಪೊಲೀಸರು (gangolli police) ಭಟ್ಕಳದ (Bhatkal) ಜಾಲಿ ಕ್ರಾಸ್ ಬಳಿ ನಿನ್ನೆ ಮಂಗಳವಾರ ಬಂಧಿಸಿದ್ದಾರೆ (arrested).

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಭಟ್ಕಳ ನಿವಾಸಿ ಫೌಜಾನ್ ಅಹಮ್ಮದ್ (19) ಮತ್ತು ಇನ್ನೊಬ್ಬ ಅಪ್ರಾಪ್ತ ಬಂಧಿತ ಆರೋಪಿಗಳು. ಆರೋಪಿಯಿಂದ ಕೃತ್ಯಕ್ಕೆ ಬಳಸಿದ್ದ ಮೋಟಾರ್ ಬೈಕ್ ವಶಪಡಿಸಿಕೊಳ್ಳಲಾಗಿದೆ. ಪೊಲೀಸರು ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.

ಇದನ್ನೂ ಓದಿ :  ಸದ್ಗುರು ಬ್ರಹ್ಮಾನಂದ ಶ್ರೀಗಳ ಪಟ್ಟಾಭಿಷೇಕ ವರ್ಧಂತಿ

ಗಂಗೊಳ್ಳಿ ಠಾಣೆಯ ಎಸ್‌ಐ ಹರೀಶ್‌ ಆರ್‌., ಎಸ್‌ಐ ಬಸವರಾಜ ಕನಶೆಟ್ಟಿ ಹಾಗೂ ಕಾನ್‌ಸ್ಟೆಬಲ್‌ಗಳಾದ ಸಂದೀಪ್‌ ಕುರಣಿ, ರಾಜು ನಾಯ್ಕ್, ನಾಗರಾಜ, ದಿನೇಶ ಅವರನ್ನೊಳಗೊಂಡ ಪೊಲೀಸ್‌ ತಂಡ (Gangolli police) ಅಪರಾಧ ಕೃತ್ಯ ನಡೆದ ಸ್ಥಳದ ಸಿಸಿಟಿವಿ ದೃಶ್ಯಾವಳಿ (CCTV footage) ಆಧರಿಸಿ ಆರೋಪಿಗಳನ್ನು ಬಂಧಿಸಿದೆ.

ಇದನ್ನೂ ಓದಿ :  ಕಾರವಾರ ಶೈಕ್ಷಣಿಕ ಜಿಲ್ಲೆಯ ೧೫ ಶಿಕ್ಷಕರಿಗೆ ಜಿಲ್ಲಾ ಪ್ರಶಸ್ತಿ