ಭಟ್ಕಳ (Bhatkal): ವರ್ಷಂಪ್ರತಿ ಆಚರಿಸುವಂತಹ ಗಣೇಶೋತ್ಸವ ನಿಮಿತ್ತ ಈ ವರ್ಷ ಸಹ ಭಟ್ಕಳ ತಾಲೂಕಿನಾದ್ಯಂತ ಗಣೇಶ ಚತುರ್ಥಿಯಂದು (Ganesh Chathurti) ಶ್ರೀ ಗಣೇಶನನ್ನು ಸಂಭ್ರಮ ಮತ್ತು ಸಾಂಪ್ರದಾಯಿಕವಾಗಿ ಬರಮಾಡಿಕೊಳ್ಳಲಾಯಿತು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಸಂಕಷ್ಟ ಹರಣ ವಿಘ್ನ ನಿವಾರಕ ಎಂದೆ ಖ್ಯಾತಿ ಪಡೆದಿರುವ ವಿಘ್ನ ನಿವಾರಕ ಗಣೇಶ ಚತುರ್ಥೀಯನ್ನು ಸಮಸ್ಥ ಭಕ್ತವೃಂದವು ತಾಲೂಕಿನಾದ್ಯಂತ ಸರಳವಾಗಿ ಆಚರಿಸುದರ ಮೂಲಕ ದೈವ ಕೃಪೇಗೆ ಪಾತ್ರರಾದರು. ಭಟ್ಕಳ ತಾಲೂಕಿನಾದ್ಯಂತ ವಿವಿದೆಡೆ ಸ್ಥಾಪಿಸಲ್ಪಟ್ಟ ತಾಲೂಕಿನಾದ್ಯಂತ ಗಣಪತಿ ವಿಗ್ರಹವನ್ನು ಮೇರವಣಿಗೆಯ ಮುಖಾಂತರ ತಂದು ಗಣೇಶನ ವಿಗ್ರಹಗಳನ್ನು ಭಕ್ತರು ಭಕ್ತಿಪರವಶರಾಗಿ ಪೂಜಿಸುವುದರ ಮೂಲಕ ತಾಲೂಕಿನಾದ್ಯಂತ ಹಬ್ಬವನ್ನು ಆಚರಿಸಿದರು.

ಇದನ್ನೂ ಓದಿ : ಭಗವಂತ- ಭಕ್ತರ ನಡುವಿನ ಸಂಬಂಧಸೇತು ಗುರು: ರಾಘವೇಶ್ವರ ಶ್ರೀ

ಮುಟ್ಟಳಿ ಮೂಡಭಟ್ಕಳದ ಗಣಪ, ಕೆ.ಎಸ್ ಆರ್ ಟಿ ಸಿ ನೌಕರರ ಸಂಘದ ವತಿಯಿಂದ ಪೂಜಿತ ಗಣಪ, ಭಟ್ಕಳ ನ್ಯೂ ಇಂಗ್ಲೀಷ ಸ್ಕೂಲ್ ಗಣಪ, ತಲಗೋಡು ಕೋಟಿ ಮನೆ ಗಣಪ, ಸೋನಾರಕೇರಿ ದೈವಜ್ಞ ಗಣೇಶ, ಮಹಾಲೆ ಮನೆ ಗಣಪತಿ, ತಲಾಂದ ಸಾರ್ವಜನಿಕರ ಗಣಪತಿ, ಹೆಬ್ಬಳೆ ಗಾಂಧಿನಗರದ ಸಾರ್ವಜನಿಕ ಗಣಪ, ಕವೂರ ಸಾರ್ವಜನಿಕ ಗಣಪತಿ, ಸಬ್ಬತ್ತಿ ಜ್ವಾಳದ ಮುಲ್ಲಿ ಗಣಪ, ಮಣ್ಕುಳಿ ಸಾರ್ವಜನಿಕ ಗಣಪ, ಭಟ್ಕಳದ ಆಟೋಚಾಲಕ ಮಾಲಕರ ಗಣಪ, ನಿಚ್ಚಲಮಕ್ಕಿ ವೆಂಕಟರಮಣ ಗಣಪ, ಹನುಮಾನ್ ದೇವಸ್ಥಾನದ ಗಣಪ, ಪೊಲೀಸ್‌ ಠಾಣೆಯ ಗಣಪ, ಮುರ್ಡೆಶ್ವರ ಸಾರ್ವಜನಿಕ ಶ್ರೀ ಸಿದ್ದಿವಿನಾಯಕ ಸೇವಾ ಸಮಿತಿಯ ಗಣೇಶ, ಹೀಗೆ ತಾಲೂಕಿನಾದ್ಯಂತ ಈ ವರ್ಷವೂ ಕೂಡ ಗಣೇಶನನ್ನು ಪ್ರತಿಷ್ಠಾಪಿಸಿ ಗಣೇಶ ಚತುರ್ಥಿಯನ್ನು (Ganesh Chathurti) ಪೂಜಿಸಲಾಗುತ್ತಿದೆ.

ಈ ಸುದ್ದಿಯ ವಿಡಿಯೋವನ್ನು ಯೂಟ್ಯೂಬ್ ಚಾನೆಲ್ಇನ್ಸ್ಟಾಗ್ರಾಂ ಮತ್ತು ಫೇಸ್‌ಬುಕ್‌ ನಲ್ಲಿ ವೀಕ್ಷಿಸಬಹುದು.