ಭಟ್ಕಳ(Bhatkal) : ಪಿಯು ವಿದ್ಯಾರ್ಥಿಗಳ ಉ.ಕ. (Uttarakannada) ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ (PU sports) ಭಟ್ಕಳ ತಾಲೂಕು ಸತತ ೨ನೇ ಬಾರಿ ಸಮಗ್ರ ವೀರಾಗ್ರಣಿ (Veeragrani) ಪ್ರಶಸ್ತಿಯನ್ನು ಪಡೆದುಕೊಂಡಿದೆ. ಶಿರಸಿ (Sirsi) ತಾಲೂಕಿನ ಮಾರಿಕಾಂಬಾ ಪದವಿ ಪೂರ್ವ ಕಾಲೇಜಿನಲ್ಲಿ ಈ ಕ್ರೀಡಾಕೂಟ ನಡೆದಿತ್ತು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಭಟ್ಕಳದ ದಿ ನ್ಯೂ ಇಂಗ್ಲೀಷ್ ಪಿ ಯು ಕಾಲೇಜಿನ ೩೬ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ (state level) ಆಯ್ಕೆಯಾಗಿದ್ದಾರೆ. ಕರಾಟೆ (karate) ಸ್ಪರ್ಧೆಯಲ್ಲಿ ಪ್ರತ್ಯಕ್ಷ ನಾಯ್ಕ, ವಿನುತಾ ನಾಯ್ಕ, ರಾಧಿಕಾ ಗೊಂಡ, ರಕ್ಷಾ ಖಾರ್ವಿ, ಚೆಸ್ (chess) ಸ್ಪರ್ಧೆಯಲ್ಲಿ ಅಂಕಿತ ನಾಯ್ಕರ್ ಹಾಗೂ ಜಾಕ್ಷನ್ ಡಿಸೋಜಾ ಗುಡ್ಡಗಾಡು ಓಟದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ :  ಬಿಜೆಪಿ ಯುವ ಮೋರ್ಚಾದಿಂದ ಸದಸ್ಯತ್ವ ಅಭಿಯಾನ

ಬಾಲಕಿಯರ ವಿಭಾಗದಲ್ಲಿ ದೀಕ್ಷಾ ದೇವಾಡಿಗ ೮೦೦ಮೀ, ೧೫೦೦ ಮೀ, ೩೦೦೦ಮೀ, ೪*೪೦೦ಮೀ ರೀಲೆ ಮತ್ತು ಗುಡ್ಡಗಾಡು ಓಟದಲ್ಲಿ ಪ್ರಥಮ ಸ್ಥಾನವನ್ನು ಪಡೆದು ವೈಯಕ್ತಿಕ ವೀರಾಗ್ರಣಿ ಪಡೆದುಕೊಂಡಿದ್ದಾರೆ. ಪವಿತ್ರ ಮಡಿವಾಳ ಉದ್ದ ಜಿಗಿತದಲ್ಲಿ ಪ್ರಥಮ, ೪*೧೦೦ ಮೀ ರೀಲೆ ಪ್ರಥಮ, ತ್ರಿವಿಧ ಜಿಗಿತದಲ್ಲಿ ದ್ವಿತೀಯ ಪಡೆದಿದ್ದಾರೆ. ಮೋನಿಕಾ ದೇವಾಡಿಗ ೪೦೦ಮೀ. ದ್ವಿತೀಯ, ೪*೪೦೦ ಮೀ ರೀಲೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಸಿಂಚನಾ ಈಶ್ವರ ನಾಯ್ಕ ೮೦೦ ಮೀ ಓಟದಲ್ಲಿ ದ್ವಿತೀಯ, ೪*೪೦೦ ಮೀ ರೀಲೆ ಪ್ರಥಮ ಪಡೆದಿದ್ದಾರೆ.

ಇದನ್ನೂ ಓದಿ : ಎಡಿಜಿಪಿ ಚಂದ್ರಶೇಖರ ಅಮಾನತಿಗೆ ಜೆಡಿಎಸ್ ಆಗ್ರಹ

ಆಶೀತಾ ವೆಂಕಟೇಶ ನಾಯ್ಕ ೧೫೦೦ ಮೀ. ದ್ವಿತೀಯ, ೩೦೦೦ ಮೀ. ದ್ವಿತೀಯ, ೪*೪೦೦ ಮೀ. ರೀಲೆ ಪ್ರಥಮ, ಗುಡ್ಡಗಾಡು ಓಟದಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಭವ್ಯ ದೇವಾಡಿಗ ಎತ್ತರ ಜಿಗಿತ ಪ್ರಥಮ, ೧೦೦ಮೀ. ಹರ್ಡಲ್ಸ ದ್ವಿತೀಯ, ೪*೧೦೦ ಮೀ. ರೀಲೆ ಪ್ರಥಮ ಪಡೆದಿದ್ದಾರೆ. ನಂದಿನಿ ನಾಯ್ಕ ೪೦೦ ಹರ್ಡಲ್ಸ ದ್ವಿತೀಯ ಗಳಿಸಿದರೆ, ರೂಪಾಕ್ಷಿ ಮೊಗೇರ ಚಕ್ರ ಎಸೆತದಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.

ವಿಡಿಯೋ ಸಹಿತ ಇದನ್ನೂ ಓದಿ : ಹೊಳೆಯಲ್ಲಿ ಬಿದ್ದು ಕಾಣೆಯಾಗಿದ್ದ ಕೃಷಿಕನ ಮೃತದೇಹ ಪತ್ತೆ

ಬಾಲಕರ ವಿಭಾಗದಲ್ಲಿ ಧನರಾಜ ಎನ್. ನಾಯ್ಕ ೧೦೦ ಮೀ ಓಟದಲ್ಲಿ ಪ್ರಥಮ. ಹಿತೇಶ ಎಮ್. ನಾಯ್ಕ ೪*೪೦೦ ಮೀ ರೀಲೆ ಪ್ರಥಮ. ಗುರುರಾಜ ಗಣಪತಿ ನಾಯ್ಕ ೪*೪೦೦ ಮೀ ರೀಲೆ ಪ್ರಥಮ. ಕೇಶವ ಎಮ್ ನಾಯ್ಕ ೪*೪೦೦ ಮೀ ರೀಲೆ ಪ್ರಥಮ. ದೀಪಕ ಪಿ. ನಾಯ್ಕ ೪*೪೦೦ ಮೀ ರೀಲೆ ಪ್ರಥಮ. ಲೋಹಿತ್ ಮರಾಠಿ ಚಕ್ರ ಎಸೆತದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.

ಬಾಲಕಿಯರ ವಿಭಾಗದ ಗುಂಪು ಆಟಗಳಾದ ಕಬಡ್ಡಿ ಪ್ರಥಮ, ಬಾಲ್ ಬ್ಯಾಡ್ಮಿಂಟನ್, ಖೋ-ಖೋ, ಹಾಗೂ ಶಟಲ್ ಬ್ಯಾಡ್ಮಿಂಟನ್‌ನಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ (PU Sports) ಉತ್ತಮ ಸಾಧನೆ ತೋರಿದ ಎಲ್ಲಾ ವಿದ್ಯಾರ್ಥಿಗಳಿಗೆ ಭಟ್ಕಳ ಎಜ್ಯುಕೇಶನ ಟ್ರಸ್ಟಿನ ಅಧ್ಯಕ್ಷ ಡಾ. ಸುರೇಶ ವಿ. ನಾಯಕ, ಮ್ಯಾನೇಜಿಂಗ್ ಟ್ರಸ್ಟಿ ಆರ್. ಜಿ. ಕೊಲ್ಲೆ, ಟ್ರಸ್ಟಿ ಮ್ಯಾನೇಜರ್ ರಾಜೇಶ ನಾಯಕ, ಪ್ರಾಂಶುಪಾಲ ಡಾ. ವಿರೇಂದ್ರ ವಿ. ಶಾನಬಾಗ, ದೈಹಿಕ ಶಿಕ್ಷಣ ನಿರ್ದೇಶಕ ಕೃಷ್ಣಪ್ಪ ನಾಯ್ಕ ಹಾಗೂ ಬೋಧಕ- ಬೋಧಕೇತರ ಸಿಬ್ಬಂದಿ ಅಭಿನಂದಿಸಿದ್ದಾರೆ.