ಭಟ್ಕಳ (Bhatkal): ೪ನೇ ಭಾರತೀಯ ಓಪನ್ ಅಥ್ಲೆಟಿಕ್ಸ್ (athletics) ಸ್ಪರ್ಧೆ- ೨೦೨೪ರ ಜೂನಿಯರ್ ಮತ್ತು ೨೩ ವಯೋಮಿತಿಯ ಕ್ರೀಡಾಕೂಟದ ರಾಷ್ಟ್ರಮಟ್ಟದ ಡಿಸ್ಕಸ್ ಥ್ರೋ (discus throw) ಸ್ಪರ್ಧೆಯಲ್ಲಿ ಭಟ್ಕಳದ ಅಬ್ಬಿಹಿತ್ಲು ನಿವಾಸಿ ನಾಗೇಂದ್ರ ಅಣ್ಣಪ್ಪ ನಾಯ್ಕ ತೃತೀಯ ಸ್ಥಾನ ಪಡೆದಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಪ್ರಸ್ತುತ ನಾಗೇಂದ್ರ ನಾಯ್ಕ ಮೂಡಬಿದಿರೆ (Moodabidre) ಆಳ್ವಾಸ್ ಕಾಲೇಜಿನಲ್ಲಿ (Alvas College) ಅಂತಿಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಬಿಹಾರದ (Bihar) ಪಾಟ್ನಾದಲ್ಲಿ (Patna) ಸೆ.೨೮ ರಿಂದ ೩೦ ರವರೆಗೆ ನಡೆದ ಸ್ಪರ್ಧೆಯಲ್ಲಿ ದೇಶದ ವಿವಿದ ರಾಜ್ಯಗಳಿಂದ ಸಾವಿರಾರು ಕ್ರೀಡಾಪಟುಗಳು ಭಾಗಿಯಾಗಿದ್ದರು. ಅಥ್ಲೆಟಿಕ್ಸ್ (Athletics) ಸ್ಪರ್ಧೆಯಲ್ಲಿ ಇವರು ೫೧.೯೮ ಮೀ. ದೂರ ಡಿಸ್ಕಸ್ ಎಸೆದು ತೃತೀಯ ಸ್ಥಾನ ಪಡೆದು ಅಂತರಾಷ್ಟ್ರೀಯ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ : ಸತತ ೨ನೇ ಬಾರಿ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಭಟ್ಕಳ ತಾಲೂಕಿಗೆ ಸಮಗ್ರ ವೀರಾಗ್ರಣಿ