ಭಟ್ಕಳ (Bhatkal): ಭಾರತೀಯ ಜನತಾ ಪಾರ್ಟಿ (BJP) ಭಟ್ಕಳ ಮಂಡಲ ಹಾಗೂ ಓಬಿಸಿ ಮೋರ್ಚಾ ಸಹಯೋಗದಲ್ಲಿ ಭಟ್ಕಳ ಸಂತೆ ಮಾರುಕಟ್ಟೆಯಲ್ಲಿ ಸದಸ್ಯತ್ವ ಅಭಿಯಾನ (Membership campaign) ಹಮ್ಮಿಕೊಳ್ಳಲಾಗಿತ್ತು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಈ ಸಂದರ್ಭದಲ್ಲಿ ಭಟ್ಕಳ ಮಂಡಲದ ಅಧ್ಯಕ್ಷ ಶ್ರೀ ಲಕ್ಷ್ಮೀನಾರಾಯಣ ನಾಯ್ಕ ಮಾತನಾಡಿ, ಈ ಸದಸ್ಯತ್ವ ಅಭಿಯಾನದ ಉದ್ದೇಶ ಬಿಜೆಪಿಗೆ ಸಾರ್ವಜನಿಕ ಬೆಂಬಲವನ್ನು ಹೆಚ್ಚಿಸುವುದು ಹಾಗೂ ಬಿಜೆಪಿಯು (BJP) ರಾಷ್ಟ್ರ ನಿರ್ಮಾಣದ ಉತ್ಸಾಹದೊಂದಿಗೆ ದೇಶದ ಜನರನ್ನು ಸಂಪರ್ಕಿಸುವುದು ಹಾಗೂ ಸಂಘಟಿಸುವುದು. ಪ್ರಜ್ಞಾವಂತ ೧೮ ವರ್ಷಕ್ಕಿಂತ ಮೇಲ್ಪಟ್ಟ ನಾಗರಿಕರು ೮೮೦೦೦೦೨೦೨೪  ಸಂಖ್ಯೆಗೆ ಮಿಸ್ ಕಾಲ್ ಮಾಡಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಎಂದು ಮನವಿ ಮಾಡಿದರು.

ಇದನ್ನೂ ಓದಿ :  ಪ್ರತಿಭಾವಂತ ವಿದ್ಯಾರ್ಥಿಗೆ ಕ್ರಿಕೆಟಿಗ ಕೆ.ಎಲ್‌.ರಾಹುಲ್‌ ನೆರವು

ಈ ಸಂದರ್ಭದಲ್ಲಿ ಬಿಜೆಪಿ ಓಬಿಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಈಶ್ವರ ನಾಯ್ಕ, ಜಿಲ್ಲಾ ಕಾರ್ಯದರ್ಶಿಗಳಾದ ಸುಬ್ರಾಯ ದೇವಾಡಿಗ, ಶ್ರೀಕಾಂತ ನಾಯ್ಕ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಶಿವಾನಿ ಶಾಂತಾರಾಮ, ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀನಿವಾಸ ನಾಯ್ಕ, ಶ್ರೀಧರ ನಾಯ್ಕ, ಮುಖಂಡ ರಾಜೇಶ ನಾಯ್ಕ, ಓಬಿಸಿ ಮೋರ್ಚಾ ಅಧ್ಯಕ್ಷ ಉಮೇಶ ನಾಯ್ಕ, ಸುರೇಶ ನಾಯ್ಕ, ಜಗದೀಶ ನಾಯ್ಕ, ಯಶೋಧರ ನಾಯ್ಕ, ರಾಘವೇಂದ್ರ ನಾಯ್ಕ, ಮಾರುತಿ ನಾಯ್ಕ, ಚಂದ್ರು ಗೊಂಡ, ವಿಜೇತ್ ಶೆಟ್ಟಿ, ವಿಜಯಾ ನಾಯ್ಕ, ವಿಷ್ಣು ನಾಯ್ಕ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಇದನ್ನೂ ಓದಿ : ಮರಳು ಅಭಾವಕ್ಕೆ ಬಿಜೆಪಿ ನೇರ ಕಾರಣ ಎಂದ ಕಾಂಗ್ರೆಸ್