ಭಟ್ಕಳ (Bhatkal): ನಾವು ನಮ್ಮ ಆಚಾರ, ವಿಚಾರಗಳನ್ನು ಉಳಿಸಿಕೊಳ್ಳಬೇಕು. ಮನೆಮನೆಗಳಲ್ಲಿ ದೇವರ ಧ್ಯಾನ ಆಗಬೇಕು. ಮಕ್ಕಳಿಗೆ ಉತ್ತಮ ಸಂಸ್ಕಾರ ಕೊಡಬೇಕು ಎಂದು ಸಿದ್ದಾಪುರದ ಶಿರಳಗಿಯ ಶ್ರೀ ಚೈತನ್ಯ ಶ್ರೀ ರಾಜರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಭಾರತೀ ಸ್ವಾಮೀಜಿ (Brahmanand Bharati Shri) ಹೇಳಿದರು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಅವರು ಮಣ್ಕುಳಿಯ ರಘುನಾಥ ರಸ್ತೆಯ ದೇವಡಿಗ ಕುಟುಂಬದ ಶ್ರೀ ದುರ್ಗಾದೇವಿ ನವರಾತ್ರಿ (Navaratri) ಉತ್ಸವ ಸಮಿತಿ ಏರ್ಪಡಿಸಿದ ನವರಾತ್ರಿ ಉತ್ಸವದ ಬೆಳ್ಳಿ ಮಹೋತ್ಸವ ಮತ್ತು ನವಚಂಡಿಯಾಗದ ಪೂರ್ಣಾಹುತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆಶೀರ್ವಚನ ನೀಡಿದರು. ಮನೆಮನೆಗಳಲ್ಲಿ ನಿರಂತರವಾಗಿ ದೇವರ ಭಜನೆ, ಧ್ಯಾನ ನಡೆಯಬೇಕು. ನಮ್ಮ ಸನಾತನ (sanatan) ಹಿಂದೂ ಧರ್ಮದ ಸಂಸ್ಕೃತಿ, ಆಚಾರ-ವಿಚಾರ ಉಳಿಸಿಕೊಂಡು ಹೋಗಬೇಕು ಎಂದು ಶ್ರೀಗಳು (Brahmanand Bharati Shri) ಹೇಳಿದರು.

ಇದನ್ನೂ ಓದಿ : ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಕೆ

ಮೊಬೈಲ್ ಗೀಳಿನಿಂದಾಗಿ ನಾವು ಇಂದು ಎಲ್ಲವನ್ನೂ ಮರೆಯುತ್ತಿದ್ದೇವೆ. ನಮ್ಮ ಸಂಸ್ಕೃತಿಯನ್ನು ಯಾವುದೇ ಕಾರಣಕ್ಕೂ ನಾವು ಮರೆಯಬಾರದು. ತಾಯಂದಿರು ಮಕ್ಕಳಿಗೆ ಸಣ್ಣವರಿರುವಾಗಲೇ ದೇವರಲ್ಲಿ ಭಕ್ತಿ, ಶೃದ್ಧೆಯನ್ನು ಮೂಡಿಸುವ ಕಾರ್ಯ ಮಾಡಬೇಕು. ಮಕ್ಕಳಲ್ಲಿ ಜೀವನ ಮೌಲ್ಯ ತುಂಬಬೇಕು.. ಯಾವ ಮನೆಗಳಲ್ಲಿ ಪ್ರತಿ ನಿತ್ಯ ಭಗವಂತನ ಸ್ಮರಣೆಯಾಗುತ್ತದೆಯೋ ಅಲ್ಲಿ ದೇವರು ನೆಲೆಸುತ್ತಾನೆ, ಎಲ್ಲಿ ಪದೇ ಪದೇ ಕೆಟ್ಟ ವರ್ತನೆ, ಕೆಟ್ಟ ಶಬ್ದಗಳನ್ನು ಬಳಸುತ್ತಾರೋ, ಅಲ್ಲಿ ದುಷ್ಟ ಶಕ್ತಿಗಳು ನೆಲೆಸುತ್ತವೆ ಎಂದು ಹೇಳಿದರು.

ಇದನ್ನೂ ಓದಿ : ಭಕ್ತಿಯ ಸಿಂಚನಗೈದ ಉಮೇಶ ಮುಂಡಳ್ಳಿ ಗಾಯನ

ನವರಾತ್ರಿ ಉತ್ಸವ ಸಮಿತಿಯ ಅಧ್ಯಕ್ಷ ಮಹೇಶ ದೇವಾಡಿಗ ಶ್ರೀಗಳ ಪಾದಪೂಜೆ ನೆರವೇರಿಸಿದರು. ರಾಮನಾಥ ಬಳೇಗಾರ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು. ಸಮಿತಿಯ ಉಪಾಧ್ಯಕ್ಷ ಅಣ್ಣಪ್ಪ ದೇವಡಿಗ, ಕಾರ್ಯದರ್ಶಿ ಜಯಂತ ದೇವಡಿಗ, ಖಚಾಂಚಿ ಗೋಪಾಲಕೃಷ್ಣ ದೇವಡಿಗ, ರಘುನಾಥ ರಸ್ತೆಯ ದೇವಡಿಗ ಕುಟುಂಬದ ಸರ್ವ ಸದಸ್ಯರು, ಊರ ಭಕ್ತರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಇದನ್ನೂ ಓದಿ : ಕಡವೆ ಬೇಟೆಯಾಡಿದ ಅಪರಿಚಿತರು