ಭಟ್ಕಳ (Bhatkal): ನಗರದ ಹಿರಿಯ ಕಿರಾಣಿ ವ್ಯಾಪಾರಸ್ಥರಾಗಿದ್ದ ಎಲ್ಲ ಸಮುದಾಯದವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ಅನಂತ ಶ್ರೀನಿವಾಸ ಪೈ (೯೨) ಕಳೆದ ರವಿವಾರ ಮುಂಬೈನಲ್ಲಿರುವ (Mumbai) ತಮ್ಮ ಪುತ್ರನ ಮನೆಯಲ್ಲಿ ಕೊನೆಯುಸಿರೆಳೆದಿದ್ದಾರೆ (death news).

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ತಮ್ಮ ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ಕಿರಾಣಿ ವ್ಯಾಪಾರ ಆರಂಭ ಮಾಡಿದ್ದ ಇವರು ಭಟ್ಕಳದ ಹಿಂದೂ, ಮುಸ್ಲಿಂ ಸೇರಿದಂತೆ ಎಲ್ಲರಿಗೂ ಕಿರಾಣಿ ಅನಂತ ಎಂತಲೇ ಚಿರಪರಿಚಿತರಾಗಿದ್ದರು. ಅತ್ಯಂತ ಸರಳ ಸ್ವಭಾವದಿಂದ ವ್ಯಾಪಾರ ಮಾಡುತ್ತಿದ್ದ ಇವರು ಒಂದು ಸಮಯಲ್ಲಿ ಭಟ್ಕಳದ ಪ್ರಮುಖ ಕಿರಾಣಿ ವ್ಯಾಪಾರಸ್ಥರು.

ಇದನ್ನೂ ಓದಿ : ಭಟ್ಕಳದಲ್ಲಿ ಮಿಸೆಲ್ಸ್‌ ಕಾಯಿಲೆ ಆತಂಕ

ಸುಮಾರು ಎರಡು ತಿಂಗಳ ಹಿಂದೆಯಷ್ಟೇ ಗೋವಾಕ್ಕೆ (Goa) ತೆರಳಿದ್ದ ಇವರು ಅಲ್ಲಿಂದ ಮುಂಬೈಗೆ ಹೋಗಿ ಮಗನ ಮನೆಯಲ್ಲಿ ವಾಸವಾಗಿದ್ದರು. ರವಿವಾರ ಬೆಳಿಗ್ಗೆ ವಯೋಸಹಜ ಕಾಯಿಲೆಯಿಂದ ಮೃತಪಟ್ಟಿದ್ದಾರೆ (death news). ಮೃತರಿಗೆ ನಾಲ್ವರು ಪುತ್ರರು, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗವಿದೆ.

ಇದನ್ನೂ ಓದಿ : ಭಟ್ಕಳದಲ್ಲಿ ಕರಾವಳಿ ಕಾವಲು ಪಡೆ ಅಣಕು ಕಾರ್ಯಾಚರಣೆ ಯಶಸ್ವಿ